Site icon Vistara News

Uttara Kannada News: ಉತ್ತಮ ಆರೋಗ್ಯಕ್ಕಾಗಿ ಯೋಗಾಭ್ಯಾಸ ಅಳವಡಿಸಿಕೊಳ್ಳಿ: ಶಾಸಕ ಶಿವರಾಮ ಹೆಬ್ಬಾರ

International Yoga Day celebration at yallapura

ಯಲ್ಲಾಪುರ: ಹಣದಿಂದ ಎಲ್ಲವನ್ನೂ ಪಡೆಯಬಹುದು, ಆದರೆ ಆರೋಗ್ಯವನ್ನಲ್ಲ. ಉತ್ತಮ ಆರೋಗ್ಯಕ್ಕಾಗಿ ಯೋಗಭ್ಯಾಸವು ಅತ್ಯವಶ್ಯಕ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಪಟ್ಟಣದ ಅಡಿಕೆ ಭವನದಲ್ಲಿ ಬುಧವಾರ ಪತಂಜಲಿ ಯೋಗ ಸಮಿತಿ, ಅಡಿಕೆ ವರ್ತಕರ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇದನ್ನೂ ಓದಿ: Monsoon Fashion: ಮಾನ್ಸೂನ್‌ ಫ್ಯಾಷನ್‌ಗೆ ಮರಳಿದ ಮಲ್ಟಿ ಲೇಯರ್ಡ್ ಲುಕ್‌

ಎಷ್ಟೇ ಹಣವಂತರಾಗಿದ್ದರೂ ಆರೋಗ್ಯ ಸರಿಯಿಲ್ಲದಿದ್ದರೆ ಏನನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಉತ್ತಮ ಆರೋಗ್ಯವನ್ನು ಶಾಶ್ವತವಾಗಿರಿಸಿಕೊಳ್ಳಲು ಪ್ರತಿದಿನ ಯೋಗಾಭ್ಯಾಸ ಮಾಡಬೇಕು ಎಂದರು.

ನಿವೃತ್ತ ಸಂಸ್ಕೃತ ಅಧ್ಯಾಪಕ ವೆಂಕಟರಮಣ ಭಟ್ಟ ಯೋಗದ ಮಹತ್ವದ ಕುರಿತು ಉಪನ್ಯಾಸ ನೀಡಿ ಮಾತನಾಡಿ, ಜೀವನವು ರೋಗಮಯವಾಗಬಾರದು. ಬದಲಾಗಿ ಯೋಗಮಯವಾಗಿರಬೇಕು. ಯೋಗದ ವಿವಿಧ ಮಜಲುಗಳನ್ನು ನಮ್ಮ ಪ್ರಾಚೀನ ಋಷಿಮುನಿಗಳು ತಮ್ಮ ಗ್ರಂಥಗಳಲ್ಲಿ ಬರೆದಿಟ್ಟಿದ್ದಾರೆ. ಅದನ್ನು ಅಭ್ಯಾಸ ಮಾಡುತ್ತ ಗುರು ಮುಖೇನ ಯೋಗವನ್ನು ನಾವು ಕಲಿತುಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ 4ನೇ ಬಾರಿ ಶಾಸಕರಾಗಿರುವ ಶಿವರಾಮ ಹೆಬ್ಬಾರ ಅವರನ್ನು ಸಮಿತಿ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಇದನ್ನೂ ಓದಿ: Yoga For Kids: ಮಕ್ಕಳ ಸಮಗ್ರ ಬೆಳವಣಿಗೆಗೆ ಸು’ಯೋಗ’, ಯಾವ ಆಸನಗಳು ಸೂಕ್ತ?

ಯೋಗ ಶಿಕ್ಷಕರಾದ ದಿವಾಕರ ಮರಾಠಿ ನಾಗೇಶ ರಾಯ್ಕರ್ ಕನಕಪ್ಪ ಅವರು ಯೋಗಾಸನ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ವೇದಿಕೆಯಲ್ಲಿ ಪತಂಜಲಿ ಯೋಗ ಸಮಿತಿಯ ಅಧ್ಯಕ್ಷ ವಿ.ಕೆ. ಭಟ್ಟ, ಕಾರ್ಯದರ್ಶಿ ಸತೀಶ ಹೆಗಡೆ, ಅಡಿಕೆ ವರ್ತಕರ ಸಂಘದ ಅಧ್ಯಕ್ಷ ರವಿ ಹೆಗಡೆ, ಸತ್ಯಸಾಯಿ ಸೇವಾ ಸಮಿತಿಯ ಕೆ.ಟಿ ಭಟ್ಟ, ವಿಹಿಪ ತಾಲೂಕಾಧ್ಯಕ್ಷ ನಾರಾಯಣ ನಾಯಕ, ಈಶ್ವರೀಯ ವಿಶ್ವವಿದ್ಯಾಲಯದ ಶಿವಲೀಲಾ, ಪತಂಜಲಿ ಮಹಿಳಾ ಪ್ರಭಾರಿ ಶೈಲಶ್ರೀ ಭಟ್ಟ ಇದ್ದರು.

ಹಿರಿಯ ವಕೀಲ ಜಿ ಎಸ್ ಭಟ್ಟ ಹಳವಳ್ಳಿ ಸ್ವಾಗತಿಸಿದರು. ಸುಬ್ರಾಯ ಭಟ್ಟ ನಿರೂಪಿಸಿದರು. ರಾಮನಾಥ ಭಟ್ಟ ವಂದಿಸಿದರು.

Exit mobile version