ಬೆಂಗಳೂರು: ದರ್ಪಣ್ ಫೌಂಡೇಷನ್ ವತಿಯಿಂದ ಮಾರ್ಚ್ 18ರಂದು ಬೆಳಗ್ಗೆ 11 ಗಂಟೆಗೆ ʼಉಪನಿಷದ್; ಹಾರ್ಟ್ ಆಫ್ ದಿ ಮೈಂಡ್ ಹಾಗೂ ಮೈಂಡ್ ಆಫ್ ದಿ ಹಾರ್ಟ್ʼ ಎಂಬ ವಿಷಯದ ಕುರಿತು ಸಂವಾದ ಕಾರ್ಯಕ್ರಮವನ್ನು (Darpan Foundation) ಬಸವನಗುಡಿಯ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಸಂವಾದದಲ್ಲಿ ಈ ಬಾರಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಹಾಗೂ ಸಹಜ ಸ್ಮೃತಿ ಯೋಗದ ಸಂಸ್ಥಾಪಕರಾದ ಗುರೂಜಿ ನಂದಕಿಶೋರ್ ತಿವಾರಿ ಅವರು ಭಾಗವಹಿಸಲಿದ್ದಾರೆ.
ಇದನ್ನೂ ಓದಿ | Sanskrit Workshop: ಬೆಂಗಳೂರಿನಲ್ಲಿ ಮಾ. 26ರಂದು ಒಂದು ದಿನದ ಸಂಸ್ಕೃತ ಯುವಜನೋತ್ಸವಃ ಕಾರ್ಯಾಗಾರ
ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ಒತ್ತಡ, ಉದ್ವೇಗ ಹಾಗೂ ಇನ್ನಿತರೆ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ವಿಚಾರಗಳು ಕೆಲವೊಮ್ಮೆ ವಿಪರೀತಕ್ಕೂ ಹೋಗುತ್ತಿವೆ. ಸಂವಾದವು ಇಂತಹ ವಿಚಾರಗಳ ಕುರಿತು ಪರಿಹಾರೋಪಾಯಗಳನ್ನು ತಿಳಿಸಿಕೊಡಲಿದೆ.