-ಭಾಸ್ಕರ್ ಆರ್. ಗೆಂಡ್ಲ, ಶಿರಸಿ (ಬನವಾಸಿ)
ವರದಾ ನದಿ (Varada river) ಪ್ರವಾಹದಿಂದ ಸಂಪರ್ಕ ಸಮಸ್ಯೆ ಅನುಭವಿಸುವ ಜಿಲ್ಲೆಯ ಶಿರಸಿ ತಾಲೂಕಿನ ತಾಲೂಕಿನ ಬನವಾಸಿಯಿಂದ (Banavasi) ಅನತಿ ದೂರದಲ್ಲಿರುವ ಅಜ್ಜರಣಿ-ಮುತ್ತುಗುಣಿ ಗ್ರಾಮಗಳ ಗ್ರಾಮಸ್ಥರಿಗೆ ಶಾಶ್ವತ ಸೇತುವೆ (Permanent bridge) ಮರೀಚಿಕೆಯಾಗಿದೆ.
ಹಳೆಯ ಸೇತುವೆಯನ್ನು ಕೆಡವಿ ಹಾಕಿ ಮೂರ್ನಾಲ್ಕು ವರ್ಷವಾದರೂ ನೂತನ ಸೇತುವೆ ಕಾಮಗಾರಿ ನಡೆದಿಲ್ಲ. ಇನ್ನು ವರದಾ ನದಿಯ ತಟದಲ್ಲಿರೋ ಈ ಎರಡು ಗ್ರಾಮಗಳು ನೆರೆ ಹಾವಳಿಯಿಂದ ಬೇಸತ್ತು ಹೋಗಿದ್ದಾರೆ. ಅದೆಷ್ಟೋ ವರ್ಷಗಳಿಂದ ಅನುಭವಿಸುತ್ತಿರೋ ಈ ಎರಡು ಗ್ರಾಮಗಳ ಸಮಸ್ಯೆ ಇನ್ನೂ ಬಗೆಹರಿದಿಲ್ಲ.
ಒಂದೆಡೆ ಕೆಸರೇ ತುಂಬಿಕೊಂಡ ರಸ್ತೆ, ಇನ್ನೊಂದೆಡೆ ಕಾಮಗಾರಿ ಪೂರ್ಣಗೊಳ್ಳದೆ ಇರುವ ಸೇತುವೆ. ಮತ್ತೊಂದೆಡೆ ಕಿರಿದಾದ ರಸ್ತೆಯಲ್ಲಿ ಜನರ ಪರದಾಟ… ಹೀಗೆ ಗ್ರಾಮಸ್ಥರ ಪರದಾಟ ಹೇಳತೀರದಾಗಿದೆ.
ಇದನ್ನೂ ಓದಿ: Weather Report : ಇಂದು 9 ಜಿಲ್ಲೆಗಳಲ್ಲಿ ಭರ್ಜರಿ ಮಳೆ; ಬೆಂಗಳೂರಲ್ಲಿ ಕಣ್ಣಾಮುಚ್ಚಾಲೆ
ಈ ಭಾಗದಲ್ಲಿ ಸುತ್ತಮುತ್ತ ನೂರಾರು ಮನೆಗಳಿವೆ. ಇಲ್ಲಿನ ಜನರು ಎಲ್ಲ ವಹಿವಾಟು, ದಿನಸಿ, ಆಸ್ಪತ್ರೆ, ಬಸ್ ನಿಲ್ದಾಣ ಎಲ್ಲದಕ್ಕೂ ಬನವಾಸಿಯನ್ನೇ ಅವಲಂಬಿಸಿದ್ದಾರೆ. ಈ ಊರಿನಿಂದ ಬನವಾಸಿಗೆ ಬರುವ ಮಧ್ಯೆ ಚಿಕ್ಕದೊಂದು ಸೇತುವೆ ಇತ್ತು. ಆದರೆ ಅದನ್ನು ಈಗ ಕೆಡವಿದ್ದಾರೆ. ತಗ್ಗಿನಲ್ಲಿರುವ ಈ ಸೇತುವೆಯನ್ನು ಪುನರ್ ನಿರ್ಮಾಣ ಮಾಡುವ ಜತೆಗೆ ಎತ್ತರಿಸಬೇಕು ಎಂಬುದು ಇಲ್ಲಿನ ಜನರ ದಶಕಗಳ ಹಿಂದಿನ ಬೇಡಿಕೆಯಾಗಿತ್ತು.
ಇನ್ನು ವರದಾ ನದಿಗೆ ಪ್ರವಾಹ ಬಂದರೆ ಈ ಸೇತುವೆ ಮುಳುಗುತ್ತದೆ ಸುತ್ತಲಿನ ಪ್ರದೇಶಗಳ ಕೃಷಿ ಭೂಮಿ ಜಲಾವೃತವಾಗುತ್ತದೆ, ಇದರಿಂದ ಬನವಾಸಿ ಮತ್ತು ಅಜ್ಜರಣಿ ನಡುವಿನ ಸಂಪರ್ಕ ಕೊಂಡಿ ಕಳಚುತ್ತದೆ. ಪ್ರವಾಹ ಇಳಿಮುಖವಾಗದಿದ್ದರೆ ತಿಂಗಳುಗಟ್ಟಲೇ ರಸ್ತೆಯ ಮೇಲೆ ನಾಲ್ಕೈದು ಅಡಿ ನೀರು ನಿಂತಿರುತ್ತದೆ. ಹೀಗಾಗಿ ಇಲ್ಲಿ ಶಾಶ್ವತ ಸೇತುವೆ ನಿರ್ವಿುಸಬೇಕು ಎಂದು ಜನರು ಜನಪ್ರತಿನಿಧಿಗಳನ್ನು ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ ಇನ್ನೂ ಕೂಡ ಇಲ್ಲಿನ ಗ್ರಾಮಸ್ಥರಿಗೆ ಮಾತ್ರ ಶಾಶ್ವತ ಪರಿಹಾರ ದೊರೆತಿಲ್ಲ.
