ಸಿದ್ದಾಪುರ: ಪ್ರಯಾಣಿಕರನ್ನು (passengers) ಅಡ್ಡಗಟ್ಟಿ ದರೋಡೆ (robbery) ನಡೆಸುತ್ತಿದ್ದ ಇಬ್ಬರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ (Police) ಒಪ್ಪಿಸಿರುವ ಘಟನೆ ಸಿದ್ದಾಪುರ ತಾಲೂಕಿನ ತಟ್ಟಿಕೈ ಕಂಚಿಕೈ ಬಳಿ ಜರುಗಿದೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ತಟ್ಟಿಕೈ ಕಂಚಿಕೈ ಬಳಿ ಚಾಕು ತೋರಿಸಿ ದರೋಡೆಗೆ ಯತ್ನಿಸುತ್ತಿರುವಾಗ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಶಿರಸಿ ಬನವಾಸಿ ರಸ್ತೆಯ ಹಂಚಿನಕೇರಿಯ ಶಹೀದ್ ಇಸ್ಮಾಯಿಲ್ ಶೇಖ್, ಶಿವಮೊಗ್ಗ ಟಿಪ್ಪು ನಗರದ ಇರ್ಫಾನ್ ಪಾಷಾ ಎಂಬುವವರೇ ಬಂಧಿತ ಆರೋಪಿಗಳು.
ಶಿರಸಿಯಲ್ಲಿ ಬೈಕ್ ಅಪಹರಿಸಿದ್ದ ಇಬ್ಬರು ಆರೋಪಿಗಳು, ಶಿರಸಿ-ಕುಮಟಾ ನಡುವೆ ದೇವಿಮನೆ ಘಟ್ಟದಲ್ಲಿ ಕೋಳಿ ಸಾಗಿಸುತ್ತಿದ್ದ ವಾಹನ ತಡೆದು ಹಣ ಕಿತ್ತುಕೊಂಡಿದ್ದರು ಎನ್ನಲಾಗಿದೆ, ನಂತರ ಸಿದ್ದಾಪುರ ತಟ್ಟಿಕೈ ಕಂಚಿಕೈ ಬಳಿ, ಬೈಕ್ ಪ್ರಯಾಣಿಕರಿಗೆ ಚಾಕು ತೋರಿಸಿ ದರೋಡೆಗೆ ಯತ್ನಿಸುತ್ತಿರುವಾಗ ಸ್ಥಳೀಯರು ಹಿಡಿದು, ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.