Site icon Vistara News

Uttara Kannada News: ಮಕ್ಕಳ ವ್ಯಕ್ತಿತ್ವ ಬೆಳೆಸಲು ಸ್ಕೌಟ್ಸ್ ಗೈಡ್ಸ್ ತರಬೇತಿ ಸಹಾಯಕ: ಎನ್.ಆರ್.ಹೆಗಡೆ

BEO NR Hegade spoke in Yallapur

ಯಲ್ಲಾಪುರ: ಸ್ಕೌಟ್ಸ್ ಗೈಡ್ಸ್ (Scouts Guides) ತರಬೇತಿಯು ಮಕ್ಕಳ ವ್ಯಕ್ತಿತ್ವ ಬೆಳೆಸಲು (personality development) ಸಹಾಯಕವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ಹೇಳಿದರು.

ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಶ್ರೀ ಗಂಗಾಧರೇಂದ್ರ ಸರಸ್ವತಿ ಸಭಾಭವನದಲ್ಲಿ ಜಿಲ್ಲಾ ಸ್ಕೌಟ್ಸ್ ಗೈಡ್ಸ್ ಸಂಸ್ಥೆ ಮತ್ತು ವಿಶ್ವದರ್ಶನ ಬಿ.ಇಡಿ ಕಾಲೇಜಿನ ಸಹಯೋಗದಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಪ್ರಾರಂಭಿಕ ಮಾಹಿತಿ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ʼಸದಾ ಜಾಗೃತಾವಸ್ಥೆಯಲ್ಲಿರುʼ ಎಂಬ ಧ್ಯೇಯ ವಾಕ್ಯದ ಭಾರತ ಸ್ಕೌಟ್ಸ್ ಗೈಡ್ಸ್ ಸಮಾಜದ ವ್ಯಕ್ತಿಯು ತನ್ನ ಮೇಲಿರುವ ಅನೇಕ ಋಣಗಳನ್ನು ತೀರಿಸಲು, ಅವಶ್ಯಕತೆ ಇರುವಲ್ಲಿ ಸಹಾಯ ನೀಡಲು, ತ್ಯಾಗ, ನಿಷ್ಠೆಯ ಮೂಲಕ ಜಗತ್ತಿಗೆ ಮಾದರಿಯಾಗಲು ಸಹಾಯ ಮಾಡುತ್ತದೆ ಎಂದರು.

ಇದನ್ನೂ ಓದಿ: Gruha lakshmi Scheme : 2000 ರೂ. ಪಡೆಯಲು ನೀವು ಅರ್ಹರಾ? ಅರ್ಜಿ ಹಾಕೋದೆಲ್ಲಿ? ಇಲ್ಲಿ ಚೆಕ್‌ ಮಾಡಿಕೊಳ್ಳಿ

ಅಧ್ಯಕ್ಷತೆ ವಹಿಸಿದ್ದ ಪಿ.ಯು ಕಾಲೇಜಿನ ಪ್ರಾಂಶುಪಾಲ ಡಾ. ಡಿ.ಕೆ.ಗಾಂವ್ಕರ್ ಮಾತನಾಡಿದರು.

ಇದೇ ಸಂದರ್ಭದಲ್ಲಿ ಭಾರತ ಸ್ಕೌಟ್ಸ್ ಗೈಡ್ಸ್ ನ ವಾರ್ಷಿಕ ಕಾರ್ಯ ಯೋಜನೆಯನ್ನು ಗಣ್ಯರು ಬಿಡುಗಡೆಗೊಳಿಸಿದರು.

ಈ ವೇಳೆ ತಾಲೂಕಾ ಸ್ಕೌಟ್ಸ್ ಗೈಡ್ಸ್ ಅಧ್ಯಕ್ಷ ನಂದನ ಬಾಳಗಿ, ಮುಖ್ಯಾಧ್ಯಾಪಕಿ ಮುಕ್ತಾ ಶಂಕರ, ಕಾರ್ಯದರ್ಶಿ ಸುಧಾಕರ ನಾಯಕ, ಜಿಲ್ಲಾ ಸಂಚಾಲಕ ವೀರೇಶ ಮಾದರ, ಮಹೇಶ ನಾಯ್ಕ, ಖೈರೂನ್ ಶೇಖ್, ಕಲಾವತಿ ಗೌಡ, ಗುರು ಬಂಟ, ಉಪಸ್ಥಿತರಿದ್ದರು.

ಇದನ್ನೂ ಓದಿ: Video Viral : ಸೈದಾಪುರದಲ್ಲಿ ಸೀರೆ ಕದ್ದ ನಾರಿಯರಿಗೆ ಧರ್ಮದೇಟು!

ಕನ್ನಡ ಮಾಧ್ಯಮ ಗೈಡ್ಸ್ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪ್ರಶಿಕ್ಷಣಾರ್ಥಿ ಪ್ರತಿಮಾ ನಿರ್ವಹಿಸಿದರು. ನವೀನಕುಮಾರ ಎ.ಜಿ ಸ್ವಾಗತಿಸಿದರು. ಚಂದ್ರಶೇಖರ ಸಿ.ಎಸ್ ವಂದಿಸಿದರು.

Exit mobile version