ಕುಮಟಾ: ತಾಲೂಕಿನಲ್ಲಿ ಇತ್ತೀಚೆಗೆ ನಡೆದ ಮೊಬೈಲ್ ಕಳ್ಳತನವನ್ನು (Mobile theft) ಬೇಧಿಸಿದ ಕುಮಟಾ ಪೊಲೀಸರು ಕಳೆದುಹೋದ ಮೊಬೈಲ್‌ಗಳನ್ನು (Mobile) ವಾರಸುದಾರರಿಗೆ ಒಪ್ಪಿಸುವ ಮೂಲಕ ಸಾರ್ವಜನಿಕರ (Public) ಪ್ರಶಂಸೆಗೆ ಪಾತ್ರರಾದರು.
ಕಳೆದ ತಿಂಗಳು ಹೊಲನಗದ್ದೆಯ ಅನಂತ ಹರಿಕಾಂತ ಅವರು ತಮ್ಮ ಸ್ಮಾರ್ಟ್ ಫೋನ್ ಕಳೆದುಕೊಂಡಿದ್ದರು. ಅಲ್ಲದೇ ಹೆಗಡೆಯ ರಮೇಶ ಪಟಗಾರ ಕೂಡ ತಮ್ಮ ಮೊಬೈಲ್ ಕಳೆದುಕೊಂಡಿದ್ದರು. ಮೊಬೈಲ್ ಕಳುವಾದ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಇದನ್ನೂ ಓದಿ: Virat kohli : ಧೋನಿ- ತೆಂಡೂಲ್ಕರ್ ಸಾಲಿಗೆ ಸೇರಲಿದ್ದಾರೆ ವಿರಾಟ್ ಕೊಹ್ಲಿ, ಏನದು ದಾಖಲೆ?
ತನಿಖೆ ಕೈಗೊಂಡ ಅಪರಾಧ ಪತ್ತೆ ವಿಭಾಗದ ಪೊಲೀಸರು ಕಳೆದುಹೋದ ಮೊಬೈಲ್‌ಗಳನ್ನು ಪತ್ತೆ ಹಚ್ಚಿ ವಾರಸುದಾರರಿಗೆ ಮೊಬೈಲ್ ಫೋನ್‌ಗಳನ್ನು ಮರಳಿಸುವ ಕಾರ್ಯ ಮಾಡಿದ್ದಾರೆ. ಸುಮಾರು 2 ಲಕ್ಷ ರೂ ಮೌಲ್ಯದ 20 ಮೊಬೈಲ್‌ಗಳನ್ನು ಪತ್ತೆ ಹಚ್ಚಿದ ಪೊಲೀಸರು ಮೊಬೈಲ್ ಕಳೆದುಕೊಂಡವರನ್ನು ಠಾಣೆಗೆ ಕರೆಯಿಸಿ, ಜಫ್ತು ಪಡಿಸಿಕೊಂಡ ಮೊಬೈಲ್‌ಗಳನ್ನು ಭಟ್ಕಳ ಡಿವೈಎಸ್‌ಪಿ ಶ್ರೀಕಾಂತ ಅವರ ಮುಖಾಂತರ ವಾರುಸುದಾರರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಪಿಐ ತಿಮ್ಮಪ್ಪ ನಾಯಕ, ಪಿಎಸ್‌ಐ ನವೀನ್ ನಾಯ್ಕ, ಸುನೀಲ್ ಬಂಡಿವಡ್ಡರ್, ಸಿಬ್ಬಂದಿ ಇದ್ದರು.