ಬೆಂಗಳೂರು: ಆದಿಚುಂಚನಗಿರಿ ಮಠಕ್ಕೆ (Adichunchanagiri Mutt) ಯುಪಿಎಸ್‌ಸಿ ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ರಾಜ್ಯದ ಆಕಾಶ್ ಎ.ಎಲ್, ಚೆಲುವರಾಜು. ಆರ್, ಬಿ.ಎಸ್. ಧನುಷ್ ಕುಮಾರ್ ಹಾಗೂ ಡಾ.ವರುಣ್ ಕೆ.ಗೌಡ ಭೇಟಿ ನೀಡಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.
ಯುಪಿಎಸ್‌ಸಿ ಮುಖ್ಯ ಪರೀಕ್ಷೆಯಲ್ಲಿ ರಾಜ್ಯದ 25ಕ್ಕೂ ಹೆಚ್ಚು ಅಭ್ಯರ್ಥಿಗಳು ತೇರ್ಗಡೆಯಾಗಿ ಉತ್ತಮ ರ‍್ಯಾಂಕ್ ಪಡೆದಿದ್ದಾರೆ. ಹೀಗಾಗಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ರಾಜ್ಯದ ಅಭ್ಯರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಶ್ರೀ ನಿರ್ಮಲಾನಂದನಾಥ ಶ್ರೀಗಳು, ನಾಗರಿಕ ಸೇವೆ ಮೂಲಕ ಉನ್ನತ ಸ್ಥಾನಕ್ಕೇರಬೇಕು ಎಂದು ಮಠಕ್ಕೆ ಆಗಮಿಸಿದ್ದ ನಾಲ್ವರು ಅಭ್ಯರ್ಥಿಗಳಿಗೆ ಶುಭ ಹಾರೈಸಿದರು. ಈ ವೇಳೆ ಮುಖಂಡ ನಂಜೇಗೌಡ ನಂಜುಂಡ ಹಾಗೂ ಮಠದ ಸಿಬ್ಬಂದಿ ಉಪಸ್ಥಿತರಿದ್ದರು.
ಇದನ್ನೂ ಓದಿ | UPSC Prelims 2023: ಮೇ 28ರಂದು ಬೆಂಗಳೂರಿನಲ್ಲಿ ಬೆಳಗ್ಗೆ 6ರಿಂದಲೇ ಮೆಟ್ರೋ ಸಂಚಾರ ಆರಂಭ
ಯುಪಿಎಸ್‌ಸಿ ಪರೀಕ್ಷೆಯಲ್ಲಿ ಹಾಸನ ಜಿಲ್ಲೆ ಅರಸೀಕೆರೆಯ ಬಿ.ಎಸ್.ಧನುಷ್ ಕುಮಾರ್ 501 ರ‍್ಯಾಂಕ್, ಬೆಂಗಳೂರಿನ ರಾಜ್ ಕುಮಾರ್ ಅಕಾಡೆಮಿಯ ಅಭ್ಯರ್ಥಿಗಳಾದ ಆಕಾಶ್ ಎ.ಎಲ್. 210, ಚೆಲುವರಾಜು. ಆರ್ 238, ಡಾ.ವರುಣ್ ಕೆ.ಗೌಡ 594 ರ‍್ಯಾಂಕ್ ಪಡೆದಿದ್ದಾರೆ.