ಭಟ್ಕಳ: ಅರಣ್ಯ ಇಲಾಖೆ (Forest department) ವತಿಯಿಂದ ನಗರದ ಸಾಲು ಮರದ ತಿಮ್ಮಕ್ಕ ಪಾರ್ಕ್‌ನಲ್ಲಿ ಏರ್ಪಡಿಸಲಾಗಿದ್ದ ವನಮಹೋತ್ಸವ ಕಾರ್ಯಕ್ರಮವನ್ನು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಉದ್ಘಾಟಿಸಿದರು.
ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆ ಮುಖ್ಯಸ್ಥರೊಂದಿಗೆ ಗಿಡಕ್ಕೆ ನೀರು ಎರೆಯುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಸಚಿವರು, ಕೇವಲ ಗಿಡಗಳನ್ನು ನೆಡುವುದು ಮಾತ್ರ ನಮ್ಮ ಕೆಲಸ ಎಂದು ತಿಳಿಯದೇ, ನೆಟ್ಟ ಗಿಡಗಳನ್ನು ಉಳಿಸಿ ಬೆಳೆಸುವಂತಹ ಕೆಲಸವಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಂತರ ನಡೆದ ಅರಣ್ಯ ಇಲಾಖೆಯ ಯೋಜನೆಯಡಿಯಲ್ಲಿ ಬೆಳೆ ಹಾನಿ, ವನ್ಯ ಜೀವಿಗಳ ದಾಳಿಯಿಂದ ತೊಂದರೆಗೆ ಒಳಗಾದವರಿಗೆ ಪರಿಹಾರ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವ ಮಂಕಾಳ ವೈದ್ಯ ಅವರು, ಬೆಳೆ ಹಾನಿ, ವನ್ಯ ಜೀವಿ ಉಪಟಳದಿಂದ ತೊಂದರೆಗಳಾಗದವರಿಗೆ ಶೀಘ್ರವಾಗಿ ಪರಿಹಾರ ತಲುಪುವಂತಾಗಬೇಕು.
ಇದನ್ನೂ ಓದಿ: Virat kohli : ವಿರಾಟ್ ಕೊಹ್ಲಿಯನ್ನು ಮೂರ್ಖ ಎಂದು ಕರೆದ ನವಿನ್ ಉಲ್ ಹಕ್!
ಅರಣ್ಯ ರಕ್ಷಣೆಗೆ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ನಮ್ಮ ಜಿಲ್ಲೆಯಲ್ಲಿ 80% ಅರಣ್ಯ ಭಾಗವಿದೆ. ನಾವು ಅದನ್ನು ಉಳಿಸಿಕೊಂಡು ಹೋಗಬೇಕಿದೆ. ಅದನ್ನು ಉಳಿಸಿಕೊಂಡು ಹೋಗಲು ಇಲಾಖೆ, ಸರ್ಕಾರ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದೆ ಎಂದರು.
ನಮ್ಮಲ್ಲಿ ಅತಿಕ್ರಮಣದಾರರ ಸಮಸ್ಯೆಯಿದೆ. ಜಿಲ್ಲೆಯಲ್ಲಿ ಲಕ್ಷಕ್ಕೂ ಅಧಿಕ ಕುಟುಂಬವಿದೆ. ಭಟ್ಕಳ ಕ್ಷೇತ್ರದಲ್ಲಿಯೇ 25000 ದಷ್ಟು ಕುಟುಂಬಗಳು ಅರಣ್ಯ ಅತಿಕ್ರಮಣ ಮಾಡಿ ತಮ್ಮ ಜೀವನ ರೂಪಿಸಿಕೊಂಡಿದ್ದಾರೆ. ಆದರೆ ಅವರೂ ಕೂಡ ಗಿಡ ಮರಗಳನ್ನು ಬೆಳೆಸಿ ಅರಣ್ಯ ಉಳಿಸುತ್ತಿದ್ದಾರೆ.
ಇದನ್ನೂ ಓದಿ: Road Accident : ಕಾರು- ಕೆಎಸ್‌ಆರ್‌ಟಿಸಿ ಬಸ್ ಮುಖಾಮುಖಿ ಡಿಕ್ಕಿ; ಜೀವ ಬಿಟ್ಟ ದಂಪತಿ
ಇಲಾಖೆಯವರು ಅರಣ್ಯ ಉಳಿಸುವ ನೆಪದಲ್ಲಿ ಬಡ ಅತಿಕ್ರಮಣದಾರರಿಗೆ ತೊಂದರೆ ಕೊಡಬೇಡಿ, ಹೊಸದಾಗಿ ಅತಿಕ್ರಮಣ ಮಾಡಲು ಬಿಡಬೇಡಿ, ಜೀವನಕ್ಕಾಗಿ ಅತಿಕ್ರಮಣ ಮಾಡಿ ಜೀವನ ಸಾಗಿಸುತ್ತಿದ್ದವರಿಗೆ ಯಾವುದೇ ತೊಂದರೆ ಆಗಬಾರದು, ಅವರಿಗೆ ತೊಂದರೆ ಆಗಲು ನಾನು ಬಿಡುವುದಿಲ್ಲ, ಈ ಹಿಂದೆ ಇರುವ ಎಲ್ಲ ಅತಿಕ್ರಮಣದಾರರಿಗೆ ನಾವು ಪಟ್ಟ ಕೊಡುತ್ತೇವೆ. ಆದರೆ ಅತಿಕ್ರಮಣದಾರರು ಕೂಡ ತಮ್ಮ ವ್ಯಾಪ್ತಿ ಮೀರಬಾರದು, ಅಧಿಕಾರಿಗಳೊಂದಿಗೆ ಸಹಕರಿಸಬೇಕು. ಅವರು ನಮ್ಮ ಅರಣ್ಯ ಸಂಪತ್ತಿನ ರಕ್ಷಕರು ಎಂದರು.
ಇದನ್ನೂ ಓದಿ: Weather report: ಕೈ ಕೊಟ್ಟ ಮುಂಗಾರು,16 ಜಿಲ್ಲೆಗಳಲ್ಲಿ ಬರಗಾಲ; ಈ 10 ಜಿಲ್ಲೆಗಷ್ಟೇ ನಾಳೆ ಮಳೆಗಾಲ
ಇಲಾಖೆಯ ಕೆಲವೊಂದು ನೀತಿಗಳು ಬದಲಾಗಬೇಕಿದ್ದು, ಜನರಿಗೆ ಒಳ್ಳೆಯದಾಗುವಂತೆ ನೀತಿಗಳಿರಬೇಕು. ಹಾವುಗಳು ಅರಣ್ಯ ಇಲಾಖೆಯ ಸಂಪತ್ತು. ಆದರೆ ಅವು ಮನುಷ್ಯರನ್ನು ಕಚ್ಚಿದ್ರೆ ತೋಟಗಾರಿಕೆ ಇಲಾಖೆ ಪರಿಹಾರ ನೀಡಬೇಕಿದೆ. ಆದರೆ ಪರಿಹಾರವನ್ನು ಅರಣ್ಯ ಇಲಾಖೆಯೇ ನೀಡುವಂತಾಗಬೇಕು. ಈ ಬಗ್ಗೆ ನಾನು ಕೂಡ ಪ್ರಯತ್ನ ಮಾಡುತ್ತೇನೆ. ನಿಮ್ಮ ಇಲಾಖೆ ವ್ಯಾಪ್ತಿಯಲ್ಲಿ ನೀವು ಕೂಡ ಪ್ರಯತ್ನ ಮಾಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ವೇದಿಕೆಯಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.