ಜೋಯಿಡಾ: ತಾಲೂಕಿನ ಫಣಸೋಲಿ ಅರಣ್ಯ ವ್ಯಾಪ್ತಿಯಲ್ಲಿ ಉರುಳು ಹಾಕಿ ಜಿಂಕೆಯೊಂದನ್ನು (Deer) ಹತ್ಯೆ ಮಾಡಿ ಮಾಂಸ ಮತ್ತು ಚರ್ಮ ಬೇರ್ಪಡಿಸುವ ಸಂದರ್ಭದಲ್ಲಿ ಫಣಸೋಲಿ ಅರಣ್ಯಾಧಿಕಾರಿಗಳು ದಾಳಿ (Attack) ನಡೆಸಿ 3 ಆರೋಪಿಗಳನ್ನು (Accused) ಬಂಧಿಸಿದ್ದು, ನಾಲ್ವರು ಪರಾರಿಯಾಗಿದ್ದಾರೆ.
ಜಿಂಕೆಯೊಂದನ್ನು ಕೊಂದು ತಲೆ, ಚರ್ಮ, ಮಾಂಸ ಬೇರ್ಪಡಿಸುತ್ತಿದ್ದ ವೇಳೆ ಫಣಸೋಲಿ ಅರಣ್ಯ ಸಿಬ್ಬಂದಿಗಳು ದಾಳಿ ಮಾಡಿ ವಿಷ್ಣು ಕಲ್ಮೋಕರ, ಕೇಶವ ಹರಿಜನ, ಸುರೇಶ ಮುಂದಾಯಕರ ಎನ್ನುವವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: Gold rate today : ಬೆಂಗಳೂರಿನಲ್ಲಿ ಬಂಗಾರದ ದರ 100 ರೂ. ಏರಿಕೆ, ಬೆಳ್ಳಿ ಯಥಾಸ್ಥಿತಿ
ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, 25.72 ಕೆಜಿ ತಲೆ ಮತ್ತು ಮಾಂಸ ಹಾಗೂ 11 ಕೆಜಿ ಚರ್ಮ ಮತ್ತು ಕತ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.
ಕೃಷ್ಣ ಕಲ್ಮೋಲಕರ, ಮಂಜುನಾಥ ಕಲ್ಮೋಲಕರ, ಉಮಾಕಾಂತ ಧರಣಿ, ಉಮೇಶ ಧರಣಿ ಎನ್ನುವವರು ನಾಪತ್ತೆಯಾಗಿದ್ದಾರೆ. ಪ್ರಕರಣ ದಾಖಲಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ.
ಇದನ್ನೂ ಓದಿ: Viral Video : ಅಪ್ಪ ನಾನೀಗ ಡಾಕ್ಟರ್ ಎಂದ ಮಗಳು! ಭಾವುಕರಾದ ತಂದೆ!
ಕಾರ್ಯಾಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ನೀಲೇಶ್ ಶಿಂಧೆ, ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಎಸಿಎಫ್ ಅಮರಾಕ್ಷರ ಎಂ. ಮಾರ್ಗದರ್ಶನದಲ್ಲಿ ಫಣಸೋಲಿ ವಲಯ ಅರಣ್ಯಾಧಿಕಾರಿ ರಶ್ಮಿ ದೇಸಾಯಿ, ಸಿಬ್ಬಂದಿಗಳಾದ ಅಣ್ಣಪ್ಪ ಮುದಕಣ್ಣವರ್, ಶೇಖರ್ ಪಮ್ಮಾರ, ಪರಮೇಶ್ವರ ಪಾಟೀಲ್, ಹೈದರ್ ಅಲಿ ಮತ್ತು ಇತರರು ಪಾಲ್ಗೊಂಡಿದ್ದರು.