ಹಾವೇರಿ: ತಾಲೂಕಿನಲ್ಲಿ ಭಾರಿ ಮಳೆಗೆ (Rain News) ತುಂಗಾ ಮೇಲ್ದಂಡೆ ಯೋಜನೆ (ಯುಟಿಪಿ) ಕಾಲುವೆ ಕೊಚ್ಚಿಹೋದ ಹಿನ್ನೆಲೆಯಲ್ಲಿ 300 ಎಕರೆಯಲ್ಲಿ ಬೆಳೆದಿರುವ ಶ್ರೀಗಂಧ, ಅಡಕೆ, ಹತ್ತಿ, ಮೆಕ್ಕೆಜೋಳ ಸೇರಿ ಇನ್ನಿತರ ಬೆಳೆಗಳು ಜಲಾವೃತವಾಗಿವೆ.
ತಾಲೂಕಿನ ಗುತ್ತಲ, ಗುತ್ತಲ ತಾಂಡಾ, ನೆಗಳೂರು ಗ್ರಾಮಗಳಲ್ಲಿ ಜಮೀನಿಗೆ ನೀರು ನುಗ್ಗಿದ್ದರಿಂದ ವಿವಿಧ ಬೆಳೆ ನಷ್ಟವಾಗಿದೆ, ಕೃಷಿ ಭೂಮಿಯ ಫಲವತ್ತತೆ ಹಾಳಾಗಿದೆ ಎಂದು ರೈತರು ಅಳಲು ತೋಡಿಕೊಂಡರು. ಅಲ್ಲದೆ, ಅಧಿಕಾರಿಗಳು ಕೂಡಲೇ ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಅದೇ ರೀತಿ ನಿರಂತರ ಮಳೆಗೆ ಜಿಲ್ಲೆಯ ವಿವಿಧೆಡೆ ಅಪಾರ ಪ್ರಮಾಣದಲ್ಲಿ ಬೆಳೆಗಳಿಗೆ ಹಾನಿಯಾಗಿದೆ. ರಾಣೆಬೆನ್ನೂರು ತಾಲೂಕಿನ ಮೆಡ್ಲೇರಿ ಗ್ರಾಮದಲ್ಲಿ ಕೆರೆ ಕೋಡಿ ಬಿದ್ದು ರೈತರ ಹೊಲಗಳಿಗೆ ನೀರು ನುಗ್ಗಿದೆ.
ಇದನ್ನೂ ಓದಿ | Rain News | ವೇದಾವತಿ ನದಿ ಪ್ರವಾಹದ ವೇಳೆ ಶನಿ ದೇವಸ್ಥಾನದಲ್ಲಿ ಸಿಲುಕಿದ್ದ ಅರ್ಚಕರು ಸೇರಿ ಏಳು ಜನರ ರಕ್ಷಣೆ