ಶಿರಸಿ: ಉಚಿತ ಬಸ್ ಪ್ರಯಾಣವನ್ನೇ ಬಂಡವಾಳವನ್ನಾಗಿಸಿಕೊಂಡ ಖತರ್ನಾಕ್ ಕಳ್ಳಿಯರು (Thieves) ಇದೀಗ ಹೊರ ಜಿಲ್ಲೆಯಿಂದ ಆಗಮಿಸಿ ಕಳ್ಳತನ (Theft) ನಡೆಸಿದ್ದು, ಶಿರಸಿ ನಗರದ ಜ್ಯುವೆಲ್ಲರಿ ಶಾಪ್‌ನಲ್ಲಿ (Jewellery Shop) ತಮ್ಮ ಕೈಚಳಕ ತೋರಿಸಿ, ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಚಿನ್ನಾಭರಣ ಖರೀದಿ ಮಾಡುವ ಸೋಗಿನಲ್ಲಿ ಜ್ಯುವೆಲ್ಲರಿ ಶಾಪ್‌ನಲ್ಲಿ ತಮ್ಮ ಕೈಚಳಕ ತೋರಿದ ಚಾಲಾಕಿ ಮಹಿಳೆಯರು ಬಂಗಾರದ ಅಂಗಡಿಯಲ್ಲಿ ಕಳ್ಳತನ ಮಾಡಿ ಸಿಕ್ಕಿ ಬಿದ್ದಿದ್ದಾರೆ.
ಇದನ್ನೂ ಓದಿ: Weather Report: ಕರಾವಳಿಯಲ್ಲಿ ಮುಂದುವರಿದ ಮಳೆಯಾಟ; ಒಳನಾಡಿನಲ್ಲಿ ಕೊಂಚ ಬ್ರೇಕ್
ಶಿರಸಿ ನಗರದ ಮಾರುಕಟ್ಟೆ ಸಮೀಪವಿರುವ ಓಂಕಾರ ಜ್ಯುವೆಲ್ಲರಿ ಶಾಪ್‌ನಲ್ಲಿ ಕಳ್ಳತನ ಮಾಡಿದ್ದು, ಚಿನ್ನಾಭರಣ ಖರೀದಿ ಮಾಡುವ ಸೋಗಿನಲ್ಲಿ ಅಂಗಡಿ ನುಗ್ಗಿದ ಕಳ್ಳಿಯರು 93 ಸಾವಿರ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದರು. ಜ್ಯುವೆಲ್ಲರಿ ಶಾಪಲ್ಲಿ ತಮ್ಮ ಕೈಚಳಕ ತೋರಿದ್ದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ಗದಗ ಮೂಲದ ಸಂಗೀತಾ(42) ಶೋಭಾಬಾಯಿ(63) ಹುಬ್ಬಳಿ ಮೂಲದ ರಾಜೇಶ್ವರಿ (48) ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದು, ಈದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಡಿಎಸ್ಪಿ ಕೆ.ಎಲ್. ಗಣೇಶ್ ಮಾರ್ಗದರ್ಶನದಲ್ಲಿ ಪಿಎಸ್‌ಐ ರಾಜಕುಮಾರ ಎಸ್. ಉಕ್ಕು ತನಿಖೆ ಕೈಗೊಂಡಿದ್ದಾರೆ. ಈ ಕುರಿತು ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Yoga Day 2023: ಸೂರ್ಯ ನಮಸ್ಕಾರ… ಎಷ್ಟೊಂದು ಸಮಸ್ಯೆಗಳಿಗೆ ಪರಿಹಾರ!
ಘಟನೆಯ ಹಿನ್ನೆಲೆ ಏನು?
ಕಳೆದ ಜೂನ್ 15ರಂದು ಗದಗದಿಂದ ಆಗಮಿಸಿದ್ದ ಮೂವರು ಖತರ್ನಾಕ್ ಕಳ್ಳಿಯರು ಚಿನ್ನಾಭರಣ ಖರೀದಿ ಮಾಡುವ ನೆಪದಲ್ಲಿ ಶಿರಸಿಯ ಉರ್ದು ಶಾಲೆ ಪಕ್ಕದ ಮಾರುಕಟ್ಟೆಯಲ್ಲಿರುವ ಓಂಕಾರ ಜ್ಯುವೆಲ್ಲರಿ ಶಾಪ್‌ಗೆ ಬಂದಿದ್ದಾರೆ. ಸುಮಾರು ಮದ್ಯಾಹ್ನ 2 ಗಂಟೆಗೆ ಆಗಮಿಸಿದ ಕಳ್ಳಿಯರು ಚಿನ್ನಾಭರಣ ನೋಡುವ ನೆಪದಲ್ಲಿ ಮಾಲೀಕರನ್ನ ಯಾಮಾರಿಸಿ ಚಿನ್ನ- ಬೆಳ್ಳಿಯನ್ನ ಕಳ್ಳತನ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದರು. ನಂತರ ಓಂಕಾರ ಜ್ಯುವೆಲ್ಲರಿ ಶಾಪ್ ಮಾಲೀಕ ನಾಗೇಶ್ ನಾಯ್ಕ ಅಂಗಡಿಯಲ್ಲಿನ ಚಿನ್ನಾಭರಣ ಪರಿಶೀಲಿಸಿದಾಗ ಚಿನ್ನಾಭರಣ ಕಳುವಾದ ಮಾಹಿತಿ ಸಿಕ್ಕಿದೆ. ನಂತರ ಸಿಸಿ ಕ್ಯಾಮರಾ ದೃಶ್ಯ ಚೆಕ್ ಮಾಡಿದ ನಾಗೇಶ್ ಕೂಡಲೇ ಕಳ್ಳಿಯರ ಕೈಚಳಕ ಗಮನಿಸಿದ್ದಾರೆ. ಕೂಡಲೇ ಬೆನ್ನಟ್ಟಿದ್ದ ಮಾಲೀಕ ನಾಗೇಶ್ ಶಿರಸಿ ಹಳೇ ಬಸ್‌ಸ್ಟಾಂಡ್ ನಲ್ಲಿ ಚಿನ್ನಾಭರಣ ಸಹಿತ ರೆಡ್ ಹ್ಯಾಂಡಾಗಿ ಹಿಡಿದಿದ್ದರು. ನಂತರ ಸಾರ್ವಜನಿಕರು ಜಮಾಯಿಸಿ ಖತರ್ನಾಕ್ ಕಳ್ಳಿಯರನ್ನ ಪೊಲೀಸರಿಗೆ ಒಪ್ಪಿಸಿದ್ದರು. ಘಟನೆಯನ್ನ ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ನಡೆಸಿ ಮೂವರು ಮಹಿಳಾ ಆರೋಪಿಗಳನ್ನು ಬಂಧಿಸಿದ್ದಾರೆ.