ಯಲ್ಲಾಪುರ: ಇಲ್ಲಿನ ಜನರು (Peoples) ಸರಳತೆಯಿಂದಿದ್ದು (Simplicity) ಪ್ರೀತಿ ವಿಶ್ವಾಸ, ಧಾರ್ಮಿಕ (Religious) ಶ್ರದ್ದೆಯುಳ್ಳವರಾಗಿದ್ದಾರೆ. ಎಡನೀರು ಮಠದೊಂದಿಗೆ ಇಲ್ಲಿನವರದ್ದು ಅವಿನಾಭಾವ ಸಂಬಂಧವಿದೆ ಎಂದು ಕೇರಳದ ಎಡನೀರು ಸಂಸ್ಥಾನದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ಶಕ್ತಿಗಣಪತಿ ದೇವಸ್ಥಾನಕ್ಕೆ ಸೋಮವಾರ ಭೇಟಿ ನೀಡಿ ಭಕ್ತರನ್ನುದ್ದೇಶಿಸಿ ಶ್ರೀಗಳು ಮಾತನಾಡಿದರು.
ಇದನ್ನೂ ಓದಿ: Free Electricity: ಹೊಸ ಮನೆ ಕಟ್ಟಿದವರಿಗೆ, ಹೊಸ ಬಾಡಿಗೆದಾರರಿಗೂ ಫ್ರೀ ಕರೆಂಟ್: ಏನಿದು ಸರ್ಕಾರದ 53 ಯುನಿಟ್ ಸೂತ್ರ?
1998ರಲ್ಲಿ ಹಿಂದಿನ ಶ್ರೀಗಳಾಗಿದ್ದ ಶ್ರೀಕೇಶವಾನಂದ ಭಾರತೀ ಶ್ರೀಪಾದಂಗಳು ಯಲ್ಲಾಪುರದ ಸಂಕಲ್ಪ ಸಭಾಭವನದಲ್ಲಿ ಚಾತುರ್ಮಾಸ ವ್ರತ ಕೈಗೊಂಡಿದ್ದರು ಎಂಬುದನ್ನು ಸ್ಮರಿಸಿಕೊಂಡರು. ಬಂಧಗಳು ಇನ್ನು ಗಟ್ಟಿಯಾಗಬೇಕು. ಮಠದೊಂದಿಗಿನ ಭಾಂದವ್ಯ ಮುಂದುವರೆಸಿಕೊಂಡು ಹೋಗಬೇಕು. ಈ ಬಾರಿ ಜುಲೈ 3 ರಿಂದ ಚಾತುರ್ಮಾಸ್ಯ ಪ್ರಾರಂಭವಾಗಲಿದ್ದು ಅಧಿಕ ಮಾಸವಿರುವದರಿಂದ 3 ತಿಂಗಳ ಕಾಲ ನಡೆಯಲಿದೆ. ತಾವೆಲ್ಲರೂ ಆಗಮಿಸಿ ಶ್ರೀ ದಕ್ಷಿಣಾಮೂರ್ತಿಸ್ವಾಮಿ ದೇವರ ಕೃಪೆಗೆ ಪಾತ್ರರಾಗಿರಿ ಎಂದರು.
ಶಾಸಕ ಶಿವರಾಮ ಹೆಬ್ಬಾರ ಶ್ರೀಗಳ ಆಶಿರ್ವಾದ ಪಡೆದುಕೊಂಡು ಅವರನ್ನು ಸನ್ಮಾನಿಸಿ ಗೌರವಿಸಿದರು. ಶಂಕರ ಭಟ್ಟ ತಾರೀಮಕ್ಕಿ ದಂಪತಿ ಶ್ರೀಗಳ ಪಾದಪೂಜೆ ನೆರವೇರಿಸಿದರು.
ಇದನ್ನೂ ಓದಿ: Lok Sabha Election 2024: ಲೋಕಸಭೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ; ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟನೆ
ಈ ಸಂದರ್ಭದಲ್ಲಿ ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ, ಪ್ರಮುಖರಾದ ಡಿ ಶಂಕರಭಟ್ಟ, ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ, ಅನಂತ ಗಾಂವಕರ, ಶಿರೀಷ ಪ್ರಭು, ಎಂ ಆರ್ ಹೆಗಡೆ ಕುಂಬ್ರಿಗುಡ್ಡೆ, ಪ್ರಸಾದ ಹೆಗಡೆ ಹಾಗೂ ಇತರರು ಇದ್ದರು.