ಕಾರವಾರ: ಜಲ ಜೀವನ್ ಮಿಷನ್ (Jal Jeevan Mission) ಹಾಗೂ ಸ್ವಚ್ಛ ಭಾರತ್ ಅಭಿಯಾನ (Swachh Bharath Abhiyan) ಕುರಿತು ಜನರಲ್ಲಿ ಜಾಗೃತಿ (Awareness) ಮೂಡಿಸಲು ಕಿರುಚಿತ್ರ ಪ್ರದರ್ಶನ ಹಾಗೂ ಬೀದಿ ನಾಟಕದಂತಹ ಚಟುವಟಿಕೆಗಳು ಹೆಚ್ಚು ಸಹಕಾರಿಯಾಗಲಿದ್ದು, ಜಿಲ್ಲೆಯ ಜನರು ಈ ಮೂಲಕ ಹೆಚ್ಚು ಹೆಚ್ಚು ಜಾಗೃತಿ ಪಡೆದು ಯೋಜನೆಯ ಅನುಷ್ಠಾನದಲ್ಲಿ ಸಹಭಾಗಿತ್ವ ನೀಡಬೇಕು ಎಂದು ಜಿ.ಪಂ. ಸಿಇಒ ಈಶ್ವರ ಕಾಂದೂ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಸ್ವಚ್ಛ ಭಾರತ್ ಅಭಿಯಾನ ಗ್ರಾಮೀಣ ಹಾಗೂ ಸ್ಕೊಡವೆಸ್ ಸಂಸ್ಥೆ ಸಹಯೋಗದಲ್ಲಿ ಜಲ ಜೀವನ್ ಮಿಷನ್ ಯೋಜನೆಯ ಜಾಗೃತಿಗಾಗಿ ಗುರುವಾರ ಹಮ್ಮಿಕೊಂಡಿದ್ದ ಮಾಹಿತಿ ಪ್ರಚಾರ, ಕಿರುಚಿತ್ರ ಪ್ರದರ್ಶನ ವಾಹನ ಹಾಗೂ ಬೀದಿ ನಾಟಕ ಪ್ರದರ್ಶನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಇದನ್ನೂ ಓದಿ: iPhone: ಇನ್ನು 11 ತಿಂಗಳಲ್ಲಿ ಬೆಂಗಳೂರಲ್ಲೇ ಐಫೋನ್ ಉತ್ಪಾದನೆ: ವರ್ಷಕ್ಕೆ 2 ಕೋಟಿ ಮೊಬೈಲ್ ತಯಾರಿ!
ಜಿಲ್ಲೆಯಲ್ಲಿ ಕಾರ್ಯಾತ್ಮಕ ನಳ ಸಂಪರ್ಕದ ಮೂಲಕ ಶುದ್ಧ ಕುಡಿಯುವ ನೀರಿನ ಪೂರೈಕೆಗಾಗಿ ಜಲ ಜೀವನ್ ಮಿಷನ್ ಯೋಜನೆ ಹಾಗೂ ಶುಚಿತ್ವದ ಕುರಿತು ಸ್ವಚ್ಛ ಭಾರತ್ ಅಭಿಯಾನ ಗ್ರಾಮೀಣ ಯೋಜನೆ ಕಾರ್ಯನಿರ್ವಹಣೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಈ ಎಲ್ಲಾ ಚಟುವಟಿಕೆಗಳ ಕುರಿತು ಸ್ಕೊಡವೆಸ್ ಸಂಸ್ಥೆ ವಿವಿಧ ಮಾಹಿತಿ ಶಿಕ್ಷಣ ಸಂವಹನ ಚಟುವಟಿಕೆಗಳು ಹಾಗೂ ತರಬೇತಿ ಕಾರ್ಯಕ್ರಮಗಳನ್ನು ನೀಡುತ್ತಿದ್ದು, ಅವು ಯಶಸ್ವಿಯಾಗಲಿ ಎಂದು ಹಾರೈಸಿದರು.
ಇದನ್ನೂ ಓದಿ: Bengaluru rain : ಬೆಂಗಳೂರಿನ ಪ್ರವಾಹ ತಪ್ಪಿಸಲು 2,800 ಕೋಟಿ ರೂ.ಗಳ ಮಾಸ್ಟರ್ ಪ್ಲಾನ್! ಏನು-ಹೇಗೆ?
\ಜಿಲ್ಲಾ ಪಂಚಾಯಿತಿ ಆಡಳಿತ ಹಾಗೂ ಅಭಿವೃದ್ಧಿ ಶಾಖೆಯ ಉಪ ಕಾರ್ಯದರ್ಶಿಗಳಾದ ನಾಗೇಶ್ ರಾಯ್ಕರ್, ಡಿ.ಎಂ ಜಕ್ಕಪ್ಪಗೋಳ, ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ್, ಮುಖ್ಯ ಲೆಕ್ಕಾಧಿಕಾರಿ ಸತೀಶ ಪವಾರ, ಅಭಿವೃದ್ಧಿ ಶಾಖೆಯ ಸಹಾಯಕ ಕಾರ್ಯದರ್ಶಿ ಜೆ.ಆರ್. ಭಟ್ಟ, ಸ್ವಚ್ಛ ಭಾರತ್ ಅಭಿಯಾನ ಸಮನ್ವಯಾಧಿಕಾರಿ ಸೂರ್ಯನಾರಾಯಣ ಭಟ್, ಜೆಜೆಎಂನ ಜಿಲ್ಲಾ ಯೋಜನಾ ವ್ಯವಸ್ಥಾಪಕ ವೆಂಕಟೇಶ್ ನಾಯ್ಕ್, ಸ್ಕೊಡವೆಸ್ ಸಂಸ್ಥೆಯ ಕಾರ್ಯಕ್ರಮಾಧಿಕಾರಿ ರಿಯಾಜ್ ಸಾಗರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.