ಕಾರವಾರ: ಸರ್ಕಾರ (Government) ನೀಡಿರುವ ಅನುದಾನವನ್ನು (Grants) ಅವಶ್ಯಕತೆ ಇರುವ ಕಡೆ ಮತ್ತು ಉಪಯೋಗವಾಗುವ ರೀತಿಯಲ್ಲಿ ಯೋಜನೆ ಕೈಗೊಳ್ಳಲು ಸರ್ಕಾರದ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಬಾಭವನದಲ್ಲಿ ಆಯೋಜಿಸಲಾಗಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರ ನೀಡಿರುವ ಅನುದಾನವನ್ನು ಅಗತ್ಯವಿರುವ ಕಾಮಗಾರಿ, ದುರಸ್ಥಿ, ಸಾಮಗ್ರಿಗಳಿಗೆ ಮತ್ತು ಸಾರ್ವಜನಿಕರಿಗೆ ಉಪಯೋಗವಾಗುವ ರೀತಿಯಲ್ಲಿ ಅನುದಾನ ಉಪಯೋಗಿಸಲು ಸೂಚಿಸಿದರು.
ಇದನ್ನೂ ಓದಿ: Team India : ಭಾರತ ಮಹಿಳೆಯರ ತಂಡದ ಮಾಜಿ ವೇಗದ ಬೌಲರ್‌ಗೆ ವಿಶ್ವ ಕ್ರಿಕೆಟ್‌ನ ವಿಶೇಷ ಗೌರವ
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯವರಿಂದ 2023-24 ಸಾಲಿನಲ್ಲಿ ಕೈಗೊಂಡಿರುವ ಕ್ರಿಯಾ ಯೋಜನೆಯ ಮಾಹಿತಿಯನ್ನು ಪಡೆದುಕೊಂಡು ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯಪುಸ್ತಕ, ಊಟ, ಹಾಲು, ಮೊಟ್ಟೆ ಸರಿಯಾದ ಸಮಯಕ್ಕೆ ನೀಡಲು ಹಾಗೆಯೇ ಶೇ.100ರಷ್ಟು ಎಲ್ಲಾ ಶಾಲೆಗಳಲ್ಲಿ ಮಕ್ಕಳು ಕುಳಿತುಕೊಳ್ಳಲು ಡೆಸ್ಕ್ ಮತ್ತು ಬೆಂಚ್ ಕಲ್ಪಿಸಲು ಸೂಚಿಸಿದರು. ಈಗಾಗಲೇ ಎಷ್ಟು ಡೆಸ್ಕ್ ಮತ್ತು ಬೆಂಚ್ ಇವೆ ಎಂಬುವುದನ್ನು ಅಧಿಕಾರಿಗಳಿಗೆ ಮಾಹಿತಿ ನೀಡಲು ಹೇಳಿದರು.
ಬಳಿಕ ತೋಟಗಾರಿಕೆ ಇಲಾಖೆಯಿಂದ 2023-24ರ ಸಾಲಿನಲ್ಲಿ ಕೈಗೊಡಿರುವ ಕ್ರಿಯಾ ಯೋಜನೆಯ ಮಾಹಿತಿಯನ್ನು ಪಡೆದುಕೊಂಡು, ಹೊಲಿಗೆ ಯಂತ್ರದ ಬೇಡಿಕೆ ಮತ್ತು ಬಳಕೆ ಕಡಿಮೆಯಾಗಿರುವುದರಿಂದ ಈ ಯೋಜನೆ ಬದಲಾಗಿ ಮೊಬೈಲ್ ರಿಪೇರಿ ಕಿಟ್, ಕಂಪ್ಯೂಟರ್ ರಿಪೇರಿ ಕಿಟ್, ಬ್ಯೂಟಿ ಪಾರ್ಲರ್ ಕಿಟ್ ಈ ರೀತಿಯ ಉಪಯೋಗವಾಗುವಂತಹ ಯೋಜನೆಯ ನೀಡಲು ಸೂಚಿಸಿದರು.
ಇದನ್ನೂ ಓದಿ: Capital Investment Fund: ಬಂಡವಾಳ ಹೂಡಿಕೆಗೆ ಕೇಂದ್ರದಿಂದ ಕರ್ನಾಟಕಕ್ಕೆ 3,647 ಕೋಟಿ ರೂ. ವಿಶೇಷ ಅನುದಾನ ಮಂಜೂರು
ಇಲಾಖಾವಾರು 2023-24ನೇ ಸಾಲಿನಲ್ಲಿ ಕೈಗೊಂಡಿರುವ ಕ್ರಿಯಾಯೋಜನೆಯ ಮಾಹಿತಿಯನ್ನು ಪತ್ರಿಕೆ, ವೆಬ್ ಸೈಟ್ ಮೂಲಕ ಸಾರ್ವಜನಿಕರಿಗೆ ತಿಳಿಸಲು ಸೂಚಿಸಿದರು. ತಾವು ಕೈಗೊಂಡಿರುವ ಯೋಜನೆಯನ್ನು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳ ಜತೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲು ಹೇಳಿದರು.
ಬಳಿಕ ವಯಸ್ಕರ ಶಿಕ್ಷಣ ಇಲಾಖೆ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆಯುಷ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ತೋಟಗಾರಿಕೆ ಇಲಾಖೆ, ಮೀನುಗಾರಿಕೆ ಇಲಾಖೆ, ಪಶು ಸಂಗೋಪನೆ ಇಲಾಖೆ, ಜವಳಿ ಇಲಾಖೆ, ರೇಷ್ಮೆ ಇಲಾಖೆ, ಕೃಷಿ ಮಾರುಕಟ್ಟೆ ಹಾಗೂ ಇತರೆ ಇಲಾಖೆಯವರಿಂದ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಕೈಗೊಂಡಿರುವ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
ಇದನ್ನೂ ಓದಿ: PMFBY Scheme : ಅಡಿಕೆ, ಕಾಳುಮೆಣಸಿಗೆ ಇಲ್ಲವೇ ಬೆಳೆ ವಿಮೆ?; ಬೆಳೆಗಾರರ ಆತಂಕ
ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಈಶ್ವರ ಕುಮಾರ ಕಾಂದೂ, ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ, ಪ್ರೊಬೆಷನರಿ ಐಎಎಸ್ ಅಧಿಕಾರಿ ಜುಬಿನ್ ಮಹಾಪಾತ್ರ, ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.