ಶಿರಸಿ: ದೇಶದ (Country) ನೈಜ ಸ್ಥಿತಿ ತಿಳಿಸುವ ಪಠ್ಯಗಳನ್ನು ತೆಗೆಯಲು ಕಾಂಗ್ರೆಸ್ (Congress) ಯೋಚಿಸುತ್ತಿದೆ. ಸಿದ್ದರಾಮಯ್ಯ (Siddaramaiah) ಎಡ ಪಂಥೀಯ ವಿಚಾರಧಾರೆಯ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ. ಇದರ ಪರಿಣಾಮ ಪಠ್ಯ ಬದಲಾವಣೆಯ ತರಾತುರಿ ಕಾಣಿಸುತ್ತಿದೆ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಶಾಲೆಗಳಿಗೆ ಪುಸ್ತಕ ವಿತರಣೆ ಆಗಿದೆ. ಶಾಲೆಗಳು ಆರಂಭಗೊಂಡಿವೆ. ಅನಗತ್ಯವಾಗಿ ಸರ್ಕಾರ ಪಠ್ಯ ಪುಸ್ತಕ ಪರಿಷ್ಕರಣೆಗೆ ಮುಂದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: Monsoon Festivals: ಧೋ ಎಂದು ಸುರಿಯುವ ಮಳೆಯ ನಡುವೆ ಮನಸೆಳೆವ ಹಬ್ಬಗಳು!
ಪಠ್ಯ ಬದಲಾವಣೆಗೂ ಇತಿ ಮಿತಿಗಳಿವೆ. ವಿವಿಧ ಹಂತದ ಚರ್ಚೆ ನಡೆದು ಬದಲಾವಣೆ ಮಾಡುವ ಪದ್ಧತಿ ಇದೆ. ಈ ಹಿಂದೆ 2013 ರಲ್ಲಿ ಸಹ ಸಿದ್ದರಾಮಯ್ಯ ಇದೇ ರೀತಿ ವರ್ತಿಸಿ, ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ರಾಷ್ಟ್ರೀಯತೆ ವಿಚಾರ ಬದಿಗಿಟ್ಠು ಪಠ್ಯ ರಚನೆಗೆ ಮುಂದಾಗಿತ್ತು. ಪಠ್ಯದಲ್ಲಿ ತಪ್ಪಿಲ್ಲದಿದ್ದರೂ ಕೆಲವರು ಬರೆದಿದ್ದಾರೆ ಎಂಬ ಕಾರಣಕ್ಕೆ ಬದಲಾಗಿಸುತ್ತಿದ್ದಾರೆ. ಇತಿಹಾಸಕ್ಕೆ ಹತ್ತಾರು ಮುಖಗಳಿವೆ. ಭಾರತೀಯ ದೃಷ್ಟಿಕೋನದ ಇತಿಹಾಸವನ್ನು ನಾವು ಮಕ್ಕಳಿಗೆ ನೀಡಬೇಕೇ ಹೊರತೂ ಬ್ರಿಟೀಷರ ಅಥವಾ ಮುಘಲರ ದೃಷ್ಟಿಕೋನದಿಂದ ಮಕ್ಕಳಿಗೆ ನೀಡಬಾರದು. ಗುಲಾಮಿತನದ ಮಾನಸಿಕತೆಯ ಶಿಕ್ಷಣಕ್ಕೆ ಮತ್ತೆ ಸಿದ್ದರಾಮಯ್ಯ ಮುಂದಾಗಿದ್ದಾರೆ. ಈ ರೀತಿ ಗೊಂದಲ ಮಾಡಿ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಎಡಪಂಥೀಯರ ಓಲೈಕೆಗೆ ಮಾಡುತ್ತಿರುವ ಯತ್ನ ಖಂಡನಾರ್ಹ ಎಂದರು.
