Site icon Vistara News

Uttara Kannada News: ಪ್ರತಿಯೊಬ್ಬರೂ ಗಿಡ ನೆಡುವ ಹವ್ಯಾಸ ರೂಢಿಸಿಕೊಳ್ಳಿ: ಶ್ರೀನಿವಾಸ್ ಹೆಬ್ಬಾರ್

Distributed the saplings at the Sasya Santhe program for the public held at Shirasi

ಶಿರಸಿ: ಇಲ್ಲಿನ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ಸಂಸ್ಥೆ ವತಿಯಿಂದ ಸಾರ್ವಜನಿಕರಿಗಾಗಿ (Public) ಹಮ್ಮಿಕೊಳ್ಳಲಾಗಿದ್ದ ಸಸ್ಯ ಸಂತೆ ಕಾರ್ಯಕ್ರಮವನ್ನು ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಹಾಗೂ ವಿಸ್ತಾರ ನ್ಯೂಸ್ ನಿರ್ದೇಶಕ ಶ್ರೀನಿವಾಸ್ ಹೆಬ್ಬಾರ್ ಉದ್ಘಾಟಿಸಿದರು.

ಮಗುವಿಗೆ ಸಸ್ಯ ವಿತರಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶ್ರೀನಿವಾಸ್ ಹೆಬ್ಬಾರ್, ಕದಂಬ ಸಂಸ್ಥೆಯು ಸಸ್ಯ ಸಂತೆಯನ್ನು ಕಳೆದ ಹದಿನಾಲ್ಕು ವರ್ಷದಿಂದಲೂ ಮಾಡುತ್ತಾ ಬಂದಿದೆ. ಈ ಸಂಸ್ಥೆ ಹೆಸರು ರಾಜ್ಯದಲ್ಲಿ ಮಾತ್ರವಲ್ಲ, ಹಲವು ದೇಶಗಳಲ್ಲೂ ಇದೆ ಎಂದರು.

ಇದನ್ನೂ ಓದಿ: Ashes 2023 : ಖವಾಜ, ವಾರ್ನರ್​ಗೆ ಅವಮಾನ; ಎಂಸಿಸಿಯ ಮೂವರು ಸದಸ್ಯರು ಅಮಾನತು

ಪ್ರತಿಯೊಬ್ಬರೂ ಗಿಡ ನೆಡುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಮಕ್ಕಳ ಹೆಸರಿನಲ್ಲಿ ಗಿಡ ನೆಡುವುದರ ಜತೆಗೆ ಕುಲ ದೇವರು, ಕುಲ ಗುರುವಿನ ಹೆಸರಿನಲ್ಲೂ ಗಿಡ ನೆಟ್ಟು‌ ಸಂರಕ್ಷಿಸಿ, ಪರಿಸರದ ಉಳಿವಿಗೆ ಕಾರಣ ಆಗಬೇಕು ಎಂದು ತಿಳಿಸಿದರು.

ಜುಲೈ ತಿಂಗಳು ಬಂದರೂ ಕೂಡ ವಾಡಿಕೆಯಷ್ಟು ಮಳೆಯಾಗಿಲ್ಲ. ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಕೆರೆಗಳೆಲ್ಲ ಬತ್ತಿ ಹೋಗಿವೆ. ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವ ಪರಿಸ್ಥಿತಿ ಎದುರಾಗಿದೆ. ಹಿಂದಿನ ಕಾಲದಲ್ಲಿ ಕೆರೆಗಳನ್ನು ನಿರ್ಮಾಣ ಮಾಡಿದ್ದರು. ಆದರೆ ಇದೀಗ ಕೆರೆಗಳು ಹೂಳು ತುಂಬಿ ಮುಚ್ಚಿ ಹೋಗುತ್ತಿವೆ. ಕೆಲವರು ಅತಿಕ್ರಮಣ ಮಾಡಿಕೊಂಡಿದ್ದಾರೆ. ಪ್ರತಿಯೊಬ್ಬರೂ ಕೂಡ ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ. ತಮ್ಮೂರಿನ ಕೆರೆಗಳ ಬಗ್ಗೆ ಕಾಳಜಿ ವಹಿಸಿ, ನೀರನ್ನು ಉಳಿಸಿ, ಸಸ್ಯಗಳನ್ನು ಬೆಳೆಸಿ ಎಂದು ಸಲಹೆ ನೀಡಿದರು.

ಇದನ್ನೂ ಓದಿ: Amitabh Bachchan : 1982ರಿಂದ ಒಂದು ಭಾನುವಾರವೂ ತಪ್ಪಿಲ್ಲ ಅಮಿತಾಭ್‌ರ ಈ ಪದ್ಧತಿ; ರೀಲ್ಸ್‌ ಹಂಚಿಕೊಂಡ ನಟ

ಸಂಸ್ಥೆ ಅಧ್ಯಕ್ಷ ಶಂಭುಲಿಂಗ‌ ಹೆಗಡೆ ನಿಡಗೋಡ‌ ಮಾತನಾಡಿ, ಹೆಬ್ಬಾರರ ಕೈಲಿ ಉದ್ಘಾಟನೆ ಮಾಡಿಸಲು ನಮಗೆ ಖುಷಿ ಇದೆ. ರೈತರಿಗೆ ಅತ್ಯಂತ ಗುಣಮಟ್ಟದ ಭರವಸೆಯ ತಳಿ ಕೊಡಬೇಕು ಎಂಬುದು ನಮ್ಮ ಆಶಯ. 13 ವರ್ಷದ ಹಿಂದೆ ಕೊಟ್ಟ ಗಿಡಗಳು ಈಗ ಫಲ ಬರುತ್ತಿದೆ ಎಂದರು.

ಇದನ್ನೂ ಓದಿ: Rakshit Shetty: ಮುಂದಿನ ಎರಡು ಸಿನಿಮಾಗಳಿಗೆ ಸ್ಫೂರ್ತಿ ಇದು; ಬಿಗ್‌ ಅಪ್‌ಡೇಟ್‌ ಕೊಟ್ಟ ರಕ್ಷಿತ್‌ ಶೆಟ್ಟಿ!

ಈ ಸಂದರ್ಭದಲ್ಲಿ ಕದಂಬ ಮುಖ್ಯಸ್ಥ ವಿಶ್ವೇಶ್ವರ ಭಟ್ಟ ಕೋಟೆಮನೆ‌, ಜಿ.ಆರ್.ಹೆಗಡೆ ಬೆಳ್ಳೇಕೇರಿ, ಗಣಪತಿ ಹೆಗಡೆ ಮುರೇಗಾರ, ಕ್ಲಪ್ಸ‌ನ ಗಣೇಶ ಹೆಗಡೆ ಸಣ್ಣಕೇರಿ, ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಜೋಶಿ, ಮಂಜುನಾಥ ಹೆಗಡೆ‌ ಇತರರು ಇದ್ದರು.

Exit mobile version