ಬನವಾಸಿ: ಬನವಾಸಿ ಅರಣ್ಯ ವಲಯದ ದಾಸನಕೊಪ್ಪ ಶಾಖೆಯ ಹೆಬ್ಬತ್ತಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಾಡುಹಂದಿ (Wild boar) ಬೇಟೆ ಯಾಡಿ, ಮಾಂಸ ತಯಾರಿಸಿ (Banavasi News) ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬನವಾಸಿ ವಲಯ ಅರಣ್ಯಾಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.
ಕಳೆದ ಜೂ.16ರಂದು ಕಾಡುಹಂದಿ ಬೇಟೆ ಯಾಡಿ ಮಾಂಸ ತಯಾರಿಸಿ ಪರಾರಿಯಾಗಿದ್ದರು. ಅರಣ್ಯ ಇಲಾಖೆ ಆರೋಪಿಗಳ ಪತ್ತೆಗೆ ಒಂದು ತಂಡವನ್ನು ರಚಿಸಿ, ಕಾರ್ಯಾಚರಣೆ ಕೈಗೊಂಡಾಗ ಸಂತೊಳ್ಳಿ ಗ್ರಾಮದ ಬಸವರಾಜ ಯಲ್ಲಪ್ಪ ಚನ್ನಯ್ಯ ಹಾಗೂ ಉಮೇಶ ಚನ್ನಪ್ಪ ಚನ್ನಯ್ಯ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: Ballari News: ಕಂಪ್ಲಿಯ ದೇವಸಮುದ್ರ ಗ್ರಾಮದಲ್ಲಿ ಎರಡು ಕರಡಿ ಪ್ರತ್ಯಕ್ಷ!
ವಲಯ ಅರಣ್ಯಾಧಿಕಾರಿ ವರದಾ ರಂಗನಾಥ ಜಿ.ಎಚ್ ಅವರ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿ ಕಾರ್ತಿಕ ನಾರ್ವೆಕರ್, ಗಸ್ತು ಅರಣ್ಯ ಪಾಲಕರಾದ ದಯಾನಂದ ಬೊರ್ಕರ್, ಸಿದ್ದಪ್ಪ ನಾವಿ, ಅರಣ್ಯ ವೀಕ್ಷಕರಾದ ಚಂದ್ರು ಗೌಡ, ಗಿರೀಶ ಕುರುಬರ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.