ಮಂಗಳೂರು: ವಿಪಕ್ಷ ಉಪನಾಯಕ ಯು.ಟಿ.ಖಾದರ್ ಪ್ರಯಾಣಿಸುತ್ತಿದ್ದ ಕಾರು ಬ್ರೇಕ್ ಫೇಲ್ ಆಗಿದ್ದು, ಚಾಲಕನ ಪ್ರಸಂಗಾವಧಾನತೆಯಿಂದಾಗಿ ಹೆಚ್ಚಿನ ಅನಾಹುತ ತಪ್ಪಿದೆ.
ಮಂಗಳೂರು ಹೊರವಲಯದ ಪಡೀಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಈ ಘಟನೆ ನಡೆದಿದೆ. ಮಂಗಳೂರಿನಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುತ್ತಿದ್ದ ಯು.ಟಿ.ಖಾದರ್ ಅವರ ಕಾರಿನ ಬ್ರೇಕ್ ಫೇಲ್ ಆದರೂ ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ. ಬ್ರೇಕ್ ಫ್ಲುಯಿಡ್ ಸೋರಿಕೆಯಿಂದಾಗಿ ಏಕಾಏಕಿ ಫಾರ್ಚ್ಯೂನರ್ ಕಾರು ಬ್ರೇಕ್ ಫೇಲ್ ಆಗಿದೆ. ತಕ್ಷಣ ಚಾಲಕ ಲಿಬ್ಝಿತ್ ಹ್ಯಾಂಡ್ ಬ್ರೇಕ್ ಮತ್ತು ಗೇರ್ ಬ್ಯಾಲೆನ್ಸ್ ಮೂಲಕ ಕಾರು ನಿಲ್ಲಿಸಿದ್ದಾರೆ. ನಂತರ ಬೇರೆ ಕಾರಿನ ಮೂಲಕ ಖಾದರ್ ಬಿ.ಸಿ.ರೋಡ್ಗೆ ತೆರಳಿದರು.