Site icon Vistara News

Uttara Kannada News: ನ.26 ರಂದು ಉಮ್ಮಚಗಿಯಲ್ಲಿ ರಾಜ್ಯಮಟ್ಟದ ಮಕ್ಕಳ ಗೋಷ್ಠಿ: ರಘುನಂದನ ಭಟ್ಟ

State level makkala gosti at Ummachagi on November 26

ಯಲ್ಲಾಪುರ: ನ.26 ರಂದು ತಾಲೂಕಿನ ಉಮ್ಮಚಗಿಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ‘ನಾ ಕಂಡಂತೆ ಲಕ್ಷ್ಮಣ’ ವಿಷಯಾಧಾರಿತ ರಾಜ್ಯಮಟ್ಟದ ಮಕ್ಕಳ ಗೋಷ್ಠಿ ಏರ್ಪಡಿಸಲಾಗಿದೆ ಎಂದು ಅ.ಭಾ.ಸಾ.ಪ. ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ಟ ಹೇಳಿದರು.

ಪಟ್ಟಣದ ಸಂಸ್ಕೃತಿ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ ಮಾತನಾಡಿದ ಅವರು, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಮಕ್ಕಳ ಪ್ರಕಾರ, ಶ್ರೀಮಾತಾ ವೈದಿಕ ಶಿಕ್ಷಣ ಸಂಸ್ಥೆ ಕೋಟೇಮನೆ (ಉಮ್ಮಚಗಿ) ಹಾಗೂ ವ್ಯವಸಾಯ ಸೇವಾ ಸಹಕಾರಿ ಸಂಘ ಉಮ್ಮಚಗಿ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದು, ಗೋಷ್ಟಿಯಲ್ಲಿ 10 ನೇ ತರಗತಿಯೊಳಗಿನ, ರಾಜ್ಯದ ಪ್ರತಿ ಜಿಲ್ಲೆಯಿಂದ ಓರ್ವ ವಿದ್ಯಾರ್ಥಿಯಂತೆ ಆಗಮಿಸಲಿದ್ದು, ಒಟ್ಟು 35 ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ಭಾಗವಹಿಸಲಿದ್ದಾರೆ.

ಗ್ರಾಮೀಣ ಪ್ರದೇಶದ ಪರಿಚಯ ವಿದ್ಯಾರ್ಥಿಗಳಿಗೆ ಮಾಡಿಕೊಡುವ ಉದ್ದೇಶದಿಂದ ಕಾರ್ಯಕ್ರಮವನ್ನು ಗ್ರಾಮೀಣ ಭಾಗದಲ್ಲಿ ಸಂಘಟಿಸುತ್ತಿರುವುದು ಗಮನಾರ್ಹ ಸಂಗತಿ. ಕಾರ್ಯಕ್ರಮವು ಸ್ಥಳೀಯ ಸಂಘ ಸಂಸ್ಥೆಗಳು ಸಂಪೂರ್ಣ ಬೆಂಬಲದೊಂದಿಗೆ ನಡೆಯಲಿದೆ ಎಂದರು.

ಇದನ್ನೂ ಓದಿ: Snake Catch : ಬೃಹತ್‌ ಗಾತ್ರದ ಹೆಬ್ಬಾವನ್ನು ಹಿಡಿದ 12ರ ಬಾಲಕ! Video ಇದೆ ನೋಡಿ!

ಅ.ಭಾ.ಸಾ.ಪ.ದ ಮಕ್ಕಳ ಪ್ರಕಾರದ ರಾಜ್ಯ ಪ್ರಮುಖರಾದ ಸುಜಾತಾ ಹೆಗಡೆ ಕಾಗಾರಕೊಡ್ಲು ನೇತೃತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಬೆಳಿಗ್ಗೆ 10 ಗಂಟೆಗೆ ಉಮ್ಮಚಗಿ ವ್ಯವಸಾಯ ಸೇ.ಸ. ಸಂಘದ ಅಧ್ಯಕ್ಷ ಎಂ.ಜಿ.ಭಟ್ಟ ಸಂಕದಗುಂಡಿ ಉದ್ಘಾಟಿಸಲಿದ್ದಾರೆ. ನಂತರ 10.40 ರಿಂದ 3 ಗಂಟೆಯವರೆಗೆ ವಿವಿಧ ಗೋಷ್ಟಿಗಳು ನಡೆಯಲಿದ್ದು, ಉದ್ಯಮಿ ಡಿ.ಶಂಕರ ಭಟ್ಟ ಪ್ರಧಾನ ಭಾಷಣ ಮಾಡಲಿದ್ದಾರೆ.

ಸಮಾರೋಪ ಸಮಾರಂಭದಲ್ಲಿ ಅ.ಭಾ.ಸಾ.ಪ.ದ ಗೌರವ ಸಲಹೆಗಾರರೂ, ನಿಕಟಪೂರ್ವ ರಾಜ್ಯಾಧ್ಯಕ್ಷರೂ ಆದ ಪ್ರೊ. ಪ್ರೇಮಶೇಖರ ಸಮಾರೋಪ ಭಾಷಣ ಮಾಡುವರು. ಶ್ರೀಮಾತಾ ವೈ.ಶಿ. ಸಂಸ್ಥೆಯ ಅಧ್ಯಕ್ಷ ಟಿ.ವಿ. ಹೆಗಡೆ ಬೆದೆಹಕ್ಲು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: Video viral : ನಾಯಿ ಅಡ್ಡಬಂದು ಬೈಕ್‌ ಸವಾರ ಸಾವು; ಮೃತನ ಮನೆಗೇ ಬಂದು SORRY ಹೇಳಿದ ಶ್ವಾನ!

ಸುದ್ದಿಗೋಷ್ಟಿಯಲ್ಲಿ ಸುಜಾತಾ ಹೆಗಡೆ, ಅ.ಭಾ.ಸಾ.ಪ. ಜಿಲ್ಲಾ ಉಪಾಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ ಇದ್ದರು.

Exit mobile version