Site icon Vistara News

Uttara Kannada News: ಪ್ರಾಥಮಿಕ ಶಿಕ್ಷಣವೇ ಶ್ರೇಷ್ಠ : ವಿಶ್ರಾಂತ ಉಪ ಕುಲಪತಿ ಪರಮೇಶ್ವರ ಶಾಸ್ತ್ರಿ

Hasanagi Govt School Centenary Ceremony

ಯಲ್ಲಾಪುರ: ಮಕ್ಕಳಿಗೆ ತಿಳಿವಳಿಕೆ ಮೂಡಿಸುವ ಹಾಗೂ ಜ್ಞಾನೇಂದ್ರಿಯಗಳಿಗೆ ಚೈತನ್ಯ ನೀಡುವ ಪ್ರಾಥಮಿಕ ಹಂತದ ಶಿಕ್ಷಣ ಪ್ರಧಾನವಾದದ್ದು ಎಂದು ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ವಿಶ್ರಾಂತ ಉಪ ಕುಲಪತಿ ಪರಮೇಶ್ವರ ಶಾಸ್ತ್ರಿ (Uttara Kannada News) ತಿಳಿಸಿದರು.

ಸೋಮವಾರ ಸಂಜೆ ತಾಲೂಕಿನ ಹಾಸಣಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶತಮಾನೋತ್ಸವ ಆಚರಣೆಯ ಈ ಸುಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸೌಕರ್ಯಕ್ಕಾಗಿ ನಾವೆಲ್ಲರೂ ಒಗ್ಗಟ್ಟಿನಲ್ಲಿ ಪ್ರಯತ್ನಿಸಬೇಕಿದೆ. ಗುಣಮಟ್ಟ ಹಾಗೂ ಸಂಖ್ಯಾಬಲದಲ್ಲಿ ನಮ್ಮ ಈ ಶಾಲೆಯು ಅಭಿವೃದ್ಧಿ ಹೊಂದಲಿ ಎಂಬುದು ಹಾರೈಕೆ ಎಂದರು.

ಹಿರಿಯ ಪತ್ರಕರ್ತ ತಿಮ್ಮಪ್ಪ ಜಿ. ಭಟ್ ಮಾತನಾಡಿ, ಶತಮಾನೋತ್ಸವ ಆಚರಣೆಗೆ ಜನರು ತೋರಿದ ಉತ್ಸಾಹವನ್ನು ಕಂಡು ಸಂತಸವಾಯಿತು. ಬಾಲ್ಯದ ದಿನಗಳು ಅತ್ಯಂತ ಸಂತಸ ತರುವಂತಹ ದಿನಗಳು. ನಮ್ಮ ಬಾಲ್ಯದ ನೆನಪುಗಳು ಮಾತ್ರ ಬದಲಾಗುವುದಿಲ್ಲ. ನಮ್ಮ ಬಾಲ್ಯದ ಶಿಕ್ಷಣ ಹಾಗೂ ಪರಿಸರದಿಂದ ಪಡೆದ ಪ್ರಭಾವ ನಮ್ಮ ಜೀವನ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಇದನ್ನೂ ಓದಿ: KAS Recruitment 2024: ಕೆಎಎಸ್‌ ಆಕಾಂಕ್ಷಿಗಳಿಗೆ ಗುಡ್‌ ನ್ಯೂಸ್‌; 384 ಹುದ್ದೆಗಳಿಗೆ ಅರ್ಜಿ ಆಹ್ವಾನ!

ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ್‌ ಕೋಣೆಮನೆ ಮಾತನಾಡಿ, ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುವ ಕುರಿತು ಚಿಂತಿಸುವ ನಾವು ಶಾಲೆಯ ಅಕ್ಕ ಪಕ್ಕದ ಗ್ರಾಮಗಳು ಖಾಲಿಯಾಗುವ ಕುರಿತು ಚಿಂತಿಸುತ್ತಿಲ್ಲ. ಗ್ರಾಮಗಳಿಂದ ಪಟ್ಟಣಗಳಿಗೆ ವಲಸೆ ಹೋಗುವವರ ಸಂಖ್ಯೆ ಹೆಚ್ಚಳವಾಗುತ್ತಿರುವುದರ ಬಗ್ಗೆ ನಾವು ಗಂಭೀರವಾಗಿ ಚಿಂತಿಸಬೇಕಾಗಿದೆ ಎಂದರು.

