ಯಲ್ಲಾಪುರ: ತಾಲೂಕಿನ ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲೆಯಲ್ಲಿ ನೇತಾಜಿ ಸಮಾಜ ವಿಜ್ಞಾನ ಸಂಘ ಹಾಗೂ ಮತದಾರರ ಸಾಕ್ಷರತಾ ಕ್ಲಬ್ ಅಡಿಯಲ್ಲಿ ಮಂಗಳವಾರ ಶಾಲಾ ಸಂಸತ್ ಚುನಾವಣೆ (School Parliament Elections) ನಡೆಸಲಾಯಿತು. ಈ ಮೂಲಕ 2023-24 ನೇ ಸಾಲಿಗೆ ಶಾಲಾ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು.
ಕಳೆದ ಎಂಟು ದಿನಗಳ ಹಿಂದೆ ಚುನಾವಣಾ ಅಧಿಸೂಚನೆ ಹೊರಡಿಸುವುದರೊಂದಿಗೆ ಪ್ರಾರಂಭವಾದ ಚುನಾವಣಾ ಪ್ರಕ್ರಿಯೆಯು ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂತೆಗೆದುಕೊಳ್ಳುವಿಕೆ, ನಾಮಪತ್ರ ಪರಿಶೀಲನೆ ಮುಂತಾದ ಎಲ್ಲಾ ಚುನಾವಣಾ ಪ್ರಕ್ರಿಯೆಗಳನ್ನು ಒಳಗೊಂಡಿತ್ತು. ವಿದ್ಯಾರ್ಥಿಗಳಲ್ಲಿ ಮತದಾನದ ಕುರಿತಾದ ಜಾಗೃತಿ ಮೂಡಿಸಲು ಹಾಗೂ ಚುನಾವಣೆಗಳ ಮಹತ್ವ ಹಾಗೂ ಚುನಾವಣಾ ಪ್ರಕ್ರಿಯೆಗಳ ಅರಿವು ಮೂಡಿಸುವ ದೃಷ್ಟಿಯಿಂದ ಈ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು. ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಸಂಭ್ರಮದಿಂದ ಚುನಾವಣೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: Drugs Menace: ಡ್ರಗ್ಸ್ ಹಾವಳಿ ತಡೆಗೆ ವಿಶೇಷ ತಂಡ ರಚಿಸಲು ಸಿಎಂ ಸಿದ್ದರಾಮಯ್ಯ ಸೂಚನೆ
ಮುಖ್ಯಾಧ್ಯಾಪಕ ಪ್ರಸನ್ನ ಹೆಗಡೆ ಹಾಗೂ ಸಮಾಜ ವಿಜ್ಞಾನ ಶಿಕ್ಷಕ ರಾಘವೇಂದ್ರ ಹೆಗಡೆಯವರ ನೇತೃತ್ವದಲ್ಲಿ ನಡೆದ ಈ ಚುನಾವಣೆಯಲ್ಲಿ ಎಲ್ಲಾ ಶಿಕ್ಷಕ ವೃಂದದವರು ಹಾಗೂ ಸಿಬ್ಬಂದಿಗಳು ಚುನಾವಣಾ ಸಿಬ್ಬಂದಿಗಳಾಗಿ ಕಾರ್ಯನಿರ್ವಹಿಸಿದರು.
ಇದನ್ನೂ ಓದಿ: Road Accident : ನಾಳೆ ಇಬ್ಬರು ಹೆಣ್ಣುಮಕ್ಕಳ ಮದುವೆ ಇತ್ತು; ಇವತ್ತು ಅಪಘಾತದಲ್ಲಿ ಅಪ್ಪನೇ ಇಲ್ಲವಾದರು!
ರಾಜೀವ ನರಸಿಂಹ ಗಾಂವ್ಕಾರ್ ಮುಖ್ಯಮಂತ್ರಿಯಾಗಿ, ಶ್ರೀಪಾದ ಪಟಗಾರ ಕ್ರೀಡಾ ಮಂತ್ರಿಯಾಗಿ, ನಂದಿತಾ ಮಹೇಶ ತಾಮ್ಸೆ ಸಾಂಸ್ಕೃತಿಕ ಮಂತ್ರಿಯಾಗಿ, ನಾಗೇಂದ್ರ ಶೇಟ್ ಸ್ವಚ್ಚತಾ ಮಂತ್ರಿಯಾಗಿ, ಗಣೇಶ ದೇಸಾಯಿ ಪ್ರಾರ್ಥನಾ ಮಂತ್ರಿಯಾಗಿ ಹಾಗೂ ಕಿರಣ ರೂಪ ಗೌಡ ಅಕ್ಷರ ದಾಸೋಹ ಮಂತ್ರಿಯಾಗಿ ಆಯ್ಕೆಯಾದರು.