ಬನವಾಸಿ: ಆಯೋಧ್ಯೆಯ ರಾಮಮಂದಿರ (Ayodhya Ram Mandir) ಲೋಕಾರ್ಪಣೆಗೆ ಕ್ಷಣಗಣನೆ ಆರಂಭವಾಗಿದ್ದು, ಬನವಾಸಿಯಲ್ಲಿ ಕಲಾವಿದರೊಬ್ಬರು ನೀರಿನ ಮೇಲೆ ಶ್ರೀರಾಮನ ಮತ್ತು ರಾಮ ಮಂದಿರದ ರಂಗೋಲಿ ಬಿಡಿಸಿ ತಮ್ಮ ಕೊಡುಗೆ ಸಮರ್ಪಿಸಿದ್ದಾರೆ.
ಬನವಾಸಿಯವರಾದ ಗಣೇಶ ಖರೆ ವೃತ್ತಿಯಲ್ಲಿ ಪೌರೋಹಿತ್ಯವಾದರೂ ಕಲೆಯ ಬಗ್ಗೆ ಕಳೆದ 15 ವರ್ಷಗಳಿಂದ ಆಸಕ್ತಿ ವಹಿಸಿಕೊಂಡು ಬಂದವರು. ಹವ್ಯಾಸಿ ಕಲಾವಿದರಾಗಿ ರಂಗೋಲಿ ಬಿಡಿಸುವಿಕೆ ಆರಂಭಿಸಿದ ಅವರು, ಪಾತ್ರೆಯಲ್ಲಿ ನೀರಿಟ್ಟುಕೊಂಡು ಅದರ ಮೇಲೆ ತೇಲುವ ರಂಗೋಲಿ ಹುಡಿಗಳನ್ನು ಬಳಸಿ ರಂಗವಲ್ಲಿ ಸಿದ್ಧಪಡಿಸುತ್ತಾರೆ.
ಇದನ್ನೂ ಓದಿ: Ram Mandir: ಕೃತಕ ಬುದ್ಧಿಮತ್ತೆ, ಡ್ರೋನ್ ತಂತ್ರಜ್ಞಾನ; ಮಂದಿರಕ್ಕೆ ಹೀಗಿದೆ ಸೆಕ್ಯುರಿಟಿ
ಇದುವರೆಗೂ 500ಕ್ಕೂ ಅಧಿಕ ಮಾದರಿಯ ರಂಗೋಲಿ ಬಿಡಿಸಿದ್ದೇನೆ ಎನ್ನುವ ಗಣೇಶ ಖರೆ, ಭಾರತೀಯ ಐತಿಹಾಸಿಕ ಸ್ಥಳಗಳು, ಪ್ರಸಿದ್ಧ ವ್ಯಕ್ತಿಗಳನ್ನೂ ರಂಗೋಲಿ ಮೂಲಕ ಅರಳಿಸಿ ಜನಮನ್ನಣೆ ಗಳಿಸಿದ್ದಾರೆ.
ಸುಮಾರು ಮೂರು ತಾಸುಗಳ ಕಾಲ ಶ್ರಮ ವಹಿಸಿ ಮಂಗಳವಾರ ನೀರಿನ ಮೇಲೆ ರಂಗೋಲಿ ಬಿಡಿಸಿದ್ದಾರೆ. ರಾಮಮಂದಿರ ಉದ್ಘಾಟನೆ ಸಮೀಪದ ಈ ದಿನಗಳಲ್ಲಿ ಅವರ ಕಲೆಯನ್ನು ಅನೇಕರು ಕಣ್ತುಂಬಿಕೊಂಡಿದ್ದಾರೆ.
ಇದನ್ನೂ ಓದಿ: Hardware Business : ಹಾರ್ಡ್‌ವೇರ್ ಬಿಸಿನೆಸ್ ಆರಂಭಿಸೋದು ಹೇಗೆ, ಬಂಡವಾಳ ಎಷ್ಟು ಬೇಕು, ಲಾಭ ಎಷ್ಟು?
ರಾಮ ಮಂದಿರ ಉದ್ಘಾಟನೆಯ ಐತಿಹಾಸಿಕ ಕ್ಷಣ ಇದು. ಕಲಾವಿದನಾಗಿ ರಾಮಮಂದಿರಕ್ಕೆ ಈ ರೀತಿಯಾಗಿ ಕೊಡುಗೆ ನೀಡಿದ್ದೇನೆ ಎನ್ನುತ್ತಾರೆ ಗಣೇಶ ಖರೆ.