ಯಲ್ಲಾಪುರ: ವಿಶ್ವ ಹಿಂದೂ ಪರಿಷತ್ ವತಿಯಿಂದ ಲೋಕ ಕಲ್ಯಾಣಕ್ಕಾಗಿ ಅಯೋಧ್ಯೆಯಲ್ಲಿ (Ayodhya) ನಡೆಯುವ ಯಜ್ಞ ಯಾಗಾದಿಗಳನ್ನು ನೆರವೇರಿಸಲು ಉತ್ತರ ಕನ್ನಡ (Uttara Kannada) ಹಾಗೂ ಶಿವಮೊಗ್ಗ (Shivamogga) ಜಿಲ್ಲೆಯ 40 ಜನ ವೈದಿಕರು, ಶ್ರೀರಾಮನ ಸೇವೆಗಾಗಿ ಸೇವಾ ಮನೋಭಾವನೆಯಿಂದ ಭಾಗವಹಿಸಲಿದ್ದಾರೆ ಎಂದು ಗೋಪಾಲಕೃಷ್ಣ ಭಟ್ ಹಂಡ್ರೆಮನೆ ಮಾಹಿತಿ ನೀಡಿದರು.
ಮಂಗಳವಾರ ಪಟ್ಟಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 21 ರಿಂದ 28 ರವರೆಗೆ 7 ದಿನಗಳ ಕಾಲ ಅಯೋಧ್ಯೆಯಲ್ಲಿ ಋಗ್ವೇದ, ಯಜುರ್ವೇದ, ಸಾಮವೇದ, ಶುಕ್ಲ ಯಜುರ್ವೇದ, ವಾಲ್ಮೀಕಿ ರಾಮಾಯಣದ ಪಠಣ, ಭಾಗವತ ಸಪ್ತಾಹ ಸೇರಿದಂತೆ ಇತರೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ಇದನ್ನೂ ಓದಿ: Weather Report : ಕರಾವಳಿ ಸೇರಿ ಈ 9 ಜಿಲ್ಲೆಗಳಲ್ಲಿ ನಾಳೆ ಭಾರಿ ಮಳೆ ಸಾಧ್ಯತೆ
ಋಗ್ವೇದ – ಗುರುಪಾದ ಭಟ್, ಚಿನ್ಮಯ ಜೋಯಿಷ್ ಮತ್ತು ಚನ್ನಕೇಶವ ಅವಧಾನಿ ನಿತ್ತೂರು, ಸಾಮವೇದ – ವಿನಾಯಕ ಸಾಮಗ ಕವಲಕ್ಕಿ, ಶುಕ್ಲ ಯಜುರ್ವೇದ – ಗಿರೀಶ್ ಭಟ್, ಭಾಗವತ – ಗಣಪತಿ ಭಟ್ ಕವಲಕ್ಕಿ ಮುಂತಾದವರ ನೇತೃತ್ವದಲ್ಲಿ ನೆರವೇರಲಿದೆ ಎಂದರು.
ಈ ಸಂದರ್ಭದಲ್ಲಿ ಟಿ.ಆರ್. ಹೆಗಡೆ ಹಾಗೂ ಪ್ರಶಾಂತ ಹೆಗಡೆ ಇದ್ದರು.