Site icon Vistara News

Uttara Kannada News: ಕುಮಟಾದ ಹೆಗಡೆಯಲ್ಲಿ ಬಿಳಿ ಹೆಬ್ಬಾವು ರಕ್ಷಣೆ

rescued of the white python at Kumata

ಕಾರವಾರ: ಬಿಳಿ ಹೆಬ್ಬಾವೊಂದು (white python) ಕುಮಟಾ (Kumata) ತಾಲೂಕಿನ ಹೆಗಡೆ ಗ್ರಾಮದ ಗಾಂಧಿ ನಗರದ ದೇವಿ ನಾರಾಯಣ ಮುಕ್ರಿ ಎಂಬುವವರ ಮನೆಯ ಅಂಗಳದಲ್ಲಿ ಸೋಮವಾರ ರಾತ್ರಿ ಪ್ರತ್ಯಕ್ಷವಾದ ಘಟನೆ ಜರುಗಿದೆ.

ಬಿಳಿ ಹೆಬ್ಬಾವು ಕಂಡುಬಂದ ತಕ್ಷಣ ಸಮೀಪದ ಮನೆಯ ನಿವಾಸಿ ಗಣೇಶ್ ಮುಕ್ರಿ, ಉರಗ ರಕ್ಷಕ ಪವನ್ ನಾಯ್ಕ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪವನ್ ಅವರು ಹೆಬ್ಬಾವನ್ನು ರಕ್ಷಣೆ ಮಾಡಿದ್ದಾರೆ.

ಹೆಬ್ಬಾವನ್ನು ರಾತ್ರಿ ವೇಳೆಯಾಗಿದ್ದರಿಂದ ಬೆಳಗ್ಗೆ ಕುಮಟಾ ಅರಣ್ಯ ಇಲಾಖೆಗೆ ಒಪ್ಪಿಸಲಾಯಿತು. ಮೈಮೇಲೆ ಸಣ್ಣ ಪುಟ್ಡ ಗಾಯಗಳಿರುವುದರಿಂದ ಹೆಬ್ಬಾವನ್ನು ಮೈಸೂರು ಮೃಗಾಲಯಕ್ಕೆ ರವಾನಿಸಲಾಗಿದೆ.

ಕಳೆದ ವರ್ಷವಷ್ಟೇ ಕುಮಟಾ ತಾಲ್ಲೂಕಿನ ಮಿರ್ಜಾನ್‌ನಲ್ಲಿ ಸಣ್ಣ ಗಾತ್ರದ ಬಿಳಿ ಹೆಬ್ಬಾವು ಕಾಣಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಉರಗ ರಕ್ಷಕ ಪವನ್ ನಾಯ್ಕ ಅದನ್ನು ರಕ್ಷಣೆ ಮಾಡಿದ್ದರು. ಈಗ ಅದಕ್ಕಿಂತ 3 ಪಟ್ಟು ದೊಡ್ಡ ಗಾತ್ರದ ಹೆಬ್ಬಾವು ಹೆಗಡೆ ಗ್ರಾಮದಲ್ಲಿ ಕಾಣಿಸಿದ್ದರಿಂದ ಜನರು ಆತಂಕಗೊಂಡಿದ್ದರು.

ಇದನ್ನೂ ಓದಿ: Asia Cup 2023: ಹೀಗಿರಲಿದೆ ಪಾಕ್​ ವಿರುದ್ಧದ ಪಂದ್ಯಕ್ಕೆ ಭಾರತದ ಆಡುವ ಬಳಗ

ಈ ರೀತಿಯ ಬಿಳಿಯ ಹಾವು ಕರ್ನಾಟಕದಲ್ಲಿ ಇದುವರೆಗೆ ಮೂರು ಬಾರಿ ಮಾತ್ರ ರಕ್ಷಣೆಯಾಗಿದೆ. ಅದರಲ್ಲಿ 2 ಬಾರಿ ಕುಮಟಾದಲ್ಲೇ ರಕ್ಷಣೆಯಾಗಿದ್ದು ವಿಶೇಷವಾಗಿದೆ. ಹಾಗೂ ಭಾರತದಲ್ಲೇ ಅತೀ ದೊಡ್ಡ ಬಿಳಿ ಹೆಬ್ಬಾವಿನ ರಕ್ಷಣೆಯ ಕೀರ್ತಿಯೂ ಉರಗ ರಕ್ಷಕ ಪವನ್ ನಾಯ್ಕ ಅವರಿಗೆ ಸಿಕ್ಕಂತಾಗಿದೆ.

ಡಿಎಫ್ಓ ರವಿಶಂಕರ್, ಎಸಿಎಫ್ ಜಿ ಲೋಹಿತ್, ಆರ್‌ಎಫ್‌ಓ ಎಸ್ ಟಿ ಪಟಗಾರ್, ಡಿಆರ್‌ಎಫ್‌ಓ ಹೂವಣ್ಣ ಗೌಡ ಸ್ಥಳದಲ್ಲಿದ್ದರು.

Exit mobile version