Site icon Vistara News

Uttara Kannada News: ಶಿರಸಿಯಲ್ಲಿ ಅಡ್ಡಾದಿಡ್ಡಿ ಕಾರು ಓಡಿಸಿದ ಚಾಲಕನ ಬಂಧನ

Driver arrested for erratic driving in Shirsi

ಶಿರಸಿ: ರಸ್ತೆಯಲ್ಲಿ ಅಡ್ಡಾದಿಡ್ಡಿ ಕಾರು ಚಾಲನೆ (Car driving) ಮಾಡಿ ಸಾರ್ವಜನಿಕರಿಗೆ (Public) ಭಯ ಹುಟ್ಟಿಸಿ ಹುಚ್ಚಾಟ ನಡೆಸಿದ ಯುವಕನನ್ನು ಪೊಲೀಸರು ಬಂಧಿಸಿದ ಘಟನೆ ಶಿರಸಿಯಲ್ಲಿ ನಡೆದಿದೆ.

ಜೂ.23ರ ತಡರಾತ್ರಿಯಲ್ಲಿ ನಗರದ ಶಿವಾಜಿ ಸರ್ಕಲ್ ಬಳಿ ತನ್ನ ರಿಡ್ಜ್ ಕಾರಿನಲ್ಲಿ ವೀಲಿಂಗ್ ಹಾಗೂ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿ ಸಾರ್ವಜನಿಕರಿಗೆ ಭಯ ಹುಟ್ಟಿಸಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶಿರಸಿಯ ಕೆ.ಎಚ್.ಬಿ ಕಾಲೋನಿಯ ಮಣಿಕಂಠ ಎಂಬುವವನೇ ರಸ್ತೆಯಲ್ಲಿ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ ವ್ಯಕ್ತಿಯಾಗಿದ್ದು, ಈತನನ್ನು ಪೊಲೀಸರು ಬಂಧಿಸಿ, ಕಾರನ್ನು ಕೂಡ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: World Cup 2023 : ವಿಶ್ವ ಕಪ್​ ಮೊದಲು ಬಲಿಷ್ಠ ತಂಡದೊಂದಿಗೆ ಏಕ ದಿನ ಸರಣಿ ಆಯೋಜಿಸಿದ ಬಿಸಿಸಿಐ

ಇನ್ನು ನಿಷ್ಕಾಳಜಿಯಿಂದ ವಾಹನ ಓಡಿಸುವ ಚಾಲಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಇಲಾಖೆ ಖಡಕ್ ಸೂಚನೆ ನೀಡಿದೆ.

Exit mobile version