ಕಾರವಾರ: ಬೃಹತ್ ಗಾತ್ರದ ಒಂಟಿ ಸಲಗವೊಂದು (Elephant) ರಸ್ತೆ ದಾಟುತ್ತಿರುವ (Road cross) ಅಪೂರ್ವ ದೃಶ್ಯವು ದಾಂಡೇಲಿ (Dandeli) ತಾಲೂಕಿನ ಅಂಬಿಕಾನಗರ ಗ್ರಾ.ಪಂ. ವ್ಯಾಪ್ತಿಯ ಬೊಮ್ಮನಳ್ಳಿ ಡ್ಯಾಂ ಹತ್ತಿರದಲ್ಲಿ ಸೆರೆಯಾಗಿದೆ.
ವಾಹನ ಸವಾರರೋರ್ವರು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ರಸ್ತೆಯಂಚಿಗೆ ಆನೆ ಕಂಡು ನಿಂತಿದ್ದಾರೆ. ಈ ವೇಳೆ ನಿಧಾನವಾಗಿ ಕಾಡಿನಿಂದ ಹೊರಬಂದ ಆನೆ ರಸ್ತೆಯನ್ನು ದಾಟಿ ಕಾಡಿನೊಳಕ್ಕೆ ತೆರಳಿದೆ.
ಇದನ್ನೂ ಓದಿ: Antrix-Devas Case: ರಾಮಚಂದ್ರನ್ ವಿಶ್ವನಾಥನ್ ದೇಶಭ್ರಷ್ಟ ಆರ್ಥಿಕ ಅಪರಾಧಿ: ಸಿಬಿಐ ಸ್ಪೆಷಲ್ ಕೋರ್ಟ್
ಆನೆಯ ಗಾತ್ರ ನೋಡಿದರೆ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅತಿದೊಡ್ಡ ಒಂಟಿ ಸಲಗ ಎಂದು ಅಂದಾಜಿಸಲಾಗಿದೆ. ಆಹಾರ ಅರಸಿ ಆನೆಗಳು ಕಾಡಿನ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ತೆರಳುವ ವೇಳೆ ಇತ್ತೀಚೆಗೆ ರಸ್ತೆಗಳಲ್ಲಿ ದರ್ಶನ ನೀಡುತ್ತಿದ್ದು, ಇದುವರೆಗೆ ಯಾವುದೇ ವಾಹನ ಸವಾರರಿಗೆ ತೊಂದರೆ ಉಂಟು ಮಾಡಿಲ್ಲ.
ಇದನ್ನೂ ಓದಿ: Disney+ Hotstar: ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಲಿದೆ ಹಾಟ್ ಸ್ಟಾರ್
ಆನೆ ರಸ್ತೆ ದಾಟಿದ ದೃಶ್ಯವನ್ನು ಬೈಕ್ ಸವಾರರೋರ್ವರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ.