Site icon Vistara News

Uttara Kannada News: ಮಾನಸಿಕ ಆರೋಗ್ಯದಲ್ಲಿ ಧನಾತ್ಮಕ ಆಲೋಚನೆ ಮುಖ್ಯ: ಡಾ. ದಾಕ್ಷಾಯಣಿ ಹೆಗಡೆ

Psychology workshop at Shirsi

ಶಿರಸಿ: ಬೌದ್ಧಿಕ ಸಂಸ್ಕಾರ ಮನಸ್ಸನ್ನು ಧನಾತ್ಮಕಗೊಳಿಸುತ್ತದೆ ಹಾಗೂ ಧನಾತ್ಮಕ ಆಲೋಚನೆಗಳು (Positive thoughts) ಮಾನಸಿಕ ಆರೋಗ್ಯದಲ್ಲಿ (Mental health) ಪ್ರಧಾನ ಪಾತ್ರವಹಿಸುತ್ತದೆ ಎಂದು ಪ್ರಾಚಾರ್ಯೆ ಡಾ. ದಾಕ್ಷಾಯಣಿ ಹೆಗಡೆ ತಿಳಿಸಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮನಃಶಾಸ್ತ್ರ ವಿಭಾಗದಿಂದ ಏರ್ಪಡಿಸಿದ್ದ ಮನೋವಿಜ್ಞಾನದಲ್ಲಿ ವೃತ್ತಿ ಅವಕಾಶಗಳು ಹಾಗೂ ಧನಾತ್ಮಕ ಮಾನಸಿಕ ಆರೋಗ್ಯ” ಎಂಬ ವಿಷಯ ಕುರಿತ ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇದನ್ನೂ ಓದಿ: WTC Final 2023: 44 ವರ್ಷಗಳ ಹಳೆಯ ದಾಖಲೆ ಪುಡಿಗಟ್ಟಿದ ರವೀಂದ್ರ ಜಡೇಜಾ

ಪಾಲಕರ ಒತ್ತಾಸೆ, ಸಮಾಜದ ನಿರೀಕ್ಷೆಗಳಿಗೆ ಧಕ್ಕೆ ಬಾರದಂತೆ ಸಜ್ಜನರಾಗಿ, ಸಾಧಕರಾಗಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಅನಿತಾ ಭಟ್ ಮಾತನಾಡಿ, ಮನೋವಿಜ್ಞಾನದ ಪದವಿ ಕಲಿಕೆ ನಂತರ ಮುಂದೇನು ಎಂಬ ಕುತೂಹಲ, ಕೌತುಕ ಗೊಂದಲಗಳಿಗೆ ಉತ್ತರವೇ ಈ ಕಾರ್ಯಾಗಾರವಾಗಿದೆ. ವೃತ್ತಿ ಜೀವನದ ಜಂಜಾಟದಲ್ಲಿ ನಮಗೆ ನಾವು ಸಮಯ ನೀಡಲಾಗದೇ ನಿರ್ಲಕ್ಷ್ಯ ಕ್ಕೊಳಗಾದ ಮಾನಸಿಕ ಆರೋಗ್ಯದ ಕುರಿತು ಬೆಳಕು ಚೆಲ್ಲುವ ಪ್ರಯತ್ನ ಕೂಡ ನಡೆಯಲಿದೆ ಎಂದರು.

ಇದನ್ನೂ ಓದಿ: BY Vijayendra: ಧರಣಿ ಕುಳಿತ ಶಾಸಕ ಬಿ.ವೈ. ವಿಜಯೇಂದ್ರ! ತಾರಕಕ್ಕೇರಿದ ಮರ ಸಾಗಾಟ ಗಲಾಟೆ

ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಶಿವಮೊಗ್ಗ ಕಟೀಲ್ ಅಶೋಕ ಪೈ ಮೆಮೋರಿಯಲ್ ಕಾಲೇಜಿನ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಅರ್ಚನಾ ಭಟ್ ಮಾತನಾಡಿ, ಮನೋವಿಜ್ಞಾನದ ಅಧ್ಯಯನದಿಂದ ದೊರೆಯುವ ವಿಭಿನ್ನ ಅವಕಾಶಗಳನ್ನು ಹಾಗೂ ಸಾಧ್ಯತೆಗಳನ್ನು ವಿವರಿಸಿದರು.

ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾದ ಶಿವಮೊಗ್ಗ ಕಟೀಲ್ ಅಶೋಕ ಪೈ ಮೆಮೋರಿಯಲ್ ಕಾಲೇಜಿನ ಪ್ರಾಚಾರ್ಯೆ ಡಾ. ಸಂಧ್ಯಾ ಕಾವೇರಿ ಮಾತನಾಡಿದರು. ಈ ಸಂದರ್ಭದಲ್ಲಿ ಕಾಲೇಜಿನ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕ ವರ್ಗದವರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: Video: ಕೈಯಲ್ಲಿ ಚಹಾ ಹಿಡಿದು, ನಕಲಿ ವರದಿಗಾರನಿಗೆ ನೀರಿಳಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ!

ವಿದ್ಯಾರ್ಥಿನಿ ಪಲ್ಲವಿ ನಾಯ್ಕ ಸ್ವಾಗತಿಸಿದರು. ಚಂದನಾ ಮಡಿವಾಳ ನಿರೂಪಿಸಿದರು. ಗಾಯತ್ರಿ ಮರಾಠಿ ವಂದಿಸಿದರು.

Exit mobile version