ಕಾರವಾರ: ಅರಣ್ಯವನ್ನು (Forest) ಉಳಿಸಿ, ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, (Responsibility) ಇದನ್ನು ಎಲ್ಲರೂ ಪಾಲಿಸಬೇಕಾಗಿದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವ ಮಂಕಾಳು ಎಸ್ ವೈದ್ಯ ತಿಳಿಸಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡಿನ ಇಕೋ ಬೀಚ್ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾಂಡ್ಲಾ ಉತ್ಸವ 2023 ಕಾರ್ಯಕ್ರಮದಲ್ಲಿ ಕಾಂಡ್ಲಾ ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿ, ಅವರು ಮಾತನಾಡಿದರು.
ಇದನ್ನೂ ಓದಿ: Mukhtar Ansari: 32 ವರ್ಷದ ಹಿಂದಿನ ಕೊಲೆ ಕೇಸಿನಲ್ಲಿ ಮುಖ್ತಾರ್ ಅನ್ಸಾರಿ ದೋಷಿ, ಇಂದೇ ಶಿಕ್ಷೆ ಪ್ರಕಟ
ಬೇರೆಡೆಗಳಲ್ಲಿ ಮರಗಳನ್ನು ಹುಡುಕಬೇಕಾದ ಪರಿಸ್ಥಿತಿ ಇದೆ. ಆದರೆ, ಇಲ್ಲಿನ ಜನರು ಮರಗಳಿಗೆ ಹೊಂದಿಕೊಂಡೇ ಜೀವನ ಕಟ್ಟಿಕೊಂಡಿದ್ದಾರೆ. ಇಂದಿನ ದಿನಮಾನದಲ್ಲಿ ನಾವು ಉಳಿದ ಅಗತ್ಯತೆಗಳಿಗಿಂತ ಅರಣ್ಯವನ್ನು ಉಳಿಸಿ, ಬೆಳೆಸಲೇಬೇಕಾದ ಸ್ಥಿತಿ ಇದೆ ಎಂದು ತಿಳಿಸಿದರು.
ಕಾಂಡ್ಲಾ ಗಿಡಗಳೂ ಸಮುದ್ರತೀರದಲ್ಲಿ ಭೂಮಿಯ ಸವಕಳಿಯನ್ನು ತಡೆಗಟ್ಟುವುದರ ಜತೆಗೆ ಸುನಾಮಿಯಂತಹ ಪರಿಸ್ಥಿತಿಯನ್ನು ನಿಯಂತ್ರಿಸಲು ಸಹಕಾರಿಯಾಗಿವೆ. ಜಿಲ್ಲೆಯ ಐದು ಕಡೆಗಳಲ್ಲಿ ಮಾತ್ರ ಕಾಂಡ್ಲಾ ಗಿಡಗಳು ಬೆಳೆಯುವಂತಹ ವಾತಾವರಣ ಇದ್ದು, ಅವುಗಳನ್ನ ಸಹ ಉಳಿಸಿ ಬೆಳೆಸಬೇಕಿದೆ. ಕಾಡು ಉಳಿಯಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮ್ಯಾಂಗ್ರೋವ್ ಗಿಡಗಳ ಕುರಿತ ಮಾಹಿತಿ ಒಳಗೊಂಡ ಕೈಗಾ ಪರಿಸರ ವಿಜ್ಞಾನಿ ಪುಟ್ಟರಾಜು ಅವರ ಮ್ಯಾಂಗ್ರೋವ್ಸ್ ಆಫ್ ಕರ್ನಾಟಕ ಮತ್ತು ದ ಮರೈನ್ ಲೈಫ್ ಆಫ್ ಹೊನ್ನಾವರ ಡಿವಿಷನ್ ಪುಸ್ತಕಗಳನ್ನು ಅನಾವರಣ ಮಾಡಲಾಯಿತು.
ಇದನ್ನೂ ಓದಿ: Washington Sundar: ವಾಷಿಂಗ್ಟನ್ ಸುಂದರ್ ಟ್ವಿಟರ್ ಖಾತೆ ಹ್ಯಾಕ್; ಪೋಸ್ಟ್ನಲ್ಲಿ ಏನಿದೆ?
ಕಾರ್ಯಕ್ರಮದಲ್ಲಿ ಕೆನರಾ ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ವಸಂತರೆಡ್ಡಿ ಕೆ.ವಿ, ಕಾಸರಕೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜು ಜಟ್ಟಿ ಗೌಡ ಸೇರಿದಂತೆ ಅಧಿಕಾರಿಗಳು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.