Site icon Vistara News

Uttara Kannada News: ಬ್ಯಾಗ್‌ ಕಸಿದು ಪರಾರಿಯಾಗಿದ್ದ ಆರೋಪಿಯ ಬಂಧನ

Bag thief arrested Cash seized at Karwar

ಕಾರವಾರ: ವ್ಯಕ್ತಿಯೊಬ್ಬನ ಕೈಯಲ್ಲಿದ್ದ ಹಣದ ಬ್ಯಾಗನ್ನು (Cash Bag) ಕಿತ್ತುಕೊಂಡು ಪರಾರಿಯಾಗಿದ್ದ (Escape) ಆರೋಪಿಯನ್ನು ಕಾರವಾರ ನಗರ ಠಾಣಾ ಪೊಲೀಸರು (Police) 24 ಗಂಟೆಯೊಳಗೆ ಬಂಧಿಸಿರುವ (Arrest) ಘಟನೆ ಜರುಗಿದೆ.

ಹುಬ್ಬಳ್ಳಿ ಮೂಲದ ನಾಸೀರ್ ಹುಸೇನ್ ಎಂಬಾತ ಮಂಗಳವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ 66ರ ಹಳೆಯ ಮೀನು ಮಾರುಕಟ್ಟೆ ಎದುರು ಮೂತ್ರಕ್ಕೆ ತೆರಳುವಾಗ ಅಪರಿಚಿತ ವ್ಯಕ್ತಿಯೊಬ್ಬ ಆಗಮಿಸಿ ಬ್ಯಾಗ್ ಕಸಿದು ಪರಾರಿಯಾಗಿದ್ದ. ಬಟ್ಟೆ ವ್ಯಾಪಾರ ಮಾಡುವ ನಾಸೀರ್ ಸುಮಾರು 50 ಸಾವಿರಕ್ಕೂ ಅಧಿಕ ಹಣವನ್ನು ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದ ಎನ್ನಲಾಗಿದ್ದು, ಬೈಕ್‌ನಲ್ಲಿ ಬಂದ ಆರೋಪಿ ಹಣದ ಬ್ಯಾಗ್ ಕದ್ದು ಪರಾರಿಯಾಗಿದ್ದನು.

ತಕ್ಷಣ ತನ್ನ ಅಂಗಡಿಯಲ್ಲಿ ಕೆಲಸ ಮಾಡುವ ಲಾಲಮಿಯಾ ಅಬ್ದುಲ್ ಎಂಬಾತನನ್ನು ಸ್ಥಳಕ್ಕೆ ಕರೆಯಿಸಿ, ತಾವೂ ಬೈಕ್‌ನಲ್ಲಿ ನಗರದಲ್ಲೆಲ್ಲಾ ಸುತ್ತಾಡಿ ಆರೋಪಿಗಾಗಿ ಹುಡುಕಾಟ ನಡೆಸಿದರೂ ಸಿಗದ ಕಾರಣ ನಗರ ಠಾಣೆಗೆ ದೂರು ನೀಡಿದ್ದರು. ಪ್ರಕರಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ್, ಡಿವೈಎಸ್‌ಪಿ ವ್ಯಾಲಂಟೈನ್ ಡಿಸೋಜಾ ಅವರ ಮಾರ್ಗದರ್ಶನದಲ್ಲಿ ಕಾರವಾರ ನಗರ ಠಾಣೆ ಇನ್ಸಪೆಕ್ಟರ್ ಸಿದ್ದಪ್ಪ ಬಿಳಗಿ ನೇತೃತ್ವದ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ನಗರದ ಕೋಣೆವಾಡಾದ ನಿವಾಸಿ ಹಜರತ್ ಅಲಿ ಎಂಬುವವನ್ನು ಬಂಧಿಸಿ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: Virat Kohli: ರಜೆಯಲ್ಲಿದ್ದರೂ ಓಟ ಮಾತ್ರ ನಿರಂತರ; ಕೊಹ್ಲಿಯ ಈ ಮಾತಿನ ರಹಸ್ಯವೇನು?

ಕಾರ್ಯಾಚರಣೆಯಲ್ಲಿ ಪಿಎಸ್‌ಐಗಳಾದ ಕುಮಾರ್ ಕಾಂಬ್ಳೆ, ವಿಶ್ವನಾಥ ನಿಂಗೊಳ್ಳಿ, ಸಿಬ್ಬಂದಿ ರಾಜೇಶ್ ನಾಯಕ, ಸೂರಜ್ ಕೊಠಾರಕರ್, ನಾಮದೇವ ನಾಂದ್ರೆ, ಮಗ್ದುಮ್ ಪತ್ತೆಖಾನ್, ರಮೇಶ್ ನಿಂಬರಗಿ, ಮಹೇಶ್ ನಾಯ್ಕ ಪಾಲ್ಗೊಂಡಿದ್ದರು. ದೂರು ನೀಡಿದ ಕೆಲವೇ ಘಂಟೆಯಲ್ಲಿ ಆರೋಪಿಯನ್ನು ಬಂಧಿಸಿರುವ ಕಾರವಾರ ನಗರ ಠಾಣಾ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಕೂಡ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Exit mobile version