Site icon Vistara News

Banavasi News : ಬಿಜೆಪಿ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದ ಕಾರ್ಮಿಕ ಸಚಿವ ಶಿವರಾಮ್‌ ಹೆಬ್ಬಾರ್

#image_title

ಬನವಾಸಿ : ಕರ್ನಾಟಕದ ವಿಧಾನಸಭಾ ಚುನಾವಣೆ ಸನ್ನಿಹಿತವಾಗುತ್ತಿರುವಂತೆಯೇ ಎಲ್ಲೆಡೆ ಪಕ್ಷಗಳ ಕೆಲಸ ಜೋರಾಗಿ ನಡೆಯುತ್ತಿದೆ. ಅದೇ ರೀತಿ ಸೋಮವಾರದಂದು ಬನವಾಸಿ ಹೋಬಳಿಯ ಬದನಗೋಡ ಮಹಾಶಕ್ತಿ ಕೇಂದ್ರದ ವ್ಯಾಪ್ತಿಯ ಬಿಸ್ಲಕೊಪ್ಪ ಹಾಗೂ ಬಂಕನಾಳದಲ್ಲಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌ ಅವರು ಬಿಜೆಪಿ ಕಾರ್ಯಕರ್ತರ ಸಭೆ (Banavasi News) ನಡೆಸಿದರು.

ಈ ವೇಳೆ ಮಾತನಾಡಿದ ಸಚಿವರು, “ಬನವಾಸಿ ಹೋಬಳಿಯಲ್ಲಿ ನಮ್ಮ ಅಪಾರ ಕಾರ್ಯಕರ್ತರ ಪಡೆಯೇ ಇದೆ. ಪಕ್ಷಕ್ಕಾಗಿ ಅವರು ನಿಷ್ಠಾವಂತರಾಗಿ ಯಾವುದೇ ಪ್ರತಿಫಲಾಪೇಕ್ಷೆ ಬಯಸದೆ ಕೆಲಸ ಮಾಡುತ್ತಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ಜನರಿಗೆ ತಲುಪಿಸುತ್ತಾರೆ. ಅವರಿಗೆ ನಾವೆಲ್ಲ ಧನ್ಯವಾದಗಳನ್ನು ತಿಳಿಸೋಣ” ಎಂದರು.

ಇದನ್ನೂ ಓದಿ: Banavasi News: ಬನವಾಸಿಯ ಕೃಷಿ ಅಧಿಕಾರಿ ಡಿ.ಜಿ. ಪಟಗಾರ ನಿವೃತ್ತಿ; ಸಿಬ್ಬಂದಿಯಿಂದ ಆತ್ಮೀಯ ಬೀಳ್ಕೊಡುಗೆ
ಸಭೆಯಲ್ಲಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರು, ಶಕ್ತಿ ಕೇಂದ್ರದ ಅಧ್ಯಕ್ಷರು, ಬೂತ್‌ ಅಧ್ಯಕ್ಷರು, ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳು, ಸ್ಥಳೀಯ ಪ್ರಮುಖರು, ಗ್ರಾಮ ಪಂಚಾಯಿತಿ ಸದಸ್ಯರು, ವಿವಿಧ ಮೋರ್ಚಾದ ಪದಾಧಿಕಾರಿಗಳು, ಶಕ್ತಿ ಕೇಂದ್ರದ ಪ್ರಮುಖರು ಉಪಸ್ಥಿತರಿದ್ದರು.

Exit mobile version