ಮುಂಡಗೋಡ: 28 ವರ್ಷದ ಹಳೆಯ ಪ್ರಕರಣದಲ್ಲಿ (Old Case) ತಲೆಮರಿಸಿಕೊಂಡಿದ್ದ (Absconding) ಆರೋಪಿಯನ್ನು ಮುಂಡಗೋಡ ಠಾಣೆಯ ಪೊಲೀಸರು (Mundagoda Police Station) ಪತ್ತೆ ಹಚ್ಚಿ ಬಂಧಿಸಿರುವ ಘಟನೆ ಜರುಗಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ್ ತಾಲೂಕಿನ ಮಲ್ಲನಗೌಡ ಕರಬಸವನಗೌಡ ಪಾಟೀಲ(63) ಬಂಧಿತ ಆರೋಪಿ. ಕಳೆದ 1995ನೇ ವರ್ಷದಲ್ಲಿ ವಂಚನೆ ಪ್ರಕರಣದಲ್ಲಿ ಆರೋಪಿತನಾಗಿದ್ದ ಮಲ್ಲನಗೌಡ ತಲೆಮರೆಸಿಕೊಂಡಿದ್ದನು. ಅಲ್ಲದೆ ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳ ಹಲವು ಕಡೆ ವಂಚನೆ ಪ್ರಕರಣದಲ್ಲಿ ಬೇಕಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Job News : ಅರಣ್ಯ ಇಲಾಖೆಯಲ್ಲಿ 310 ವೀಕ್ಷಕ ಹುದ್ದೆ ಭರ್ತಿ; ಅರ್ಜಿ ಸಲ್ಲಿಕೆ ಹೇಗೆ, ಕೊನೇ ದಿನಾಂಕ ಎಂದು?
ಎಸ್ಪಿ ಡಾ. ವಿಷ್ಣುವರ್ಧನ ಎನ್, ಹೆಚ್ಚುವರಿ ಎಸ್ಪಿ ಸಿ.ಟಿ ಜಯಕುಮಾರ, ಡಿವೈಎಸ್ಪಿ ಕೆ.ಎಲ್ ಗಣೇಶ ಅವರ ನಿರ್ದೇಶನದಂತೆ ಇಲ್ಲಿನ ಸಿಪಿಐ ಬಿ ಎಸ್ ಲೋಕಾಪುರ ಪಿಎಸ್ಐಗಳಾದ ಯಲ್ಲಾಲಿಂಗ ಕುನ್ನೂರ, ಹನಮಂತ ಕುಡಗುಂಚಿ, ಸಿಬ್ಬಂದಿಗಳಾದ ಮಹ್ಮದಸಲಿಂ, ಕೊಲ್ಹಾಪುರ, ಕೋಟೇಶ್ವರ ನಾಗರವಳ್ಳಿ, ಬಸವರಾಜ ಲಮಾಣಿ ಮತ್ತು ತಿರುಪತಿ ಚೌಡಣ್ಣನವರ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.