ಯಲ್ಲಾಪುರ: ವನ ಮಹೋತ್ಸವ ಸಪ್ತಾಹದಡಿ ಪ್ರಸಕ್ತ ಸಾಲಿನಲ್ಲಿ ರಾಜ್ಯಾದ್ಯಂತ ಅರಣ್ಯ ಇಲಾಖೆಯಿಂದ (Forest Department) 5 ಕೋಟಿ ಸಸಿಗಳನ್ನು ನೆಡುವ ಕಾರ್ಯಕ್ರಮ (Plantation program) ಹಮ್ಮಿಕೊಳ್ಳಲಾಗಿದ್ದು, ಯಲ್ಲಾಪುರ ಅರಣ್ಯ ವಿಭಾಗದಲ್ಲಿ 9.95 ಲಕ್ಷ ಸಸಿಗಳನ್ನು ನೆಡಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ. ಹೆಗಡೆ ಹೇಳಿದರು.
ಸೋಮವಾರ ಪಟ್ಟಣದ ಸಬಗೇರಿ ಸಸ್ಯಪಾಲನಾ ಕ್ಷೇತ್ರದಲ್ಲಿ ಮಾಧ್ಯಮದವರಿಗೆ ಮಾಹಿತಿ ನೀಡಿ ಮಾತನಾಡಿದ ಅವರು, ಈ ಕಾರ್ಯಕ್ರಮಕ್ಕೆ ಶಾಸಕ ಶಿವರಾಮ ಹೆಬ್ಬಾರ್ ಜುಲೈ 1ರಂದು ಚಾಲನೆ ನೀಡಲಿದ್ದಾರೆ ಎಂದರು.
ಇದನ್ನೂ ಓದಿ: ಪಾಕ್ ನಾಯಕ ಬಾಬರ್ ಅಜಂ ಹುಟ್ಟುಹಬ್ಬಕ್ಕೂ ವಿಶ್ವಕಪ್ ಟೂರ್ನಿಗೂ ಇದೆ ಅವಿನಾಭಾವ ಸಂಬಂಧ
ಈ ಬಾರಿ ನಮ್ಮ ಯಲ್ಲಾಪುರ ವಿಭಾಗದ 9 ಸಸ್ಯಪಾಲನಾ ಕ್ಷೇತ್ರಗಳಲ್ಲಿ ವಿವಿಧ ಜಾತಿಯ ಸ್ಥಳೀಯ ವಾತವಾರಣಕ್ಕೆ ಹೊಂದಾಣಿಕೆಯಾಗುವಂತಹ ಉತ್ತಮ ಗುಣಮಟ್ಟದ ಆಯ್ದ ಬೀಜಗಳಿಂದ ಬೆಳೆಸಿದ ಸಸ್ಯಗಳನ್ನು ಬೆಳೆಸಲಾಗಿದೆ. ಆರ್‌ಎಸ್‌ಪಿಡಿ ಯೋಜನೆಯಡಿ ರಿಯಾಯತಿ ದರದಲ್ಲಿ ರೈತರಿಗೆ ವಿತರಿಸಲಾಗುವುದು ಎಂದರು.
ಈ ಬಾರಿಯೂ ಬೀಜ ಬಿತ್ತನೆ ಕಾರ್ಯ ಆರಂಭವಾಗಿದ್ದು, ಇನ್ನೂ ಕೆಲ ದಿನಗಳ ಕಾಲ ಸಾರ್ವಜನಿಕರ, ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಬೀಜ ಬಿತ್ತೋತ್ಸವ ನಡೆಯಲಿದೆ. ಈ ಮೂಲಕ ವಿಭಾಗದಲ್ಲಿ ಅರಣ್ಯ ಪ್ರದೇಶದ ಬೆಳವಣಿಗೆಗೆ ಶ್ರಮಿಸಲಾಗುವುದು. ಗ್ರಾಮ ಅರಣ್ಯ ಸಮಿತಿಯವರೂ ಸಹ ಸಂಪೂರ್ಣ ಸಹಕಾರ ನೀಡುತ್ತಿದ್ದು, ಅವರ ಕ್ರಿಯಾಶೀಲತೆಯಿಂದ ಅರಣ್ಯ ಇಲಾಖೆಯ ಚಟುವಟಿಕೆಗಳು ಯಶಸ್ವಿಯಾಗಿ ನಡೆಯುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: Congress Guarantee: ಶಕ್ತಿ ಯೋಜನೆ ಎಫೆಕ್ಟ್: ಸಾರಿಗೆ ಇಲಾಖೆಗೆ ಬೂಸ್ಟ್; ಸರ್ಕಾರದ ಬೊಕ್ಕಸ ಖಾಲಿ!
ಈ ಸಂದರ್ಭದಲ್ಲಿ ಯಲ್ಲಾಪುರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆನಂದ್ ಎಚ್ ಎ., ಮಂಚಿಕೇರಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್, ಯಲ್ಲಾಪುರ ವಲಯ ಅರಣ್ಯ ಅಧಿಕಾರಿ ಎಲ್. ಎ. ಮಠ ಮತ್ತು ಇಲಾಖೆಯ ಅಧಿಕಾರಿಗಳು ಇದ್ದರು.