ಇದನ್ನೂ ಓದಿ: Terrorists Killed: ಕಾಶ್ಮೀರದಲ್ಲಿ ಇಬ್ಬರು ಉಗ್ರರ ಉಡೀಸ್; 4 ಎಕೆ 47 ವಶಕ್ಕೆ, ಭಾರಿ ಸಂಚು ಬಯಲು
ಇಷ್ಟೆಲ್ಲ ಸಮಸ್ಯೆ ಅನುಭವಿಸುತ್ತಿರೋ ಈ ಎರಡು ಗ್ರಾಮಸ್ಥರ ಒತ್ತಾಯಕ್ಕೆ ಮಣಿದ ಅಂದಿನ ಬಿಜೆಪಿ ಸರ್ಕಾರ ಸ್ಪಂದಿಸಿ ಹೊಸ ಸೇತುವೆ ನಿರ್ವಿುಸಲು 2018ರಲ್ಲೇ ಆದೇಶ ನೀಡಿತ್ತು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಡಿಯಲ್ಲಿ ಈ ಸೇತುವೆ ಕಾಮಗಾರಿ ನಡೆಸುವಂತೆ ಸೂಚಿಸುವ ಜತೆ ಈಗಾಗಲೇ 1.8 ಕೋಟಿ ರೂ. ಮೊತ್ತಕ್ಕೆ ಗುತ್ತಿಗೆ ಕೂಡ ನೀಡಲಾಗಿತ್ತು.
ಅಲ್ಲದೆ ಶಾಸಕ ಶಿವರಾಂ ಹೆಬ್ಬಾರ್ ಕೂಡ ಶಿಲನ್ಯಾಸ ಕಾರ್ಯ ಮಾಡಿದ್ರು. ಆದರೆ, ಇಂದಿಗೂ ಕಾಮಗಾರಿ ಕೈಗೊಂಡಿಲ್ಲ. ವರದೆಗೆ ನೆರೆ ಬಂದು ಸೇತುವೆ ಮುಳುಗಿದರೆ, ಅಜ್ಜರಣಿ, ಮತ್ತುಗುಣಿಯ 500 ಕ್ಕೂ ಹೆಚ್ಚು ಜನರಿಗೆ ತೊಂದರೆಯಾಗುತ್ತದೆ. ಅರ್ಧ ಕಿ.ಮೀ ದೂರದ ಬನವಾಸಿ ತಲುಪಲು ನಾಲ್ಕೈದು ಕಿ.ಮೀ. ಸುತ್ತು ಹಾಕಿ, ಗುಡ್ನಾಪುರ ಮಾರ್ಗವಾಗಿ ಬರಬೇಕಾಗುತ್ತದೆ.
ಒಟ್ಟಾರೆ ಅಜ್ಜರಣಿ ಹಾಗೂ ಮುತ್ತುಗುಣಿ ಗ್ರಾಮಸ್ಥರಿಗೆ ಮಳೆಗಾಲದಲ್ಲಿ ಸೂಕ್ತ ರಸ್ತೆ ಸಂಪರ್ಕವಿಲ್ಲದೆ ಕಂಗಾಲಾಗಿದ್ದಾರೆ. ನೆರೆ ಬಂದರೆ ಮುಳುಗಡೆ ಅಗುವ ಸೇತುವೆ ಒಂದೆಡೆ ಆದರೆ, ಅಪಘಾತಕ್ಕೆ ದಾರಿ ಮಾಡಿ ಕೊಡುವ ಕಿರಿದಾದ ರಸ್ತೆ ಮತ್ತೊಂದು ಕಡೆಯಾಗಿದೆ. ಇನ್ನು ಮಳೆಗಾಲ ಆರಂಭಗೊಂಡಿದ್ದು, ವರದಾ ನದಿಯ ಪ್ರವಾಹಕ್ಕೆ ಇಲ್ಲಿನ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಇದನ್ನೂ ಓದಿ: Bangalore Terror : ಬೆಂಗಳೂರು ಸ್ಫೋಟಕ್ಕೆ ಸ್ಕೆಚ್ ಹಾಕಿದ್ದ ಶಂಕಿತ ಉಗ್ರರು; ಬಂಧಿತರಿಂದ ಭಯಾನಕ ವಿವರ ಬಹಿರಂಗ
ಶಾಲೆಗೆ ಹೋಗುವ ಮಕ್ಕಳು ಮತ್ತು ನಿತ್ಯ ಕೆಲಸಕ್ಕೆ ಹೋಗುವವರಿಗೆ ತುಂಬಾ ತೊಂದರೆಯಾಗುತ್ತದೆ. ಆ ಮಾರ್ಗದಲ್ಲಿರುವ ರಸ್ತೆ ಕಿರಿದಾಗಿದ್ದು, ಒಂದು ಬೈಕ್ ಬಂದರೂ ಇನ್ನೊಂದು ವಾಹನ ಹೋಗೋದು ಕಷ್ಟ. ಈ ರಸ್ತೆಯಲ್ಲಿ ಹಲವಾರು ಅಪಘಾತಗಳು ಸಂಭವಿಸಿವೆ.
-ಇಂದೂದರ ಗೌಡ, ಅಜ್ಜರಣಿ ಗ್ರಾಮಸ್ಥ