ಶಿರಸಿ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡಲಾಗುವ ಪ್ರತಿಷ್ಠಿತ ಮಾಧ್ಯಮ ಶ್ರೀ ಪ್ರಶಸ್ತಿಗೆ ಹಿರಿಯ ಪತ್ರಕರ್ತ (senior journalist) ನರಸಿಂಹ ಅಡಿ (ಗುರು ಅಡಿ) ಆಯ್ಕೆಯಾಗಿದ್ದಾರೆ.
ಈ ಕುರಿತು ನಗರದ ಪತ್ರಿಕಾ ಭವನದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಸಂದೇಶ ಭಟ್ ಬೆಳಖಂಡ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಿರ್ಮಾನಿಸಲಾಗಿದೆ. ಮುಂಬರುವ ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ನರಸಿಂಹ ಅಡಿ ಅವರು, ಏಪ್ರಿಲ್ 2009 ರಿಂದ ಪಿಟಿಐ ಸುದ್ದಿ ಸಂಸ್ಥೆ ಹಾಗೂ 2007 ರಿಂದ ರಾಷ್ಟ್ರೀಯ ಸ್ತರದ ಹಿಂದಿ ದಿನಪತ್ರಿಕೆಯ ಉತ್ತರ ಕನ್ನಡ ಜಿಲ್ಲಾ ವರದಿಗಾರರಾಗಿದ್ದರು. ಕಳೆದ 10 ವರ್ಷಗಳಿಂದ ಸಂಯುಕ್ತ ಕರ್ನಾಟಕ ಕನ್ನಡ ದಿನಪತ್ರಿಕೆ ಶಿರಸಿ ವರದಿಗಾರರಾಗಿ, ಎರಡು ದಶಕಗಳಿಂಗಿತಲೂ ಹೆಚ್ಚು ಮಾಧ್ಯಮದ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ: Gold rate today : ಬಂಗಾರದ ದರದಲ್ಲಿ 120 ರೂ. ಏರಿಕೆ, ಬೆಳ್ಳಿ ಯಥಾಸ್ಥಿತಿ
2001 ರಿಂದ 6 ವರ್ಷಗಳ ಕಾಲ ತರುಣ ಭಾರತ ಮರಾಠಿ ದೈನಿಕದ ಶಿರಸಿ ಉಪವಿಭಾಗದ ವರದಿಗಾರರಾಗಿ ಮಾಧ್ಯಮ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದರು. ಸಮಾಜಶಾಸ್ತ್ರದಲ್ಲಿ ಎಂಎ ಪದವಿ ಪಡೆದಿರುವ ಗುರು ಅಡಿ ಅವರು, 4 ವರ್ಷಗಳ ಕಾಲ ಸರ್ಕಾರಿ ಮಾಧ್ಯಮ ಕಾಲೇಜಿನ ಅರೆಕಾಲಿಕ ಉದ್ಯೋಗ ಜೆಓಡಿಸಿ ಉಪನ್ಯಾಸಕರಾಗಿಯೂ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: Weather Report : ಬಿರುಗಾಳಿ ಸಹಿತ ಭಾರಿ ಮಳೆ; ಮುಂದಿನ 48 ಗಂಟೆ ಈ ಜಿಲ್ಲೆಯವರು ಎಚ್ಚರವಾಗಿರಿ
ಸಭೆಯಲ್ಲಿ ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ ಕೆರೆಗದ್ದೆ, ಉಪಾಧ್ಯಕ್ಷೆ ವಿನುತಾ ಹೆಗಡೆ, ಮಹಾದೇವ ನಾಯ್ಕ ರಾಜು ಕಾನಸೂರು, ರಾಘವೇಂದ್ರ ಬೆಟ್ಟಕೊಪ್ಪ, ಶಿವು ಹೀರೇಕೈ, ಪ್ರದೀಪ ಶೆಟ್ಟಿ, ರಾಜೇಂದ್ರ ಶಿಂಗನಮನೆ, ಜೆ.ಆರ್. ಸಂತೋಷಕುಮಾರ, ಮಂಜುನಾಥ ಸಾಯಿಮನೆ, ನಾಗರಾಜ ಶೆಟ್ಟಿ, ಮಂಜುನಾಥ ಈರಗೊಪ್ಪ, ಬಿ.ವಿ.ಹುಲಿಗೇಶ, ಗಣೇಶ ಆಚಾರ್ಯ ಇದ್ದರು.