ಶಿರಸಿ (ಬನವಾಸಿ): ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಶಿರಸಿಯ ಶಿವಂ ಆಸ್ಪತ್ರೆಯ ಸಹಯೋಗದಲ್ಲಿ ಬುಧವಾರ ಉಚಿತ ಬಂಜೆತನ ತಪಾಸಣೆ (Free Infertility Checkup) ಮತ್ತು ಸಲಹಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಶಿರಸಿಯ ಶಿವಂ ಆಸ್ಪತ್ರೆಯ ನುರಿತ ಸ್ತ್ರೀ ರೋಗ ತಜ್ಞೆ ಡಾ. ರೂಪ ಮಧುಕೇಶ್ವರ ಶಿಬಿರವನ್ನು ಉದ್ಘಾಟಿಸಿದರು,
ಬಳಿಕ ಮಾತನಾಡಿದ ಡಾ. ರೂಪ ಮಧುಕೇಶ್ವರ, ಆಧುನಿಕ ಜಗತ್ತಿನಲ್ಲಿ ಬಂಜೆತನ ಎನ್ನುವುದು ಸಾಮಾನ್ಯ ವಿಚಾರವಾಗಿದೆ. ಹೆಚ್ಚಿನ ದಂಪತಿಯಲ್ಲಿ ಈ ಸಮಸ್ಯೆಯು ಕಂಡು ಬರುತ್ತಲಿದ್ದು, ಶೇ.50ರಷ್ಟು ದಂಪತಿಯಲ್ಲಿ ಈ ಸಮಸ್ಯೆಯಿದೆ. ಪುರುಷರು ಹಾಗೂ ಮಹಿಳೆಯರು ಬಂಜೆತನಕ್ಕೆ ಸಮಾನ ಕಾರಣರಾಗಿರುತ್ತಾರೆ. ಇದನ್ನು ನಿವಾರಣೆ ಮಾಡಲು ಹಲವಾರು ಬಗೆಯ ಔಷಧಿಗಳು ಹಾಗೂ ಚಿಕಿತ್ಸೆಗೆ ಅವರು ಒಳಗಾಗಬೇಕಾಗುತ್ತದೆ. ಆದರೆ ಕೆಲವರು ಇದರ ಬಗ್ಗೆ ಮಾತನಾಡಲು ಹಿಂಜರಿಯುವರು. ಅಲ್ಲದೇ ಕುಟುಂಬ ಮತ್ತು ಸ್ನೇಹಿತರಿಂದಲೂ ಇದನ್ನು ಮುಚ್ಚಿಡಲು ಪ್ರಯತ್ನಿಸುತ್ತಾರೆ. ಆದರೆ ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಂದಕ್ಕೂ ಚಿಕಿತ್ಸೆಗಳು ಇರುವ ಕಾರಣದಿಂದಾಗಿ ಇದನ್ನು ಕೂಡ ಚಿಕಿತ್ಸೆಯಿಂದ ನಿವಾರಣೆ ಮಾಡಬಹುದು ಎಂದು ಹೇಳಿದರು.
ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಜಯಶ್ರೀ ಹೆಗಡೆ ಆರೋಗ್ಯದ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.
ಇದನ್ನೂ ಓದಿ: Gold : ಭಾರತೀಯರ ಮನೆಗಳಲ್ಲಿ ವಿಶ್ವಬ್ಯಾಂಕ್ ಬಳಿ ಇರುವುದಕ್ಕಿಂತ ಹೆಚ್ಚು ಚಿನ್ನ
ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಶಿರಸಿ ಶಿವಂ ಆಸ್ಪತ್ರೆಯ ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.