ಮುಂಡಗೋಡ: ಕರ್ತವ್ಯ ಲೋಪದ (Dereliction of duty) ಹಿನ್ನೆಲೆಯಲ್ಲಿ ಇಲ್ಲಿನ ಸರ್ಕಾರಿ ಮರಮುಟ್ಟುಗಳ ಸಂಗ್ರಹಾಲಯದ 5 ಉಪ ವಲಯ ಅರಣ್ಯಧಿಕಾರಿಗಳನ್ನು (Forest officers) ಸರ್ಕಾರಿ ಸೇವೆಯಿಂದ ಅಮಾನತು (Suspended) ಮಾಡಿ, ಶಿಸ್ತು ಪ್ರಾಧಿಕಾರ ಕೆನರಾ ವೃತದ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ ವಸಂತ ರೆಡ್ಡಿ ಆದೇಶ ಹೊರಡಿಸಿದ್ದಾರೆ.
ಜೂನ್ 9ರಂದು ಶಿರಸಿ ತಾಲೂಕಿನ ಎಕ್ಕಂಬಿ ಚಕ್ ಪೋಸ್ಟ್‌ನಲ್ಲಿ ಎರಡು ಲಾರಿಯಲ್ಲಿ ವಿವಿಧ ಜಾತಿಯ ನಾಟಾಗಳ ಮಧ್ಯೆ ಅನಧಿಕೃತ 22 ಸಾಗವಾನಿ ನಾಟಾಗಳು ಪತ್ತೆಯಾಗಿದ್ದವು. ಈ ನಾಟಾಗಳು ಪಟ್ಟಣದ ಟಿಂಬರ್ ಡಿಪೋದಿಂದ ಹೊಗಿದ್ದವು ಎಂಬುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.
ಇದನ್ನೂ ಓದಿ: NEET Result 2023 : ನೀಟ್ ಫಲಿತಾಂಶದ ಬೆನ್ನಲ್ಲೇ ಸಿಹಿ ಸುದ್ದಿ; ರಾಜ್ಯದ ಮೆಡಿಕಲ್ ಸೀಟುಗಳ ಸಂಖ್ಯೆ ಹೆಚ್ಚಳ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲ್ಲಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರ ವರದಿ ಅನುಸಾರ ಇಲ್ಲಿನ ಉಪವಲಯ ಅರಣ್ಯಧಿಕಾರಿಗಳ ಕರ್ತವ್ಯ ಲೋಪ ಮತ್ತು ಕರ್ತವ್ಯ ನಿರ್ವಹಿಸಲು ವಿಫಲವಾಗಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ಉಪವಲಯ ಅರಣ್ಯಧಿಕಾರಿಗಳಾದ ಸುರೇಶ ವಡ್ಡರ, ಮಾರುತಿ ಸೋರಗಾಂವಿ, ಮಹೇಶ ಬೋರಕರ್, ಹನಮಂತ ಬಡ್ಡಿವಡ್ಡರ, ಗುರುಚಂದ್ರ ಎಂ ಬ್ಯಾಳಿಯವರ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಅವರು ನೀಡಿದ ಆದೇಶ ಪ್ರತಿಯಲ್ಲಿ ತಿಳಿಸಿದ್ದಾರೆ.