ದ್ವೇಷ ರಾಜಕಾರಣದ ಮನೋಸ್ಥಿತಿ ಕಾಂಗ್ರೆಸ್‌ನಲ್ಲಿ ಕಾಣುತ್ತಿದೆ. ಹರೀಶಪುಂಜಾ, ಅಶ್ವತ್ಥ ನಾರಾಯಣ ಅವರ ಮೇಲೆ ಕೇಸ್ ಹಾಕುತ್ತಿದ್ದಾರೆ. ಉಪಮುಖ್ಯಮಂತ್ರಿಯಿಂದಲೇ ಈ ದ್ವೇಷ ರಾಜಕಾರಣ ಬರುವಂತಾದರೆ ವ್ಯವಸ್ಥೆ ಅಪಾಯಕಾರಿ ದಿಕ್ಕಿಗೆ ಹೋಗುತ್ತದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಕಾಂಗ್ರೆಸ್ ಆಡಳಿತದ ಬಗ್ಗೆ ರಾಜ್ಯದ ಜನತೆಯ ನಿರೀಕ್ಷೆ ಹುಸಿಯಾಗುತ್ತಿದೆ.
ಇದನ್ನೂ ಓದಿ: Free Electricity: ಹೊಸ ಮನೆ ಕಟ್ಟಿದವರಿಗೆ, ಹೊಸ ಬಾಡಿಗೆದಾರರಿಗೂ ಫ್ರೀ ಕರೆಂಟ್: ಏನಿದು ಸರ್ಕಾರದ 53 ಯುನಿಟ್ ಸೂತ್ರ?
ಆಡಳಿತ ಗೊಂದಲದ ಗೂಡಾಗಿದೆ. ಸಚಿವರು ಅವರ ಖಾತೆ ಬದಲು ಗೊಂದಲದ ಭಾಗವಾಗುತ್ತಿದ್ದಾರೆ. ಗ್ಯಾರಂಟಿ ಗೊಂದಲದಿಂದಾಗಿ ಆಯಾ ಸಚಿವರಿಗೆ ತಮ್ಮ ಕಾಮಗಾರಿ ಮಾಡಲಾಗುತ್ತಿಲ್ಲ. ಗೊಂದಲ ಮಾಡುವುದು, ಜನತೆಯ ಮರೆಮಾಚಿಸುವುದು ಕಾಂಗ್ರೆಸ್‌ಗೆ ಮೊದಲಿನಿಂದಲೂ ರೂಢಿ ಎಂದು ಆರೋಪಿಸಿದರು.
ಈಗಿನ ಸರ್ಕಾರ ಹಿಂದಿನ ಸರ್ಕಾರದ ಎಲ್ಲ ಅಭಿವೃದ್ಧಿಗೆ ತಡೆಯೊಡ್ಡುತ್ತಿದೆ. ಈ ಕಾಮಗಾರಿ ಮುಂದುವರಿಸದಿದ್ದರೆ ಅಭಿವೃದ್ಧಿ ಕಾರ್ಯಗಳು ನಿಂತು ಹೋಗಲಿವೆ. ಗ್ಯಾರಂಟಿ ಜಾರಿಯ ಗೊಂದಲ ಜನಾಕ್ರೋಶಕ್ಕೆ ಕಾರಣವಾಗುತ್ತಿದೆ. ಚುನಾವಣೆ ಪೂರ್ವ ಹೇಳಿದ್ದನ್ನು ಮಾಡಿ. ಗೆದ್ದಾಯ್ತು, ಈಗ ಏನು ಬೇಕಿದ್ರೂ ಮಾಡಬಹುದು ಎಂಬ ಕಾಂಗ್ರೆಸ್ ಮನೋಭಾವನೆ ಜನತೆಗೆ ಮಾಡುತ್ತಿರುವ ಮೋಸ. ಮೋಸ ಮಾಡುವಿಕೆ ಕಾಂಗ್ರೆಸ್ ಗೆ ರಕ್ತಗತವಾಗಿದ್ದು, ಮುಂದೆ ಕಾಂಗ್ರೆಸ್ ನವರೇ ಅನುಭವಿಸಬೇಕಾಗಿದೆ ಎಂದರು.
ಇದನ್ನೂ ಓದಿ: Alamatti Dam: ಆಲಮಟ್ಟಿ ಜಲಾಶಯದ ಒಡಲು ಬರಿದಾಗುವ ಆತಂಕ; ʻಮಹಾʼ ಮಳೆಗೆ ಕಾದುಕುಳಿತ ರೈತ
ಈ ಸಂದರ್ಭದಲ್ಲಿ ಮುಖಂಡರಾದ ಮಾರುತಿ ನಾಯ್ಕ, ಉಷಾ ಹೆಗಡೆ, ನರಸಿಂಹ ಹೆಗಡೆ ರಾಜೇಶ ಶೆಟ್ಟಿ ಇತರರಿದ್ದರು.