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಲು ಇಂದು ಖಾಸಗಿ ಶಾಲೆಗಳು ಕಾರಣ ಎಂದು ದೂಷಿಸಲಾಗುತ್ತಿದೆ. ಆದರೆ ಇದಕ್ಕೆ ನೇರ ಕಾರಣ ಸರ್ಕಾರವೇ ಆಗಿದೆ. ಖಾಸಗಿ ಶಾಲೆಗಳಿಗೆ ನಿಬಂಧನೆ ಹಾಕುವ ಸರ್ಕಾರ, ಅದೇ ನಿಬಂಧನೆಗಳು ಸರ್ಕಾರಿ ಶಾಲೆಗಳಿಗೆ ಅನ್ವಯಿಸುವುದಿಲ್ಲವೇ ಎಂಬುದನ್ನು ಸರ್ಕಾರ ಅವಲೋಕಿಸಬೇಕಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾನ್ ಸೇನ್ ಪ್ರಶಸ್ತಿ ಪುರಸ್ಕೃತ ಪಂಡಿತ್ ಗಣಪತಿ ಭಟ್ ಹಾಸಣಗಿ ವಹಿಸಿದ್ದರು.

ಇದನ್ನೂ ಓದಿ: Money Guide: ಮನೆ ಖರೀದಿಗೆ ಮುಂದಾಗಿದ್ದೀರಾ? ಹಾಗಾದರೆ ಈ ವಿಚಾರ ನಿಮಗೆ ತಿಳಿದಿರಲೇ ಬೇಕು

ಇದೇ ಸಂದರ್ಭದಲ್ಲಿ ಉನ್ನತ ಸಾಧನೆ ಮಾಡಿದ ಶಾಲೆಯ ಮಾಜಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಅಂತೆಯೇ ಶತಮಾನೋತ್ಸವದ ಸವಿ ನೆನಪಿಗಾಗಿ “ತೇಜೋನಿಧಿ” ಕೃತಿ ಲೋಕಾರ್ಪಣೆಗೊಳಿಸಲಾಯಿತು.

ವೇದಿಕೆಯಲ್ಲಿ ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ, ಉಪನಿರ್ದೇಶಕ ಪಾರಿ ಬಸವರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ, ಪಂ. ಅಧ್ಯಕ್ಷೆ ವಿನೋದಾ ಬಿಲ್ಲವ, ಉಪಾಧ್ಯಕ್ಷ ಪುರಂದರ ನಾಯ್ಕ, ಪಂ. ಸದಸ್ಯೆ ಅಮೃತಾ ಪೂಜಾರಿ, ಜಿ.ಪಂ. ಮಾಜಿ ಸದಸ್ಯ ರಾಘವೇಂದ್ರ ಭಟ್, ರಂಗಸಮೂಹದ ಅಧ್ಯಕ್ಷ ಆರ್.ಎನ್. ಭಟ್ ದುಂಡಿ, ಹಿರಿಯ ಸಹಕಾರಿ ಆರ್.ಎನ್.ಹೆಗಡೆ ಗೋರ್ಸಗದ್ದೆ, ಪ್ರಮುಖರಾದ ಗೋಪಾಲ ಆರ್. ಭಟ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಶುರಾಮ ಸಿದ್ದಿ, ಅಕ್ಷರ ದಾಸೋಹ ನೋಡಲ್ ಅಧಿಕಾರಿ ಎಂ.ಕೆ. ಮೊಗೇರ, ವಿಷಯ ಪರಿವೀಕ್ಷಕ ಜಿ.ಆರ್. ಹೆಗಡೆ, ಶಾಂತಾರಾಮ ಹೆಗಡೆ, ಶಿಕ್ಷಣ ಸಂಯೋಜಕ ಪ್ರಶಾಂತ್ ಜಿ.ಎನ್., ಸಿ.ಆರ್.ಪಿ. ಕೆ.ಆರ್. ನಾಯ್ಕ, ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: Paytm Crisis: ಪೇಟಿಎಂ ಬಿಕ್ಕಟ್ಟಿನ ಬೆನ್ನಲ್ಲೇ ಅಧ್ಯಕ್ಷ ಸ್ಥಾನಕ್ಕೆ ವಿಜಯ್‌ ಶೇಖರ್‌ ಶರ್ಮಾ ವಿದಾಯ

ಶತಮಾನೋತ್ಸವ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿದರು. ಮುಖ್ಯಾಧ್ಯಾಪಕರಾದ ಗಿರಿಜಾ ಭಟ್ ವರದಿ ವಾಚಿಸಿದರು. ವಸಂತ ಶಾಸ್ತ್ರಿ ನಿರ್ವಹಿಸಿದರು.

Exit mobile version