Site icon Vistara News

Road Accident: ಆಟೋ ರಿಕ್ಷಾಕ್ಕೆ ಗೂಡ್ಸ್‌ ಲಾರಿ ಡಿಕ್ಕಿ: 6 ಜನರಿಗೆ ಗಂಭೀರ ಗಾಯ

A lorry collided with a rickshaw near Shetageri Cross Passenger seriously injured at ankola

ಅಂಕೋಲಾ: ಆಟೋ ರಿಕ್ಷಾಕ್ಕೆ (Auto rickshaw) ಮೀನು (Fish) ತುಂಬಿದ ಗೂಡ್ಸ್ ಲಾರಿ (Goods Lorry) ಡಿಕ್ಕಿ ಹೊಡೆದ ಪರಿಣಾಮ ಆರು ಜನ ಗಂಭೀರವಾಗಿ ಗಾಯಗೊಂಡ (Seriously injured) ಘಟನೆ ರಾ.ಹೆ. 66 ರ ಶೆಟಗೇರಿ ಕ್ರಾಸ್ ಬಳಿ ನಡೆದಿದೆ.

ಆಟೋ ರಿಕ್ಷಾ ಚಾಲಕ ತಾಲೂಕಿನ ಪೂಜಗೇರಿ ನಿವಾಸಿ ವಿನೋದ ಚುಡಾಮಣಿ ಗಾವ್ಕಂರ (46) ಮತ್ತು ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮುಂಬೈ ನಿವಾಸಿಗಳಾದ ಪರೇಶ ಪ್ರಭಾಕರ ಶೊಯೆನ್ (50) ಅವರ ಪತ್ನಿ ಭಾಗ್ಯಶ್ರೀ ಶೊಯೆನ (42) ಮಕ್ಕಳಾದ ಶಶಾಂಕ (16) ಗೌರಂಗ (10) ಸಂಬಂಧಿ ಮೀರಾ ನಂದಕುಮಾರ (77) ಎನ್ನುವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಅಂಕೋಲಾ ಕಡೆ ಹೋಗುತ್ತಿದ್ದ ಆಟೋರಿಕ್ಷಾಕ್ಕೆ ಹಿಂದಿನಿಂದ ಅತಿ ವೇಗದಲ್ಲಿ ಬಂದ ಮೀನು ತುಂಬಿದ ಲಾರಿ ಡಿಕ್ಕಿ ಹೊಡೆದಿರುವುದೇ ಈ ಅಪಘಾತಕ್ಕೆ ಕಾರಣವೆನ್ನಲಾಗಿದೆ,

ಅಪಘಾತದ ಸಂದರ್ಭದಲ್ಲಿ ಎರಡು ವಾಹನಗಳು ಜಖಂಗೊಂಡಿವೆ. ಮೀನು ಲಾರಿ ಚಾಲಕ ಕೇರಳ ಕಣ್ಣೂರು ನಿವಾಸಿ ಮಹಮ್ಮದ್ ಹಸೀಮ್ ಎಂಬಾತನ ಮೇಲೆ ದೂರು ದಾಖಲಾಗಿದ್ದು, ಪಿಎಸ್ಐ ಸುನಿಲ್ ಹುಳ್ಳೊಳ್ಳಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

Exit mobile version