ಯಲ್ಲಾಪುರ: ಸಾಮಾಜಿಕ ಕಳಕಳಿಯನ್ನು ಸಾರುವ ಲೇಖನಗಳ (Articles) ಮೂಲಕ ಸಮಾಜವನ್ನು (Society) ತಿದ್ದುವ ಕೆಲಸವನ್ನು ಪತ್ರಕರ್ತರು (Journalists) ಮಾಡಬೇಕು ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.
ಪಟ್ಟಣದ ಅಡಿಕೆ ಭವನದಲ್ಲಿ ಸೋಮವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಕರ್ತರ ಜವಾಬ್ದಾರಿಯ ಜತೆಗೆ ಪತ್ರಿಕಾ ವಿತರಕರಿಗೂ ಹೆಚ್ಚಿನ ಜವಾಬ್ದಾರಿ ಇದೆ, ಹೆಚ್ಚಿನ ಓದುಗರಿಗೆ ತಲುಪಿಸುವ ಮೂಲಕ ಪತ್ರಿಕೆಯ ಬೆಳವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು. ಬಳಿಕ ಮಾಜಿ ಶಾಸಕ ವಿ.ಎಸ್. ಪಾಟೀಲ್ ಮಾತನಾಡಿದರು.
ಇದನ್ನೂ ಓದಿ: Tourist Spot : ಚಿಕ್ಕಮಗಳೂರು ಪ್ರವಾಸಿ ತಾಣಗಳಿಗೆ ಹೇರಿದ್ದ ನಿಷೇಧ ವಾಪಸ್
ಕಾರ್ಯಕ್ರಮದಲ್ಲಿ ಪತ್ರಿಕಾ ರಂಗದ ಸೇವೆಗಾಗಿ ಹಿರಿಯ ಪತ್ರಕರ್ತ, ನಿವೃತ್ತ ಶಿಕ್ಷಕ ಡಿ.ಜಿ. ಭಟ್ಟ ಧುಂಡಿ ವಜ್ರಳ್ಳಿ ಅವರನ್ನು ಹಾಗೂ ಪತ್ರಿಕಾ ವಿತರಕರಾದ ರಾಮಚಂದ್ರ ಭಟ್ಟ ಚಿನ್ನಾಪುರ ಮತ್ತು ಅಮೃತ ಹೇಂದ್ರೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶೈಕ್ಷಣಿಕವಾಗಿ ಸಾಧನೆಗೈದ ಸಂಘದ ಸದಸ್ಯರ ಮಕ್ಕಳಾದ ಚೈತ್ರಾ ಜಯರಾಜ ಗೋವಿ ಹಾಗೂ ದೀಕ್ಷಾ ದತ್ತಾತ್ರೇಯ ಭಟ್ಟ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ನಿವೃತ್ತ ಶಿಕ್ಷಕ ಡಿ.ಜಿ. ಭಟ್ಟ ಧುಂಡಿ ವಜ್ರಳ್ಳಿ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸುಬ್ರಾಯ ಭಟ್ಟ ಬಕ್ಕಳ ಮಾತನಾಡಿದರು. ತಾಲೂಕಾಧ್ಯಕ್ಷ ಕೆ.ಎಸ್. ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದನ್ನೂ ಓದಿ: Gruhajyothi : ಜುಲೈ ತಿಂಗಳ ಫ್ರೀ ಕರೆಂಟ್ ಬಿಲ್ ಸ್ವೀಕರಿಸಲು ರೆಡಿಯಾಗಿ; ಹೊಸ ಬಿಲ್ ಹೇಗಿರುತ್ತೆ ಅಂತ ಇಲ್ಲಿ ನೋಡಿ
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಪ್ರಕಾಶ ನಾಯಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ನಾಯಕ, ಪ್ರಮುಖರಾದ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ಸಮಾಜದ ಪ್ರಮುಖರು, ಸರ್ಕಾರಿ ಪದವಿ ಕಾಲೇಜಿನ ಎನ್.ಎಸ್.ಎಸ್. ವಿದ್ಯಾರ್ಥಿಗಳು ಇದ್ದರು.
ಸ್ವಾತಿ ಪ್ರಾರ್ಥಿಸಿದರು. ಸಂಘದ ಸದಸ್ಯ ಸುಬ್ರಾಯ ಬಿದ್ರೆಮನೆ ಸ್ವಾಗತಿಸಿದರು. ಖಜಾಂಚಿ ದತ್ತಾತ್ರೇಯ ಭಟ್ಟ ಕಣ್ಣಿಪಾಲ ನಿರೂಪಿಸಿದರು. ಜಿಲ್ಲಾ ಸಮಿತಿ ಸದಸ್ಯೆ ಪ್ರಭಾವತಿ ಗೋವಿ ವಂದಿಸಿದರು.