Site icon Vistara News

Uttara Kannada News: ಯಲ್ಲಾಪುರದಲ್ಲಿ ಸಂಭ್ರಮದಿಂದ 77ನೇ ಸ್ವಾತಂತ್ರ್ಯ ದಿನಾಚರಣೆ

77th Independence Day celebrations in Yallapur

ಯಲ್ಲಾಪುರ: ಪಟ್ಟಣದ ಕಾಳಮ್ಮ ನಗರದ ತಾಲೂಕಾ ಕ್ರೀಡಾಂಗಣದಲ್ಲಿ ಮಂಗಳವಾರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು (77th Independence Day) ಸಂಭ್ರಮದಿಂದ ಆಚರಿಸಲಾಯಿತು.

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ತಹಶೀಲ್ದಾರ್‌ ಎಂ. ಗುರುರಾಜ, ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ನಮ್ಮ ಹಿರಿಯರು ಅನೇಕ ರೀತಿಯಲ್ಲಿ ತ್ಯಾಗ ಬಲಿದಾನ ಮಾಡಿ ನಮಗೆ ಸ್ವಾತಂತ್ರ್ಯವನ್ನು ಒದಗಿಸಿಕೊಟ್ಟಿದ್ದಾರೆ. ಅದರ ಸದುಪಯೋಗ ನಾವು ಪಡಿಸಿಕೊಳ್ಳಬೇಕು.

ಇಂದಿನ ಈ ಶುಭ ದಿನದಂದು ನಾವು ಸಂಕಲ್ಪ ಮಾಡಬೇಕಿದೆ. ಪ್ರಕೃತಿಯ ರಕ್ಷಣೆಯನ್ನು ಮಾಡೋಣ, ದೇಶದ ಕುರಿತಾದ ಗೌರವವನ್ನು ಹೆಚ್ಚಿಸಿಕೊಳ್ಳೋಣ ಹಾಗೂ ಇಂದಿನ ಕಾಲಮಾನದಲ್ಲಿ ಅತಿಯಾಗಿರುವ ಮೊಬೈಲ್ ಬಳಕೆಯನ್ನು ಸೀಮಿತಗೊಳಿಸೋಣ. ಇದರೊಂದಿಗೆ ನಮ್ಮ ಸುತ್ತಲಿನ ಸಮಾಜದೊಂದಿಗೆ ಬೆರೆತು ಸಾಗೋಣ ಎಂದರು.

ಇದನ್ನೂ ಓದಿ: Asia Cup: ಏಷ್ಯಾ ಕಪ್​ಗೆ ಇಂದು ಭಾರತ ತಂಡ ಪ್ರಕಟ; ಸ್ಟಾರ್​ ಆಟಗಾರರ ಕಮ್​ಬ್ಯಾಕ್​

ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್‌ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಹಿರಿಯರು ನಮಗೆ ಯಾವ ಕಾರಣಕ್ಕಾಗಿ ಸ್ವತಂತ್ರವನ್ನು ತಂದುಕೊಟ್ಟರೋ, ಆ ಉದ್ದೇಶ ಸಫಲತೆಯನ್ನು ಕಾಣಬೇಕು. ಈ ಭವ್ಯ ಭಾರತದ ರಕ್ಷಣೆ, ಸ್ವಾತಂತ್ರ್ಯದ ತಿಳುವಳಿಕೆಯನ್ನು ಮುಂದಿನ ಜನಾಂಗಕ್ಕೆ ತಲುಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ದೇಶಕಾಗಿ ಸೇವೆ ಸಲ್ಲಿಸಿದ ವೀರ ಯೋಧರನ್ನು ಸನ್ಮಾನಿಸಿ ಗೌರವಿಸಲಾಯಿತು ಹಾಗೂ ಪಟ್ಟಣ ಪಂಚಾಯಿತಿ ವತಿಯಿಂದ ನಿರ್ಮಿಸಲಾದ ಯೋಧರಿಗೆ ಗೌರವ ಸೂಚಿಸುವ ಫಲಕವನ್ನು ಶಾಸಕ ಶಿವರಾಮ ಹೆಬ್ಬಾರ್ ಅನಾವರಣಗೊಳಿಸಿದರು.‌

ಇದನ್ನೂ ಓದಿ: Independence Day 2023; ಸಚಿನ್​ರಿಂದ ​ ಕೊಹ್ಲಿವರೆಗೆ ಸ್ವಾತಂತ್ರ್ಯ ಸಂಭ್ರಮ ಹೇಗಿತ್ತು!

‌ವೇದಿಕೆಯಲ್ಲಿ ಪಂಚಾಯತ್‌ ರಾಜ್‌ ವಿಕೇಂದ್ರೀಕರಣ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ್‌, ಪ.ಪಂ. ಮುಖ್ಯಾಧಿಕಾರಿ ಸುನಿಲ್‌ ಗಾವಡೆ, ಸಿಪಿಐ ರಂಗನಾಥ ನೀಲಮ್ಮನವರ, ಪ.ಪಂ. ಮಾಜಿ ಅಧ್ಯಕ್ಷೆ ಸುನಂದಾ ದಾಸ್‌, ಮಾಜಿ ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ ಉಪಸ್ಥಿತರಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎನ್‌.ಆರ್‌. ಹೆಗಡೆ ಸ್ವಾಗತಿಸಿದರು. ದೈಹಿಕ ಪರಿವೀಕ್ಷಕ ಪ್ರಕಾಶ ತಾರಿಕೊಪ್ಪ ನಿರ್ವಹಿಸಿದರು. ಶಿಕ್ಷಣ ಸಂಯೋಜಕ ಶ್ರೀರಾಮ ಹೆಗಡೆ ವಂದಿಸಿದರು.

Exit mobile version