ಕುಮಟಾ: ವಿಧಾತ್ರಿ ಅಕಾಡೆಮಿಯ ಸಹಭಾಗಿತ್ವದ ಕೊಂಕಣ ಎಜುಕೇಶನ್ ಟ್ರಸ್ಟ್ ನ ಬಿ. ಕೆ. ಭಂಡಾರ್‌ರ್ಕರ್ಸ್ ಸರಸ್ವತಿ ಪದವಿಪೂರ್ವ ಕಾಲೇಜಿನ (PU College) ದ್ವಿತೀಯ ಪಿಯು ವಿಜ್ಞಾನ (Science) ವಿಭಾಗದಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳು NEET – 2023 ರಲ್ಲಿ ಉತ್ತಮ ಸಾಧನೆ ಮಾಡಿ ಸಂಸ್ಥೆಯ ಗರಿಮೆಯನ್ನು ಹೆಚ್ಚಿಸಿದ್ದಾರೆ.
ಶ್ರೀನಂದಾ ದಿಂಡೆ ಕಾಲೇಜಿಗೆ ಪ್ರಥಮಳಾಗಿ ಹೊರಹೊಮ್ಮಿದ್ದು ಜತೆಗೆ ಕು. ಪ್ರಾಪ್ತಿ ನಾಯಕ್, ಕು. ಸಾತ್ವಿಕ ಭಟ್ಟ, ಕು. ಶ್ರೀಜನಿ ಭಟ್, ಕು. ರಂಜನಾ ಮಡಿವಾಳ, ಕು. ಪ್ರತಿಷ್ಠಾ ಬಿಲ್ಲವ, ಕು. ಶ್ರೇಯಸ್ ಪೈ, ಕು. ರಾಹುಲ ಆರ್ ಶಾನಭಾಗ, ಕು. ಪೂರ್ವ ನಾಯ್ಕ, ಕು. ಸಿಂಧು ಎಮ್., ಕು. ಸ್ನೇಹಾ ಬಿ. ಆರ್. ವಿದ್ಯಾರ್ಥಿನಿಯರು ಈಚೆಗೆ ವೈದ್ಯಕೀಯ ಶಿಕ್ಷಣ ಪದವಿಗಾಗಿ ನಡೆದ ರಾಷ್ಟ್ರ ಮಟ್ಟದ NEET-2023 ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ, ವೈದ್ಯಕೀಯ ಶಿಕ್ಷಣ ಪದವಿಯ ಪ್ರವೇಶಕ್ಕೆ ಅರ್ಹತೆಯನ್ನು ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ.
ಇದನ್ನೂ ಓದಿ:Honda Unicorn : ಹೋಂಡಾ ಯೂನಿಕಾರ್ನ್ ಅಪ್ಡೇಟೆಡ್ ಆವೃತ್ತಿ ಬಿಡುಗಡೆ; ಏನಿದೆ ವಿಶೇಷತೆ?
ಕೊಂಕಣ ಎಜುಕೇಶನ್ ಟ್ರಸ್ಟ್ ನ ಪದಾಧಿಕಾರಿಗಳು, ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿ, ಪ್ರಾಂಶುಪಾಲ ಕಿರಣ ಭಟ್ಟ, ಹಾಗೂ ಉಪನ್ಯಾಸಕ ವರ್ಗ ವಿದ್ಯಾರ್ಥಿಗಳ ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.