ಕಾರವಾರ: ಜ.22 ರಂದು ಅಯೋಧ್ಯೆಯ ರಾಮಮಂದಿರದಲ್ಲಿ (Ayodhya Ram Mandir) ಶ್ರೀರಾಮ ಪ್ರಾಣ ಪ್ರತಿಷ್ಠೆಯು ನೆರವೇರಲಿದ್ದು, ಈ ವಿಶೇಷ ಸಂದರ್ಭದಲ್ಲಿ ಕುಮಟಾ ತಾಲೂಕಿನ ಕೊಂಕಣ ಎಜುಕೇಶನ್ ಟ್ರಸ್ಟ್‌ನ ಸರಸ್ವತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ವಿಶೇಷ ರೀತಿಯಲ್ಲಿ ರಾಮವಂದನೆ (Ramavandane) ಸಲ್ಲಿಸಿದ್ದಾರೆ.
300 ವಿದ್ಯಾರ್ಥಿಗಳು ಸೇರಿ ಸರತಿ ಸಾಲಿನಲ್ಲಿ ನಿಂತು ಸಂಸ್ಕೃತ ಭಾಷೆಯಲ್ಲಿ ‘ಜಯ ಶ್ರೀರಾಮ’ ಎಂಬುದಾಗಿ ಚಿತ್ರ ಮೂಡಿಸಿದ್ದಾರೆ. ಜತೆಯಲ್ಲಿ ಕೋದಂಡ ರಾಮನ ಬಿಲ್ಲು ಬಾಣವನ್ನು ರಚಿಸುವ ಮೂಲಕ ರಾಮವಂದನೆಯನ್ನು ಸಲ್ಲಿಸಿ, ಎಲ್ಲರಿಗೂ ಕಾಣುವಂತೆ ಶ್ರೀ ರಾಮ ಎಂಬುದಾಗಿ ಬರೆಯುವ ಮೂಲಕ ವಿವಿಧ ಭಂಗಿಗಳನ್ನು ಪ್ರದರ್ಶಿಸಿ ಗಮನ ಸೆಳೆದರು.
ಇದನ್ನೂ ಓದಿ: Ram Mandir: ರಾಮಮಂದಿರ ಪ್ರತಿಷ್ಠಾಪನೆ ದಿನವನ್ನು ರಾಮನವಮಿಯಂತೆ ಆಚರಿಸಿ: ರವಿಶಂಕರ್ ಗುರೂಜಿ
ವಿದ್ಯಾರ್ಥಿಗಳು ರಾಮ ಭಜನೆ ಮಾಡುತ್ತಾ ಸರತಿ ಸಾಲಿನಲ್ಲಿ ಬಂದು, ಜಯ ಶ್ರೀರಾಮ ಎಂಬುದಾಗಿ ನಿಲ್ಲುತ್ತಿದ್ದ ದೃಶ್ಯ ವಿಶೇಷವಾಗಿ ಸೆರೆಯಾಗಿದೆ. ಫುಲ್ ಫ್ರೇಮ್ ಫೋಟೋಗ್ರಾಫಿಯ ಗಜು ಹೆಗಡೆ ವಿದ್ಯಾರ್ಥಿಗಳ ಈ ವಿಶೇಷ ರಾಮವಂದನೆಯ ದೃಶ್ಯವನ್ನು ತಮ್ಮ ಡ್ರೋನ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಮಕ್ಕಳ ಈ ವಿಶೇಷ ಪ್ರಯತ್ನ ಇದೀಗ ಸಾಮಾಜಿಕ ಜಾಲತಾಣದಲ್ಲಿಯೂ ಸಾಕಷ್ಟು ವೈರಲ್ ಆಗಿದೆ.
ಇದನ್ನೂ ಓದಿ: Curd Rice Benefits: ನೀವು ಸದಾ ಸಂತೋಷವಾಗಿರಬೇಕೇ? ಹಾಗಿದ್ದರೆ ಮೊಸರನ್ನ ತಿನ್ನಿ!
ವಿದ್ಯಾರ್ಥಿಗಳು ವಿಶೇಷ ಕಾರ್ಯಕ್ರಮದ ಭಾಗವಾಗಿ ಹಮ್ಮಿಕೊಂಡಿದ್ದ ಈ ಚಟುವಟಿಕೆಗೆ ಮಾರ್ಗದರ್ಶನ ಮಾಡಿದ ಶಿಕ್ಷಕರ ಬಗ್ಗೆಯೂ ಪ್ರಶಂಸೆ ವ್ಯಕ್ತವಾಗಿದೆ.