ಅಂಕೋಲಾ: ಮೀನುಗಾರಿಕೆಗೆ (Fishery) ತೆರಳಿದ್ದ ಬೋಟ್‌ವೊಂದು (Boat) ಭಾರಿ ಪ್ರಮಾಣದ ಗಾಳಿಯ ಹೊಡೆತಕ್ಕೆ ಸಿಲುಕಿ ಮುಳುಗಡೆಯಾದ (Capsized) ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆದಿದೆ.
ತಾಲೂಕಿನ ಬೆಳಂಬಾರ ವ್ಯಾಪ್ತಿಯ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಚಂದ್ರಾವತಿ ಸುಭಾಷ್ ಖಾರ್ವಿ ಎಂಬುವವರಿಗೆ ಸೇರಿದ್ದ ಬೋಟು ಇದಾಗಿದ್ದು, ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಬೋಟು ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಏಕಾಏಕಿ ಜೋರಾಗಿ ಗಾಳಿ ಬೀಸಿದ ಪರಿಣಾಮ ಆಳೆತ್ತರದ ಅಲೆಗಳು ಎದ್ದಿದ್ದು, ಬೋಟಿನ ಫೈಬರ್‌ಗೆ ಹಾನಿಯಾಗಿದೆ. ಇದರಿಂದ ನೀರು ಬೋಟ್‌ನೊಳಕ್ಕೆ ನುಗ್ಗಿದ್ದು, ಕೂಡಲೇ ರಕ್ಷಣೆಗಾಗಿ ಬೋಟಿನಿಂದ ಸಂದೇಶ ನೀಡಲಾಗಿತ್ತು.
ಇದನ್ನೂ ಓದಿ: IPL 2023: ಗೆಳೆಯ ಕೊಹ್ಲಿಗೆ ಖಡಕ್ ಎಚ್ಚರಿಕೆ ನೀಡಿದ ‘ಯುನಿವರ್ಸ್ ಬಾಸ್’ ಗೇಲ್; ಏನದು?
12ಜನ ಮೀನುಗಾರರ ರಕ್ಷಣೆ
ಈ ವೇಳೆ ಸಮೀಪದಲ್ಲೇ ಮೀನುಗಾರಿಕೆಯಲ್ಲಿ ತೊಡಗಿದ್ದ ಜೈಶ್ರೀರಾಮ್ ಹೆಸರಿನ ಮೀನುಗಾರಿಕಾ ಬೋಟ್ ಸ್ಥಳಕ್ಕೆ ತೆರಳಿ ಮುಳುಗುತ್ತಿದ್ದ ಬೋಟ್‌ನಿಂದ 12 ಮಂದಿ ಮೀನುಗಾರರನ್ನು ರಕ್ಷಣೆ ಮಾಡಿದೆ.
ಅಂದಾಜು 1 ಕೋಟಿ ನಷ್ಟ
ಬೋಟ್ ಮುಳುಗಿದ್ದರಿಂದ ಎಂಜಿನ್, ಮೀನುಗಾರಿಕಾ ಬಲೆ, ಬೋಟು ಸೇರಿದಂತೆ ಒಂದು ಕೋಟಿಗೂ ಅಧಿಕ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.