Site icon Vistara News

Bhatkala News: ರಸ್ತೆಯಲ್ಲಿ ಸಿಕ್ಕಿತು 30 ಗ್ರಾಂ ಚಿನ್ನಾಭರಣ; ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಯುವಕ

#image_title

ಕಾರವಾರ: ಇತ್ತೀಚೆಗೆ ಕಳ್ಳತನ, ವಂಚನೆಗಳಂತಹ ಪ್ರಕರಣಗಳು ಹೆಚ್ಚಾಗಿವೆ. ಹೀಗಿರುವಾಗ ಮುರ್ಡೇಶ್ವರದಲ್ಲಿ ಯುವಕನೊಬ್ಬ ರಸ್ತೆ ಮೇಲೆ ಸಿಕ್ಕ ಪರ್ಸ್‌ ಅನ್ನು ಅದರ ವಾರಸುದಾರರಿಗೆ ವಾಪಸ್‌ ಮರಳಿಸಿ, ಪ್ರಾಮಾಣಿಕತೆ (Bhatkala News) ಮೆರೆದಿದ್ದಾನೆ.

ಗಣೇಶ್‌ ನಾಯ್ಕ ಹೆಸರಿನ ಯುವಕನಿಗೆ ಭಟ್ಕಳದ ಮುರ್ಡೇಶ್ವರ ನಾಡವರ ಕೇರಿ ರಸ್ತೆಯಲ್ಲಿ ರಾತ್ರಿ ವೇಳೆ ನಡೆದುಕೊಂಡು ಹೋಗುವಾದ ಪರ್ಸ್‌ ಒಂದು ಸಿಕ್ಕಿದೆ. ಅದರಲ್ಲಿ ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣವಿತ್ತು. ಒಟ್ಟಾರೆಯಾಗಿ 12 ಉಂಗುರ ಹಾಗೂ 2 ಜೊತೆ ಕಿವಿ ಓಲೆಗಳು ಆ ಪರ್ಸ್‌ನಲ್ಲಿದ್ದು, ಒಟ್ಟು ಚಿನ್ನದ ತೂಕ ಅಂದಾಜು 30 ಗ್ರಾಂನಷ್ಟಾಗಿತ್ತು. ಈ ವೇಳೆ ಆಸುಪಾಸು ಯಾರೂ ಕಾಣದಿದ್ದಾಗ ಅದನ್ನು ತೆಗೆದುಕೊಂಡು ಯುವಕ ನೇರವಾಗಿ ಮುರ್ಡೇಶ್ವರ ಪೊಲೀಸ್‌ ಠಾಣೆಗೆ ತೆರಳಿ ಪೊಲೀಸರಿಗೆ ನೀಡಿದ್ದಾನೆ.

ಬಳಿಕ ಪೊಲೀಸರು ಚಿನ್ನ ಕಳೆದುಕೊಂಡ ವಾರಸುದಾರ ಜೋಸೆಫ್ ಡಿಸೋಜ ಅವರನ್ನು ಪತ್ತೆ ಹಚ್ಚಿದ್ದಾರೆ. ಜತೆಗೆ ಪೊಲೀಸ್ ಠಾಣೆಗೆ ಯುವಕನನ್ನು ಕರೆಸಿ ಆತನ ಮೂಲಕ ಜೋಸೆಫ್‌ ಅವರಿಗೆ ಬಂಗಾರವನ್ನು ಹಸ್ತಾಂತರಿಸಿದ್ದಾರೆ.

ಇದನ್ನೂ ಓದಿ: Murdeshwar News | ಮುರ್ಡೇಶ್ವರದಲ್ಲಿಲ್ಲ ಪಾರ್ಕಿಂಗ್‌ ವ್ಯವಸ್ಥೆ; ಸಮುದ್ರದ ಅಲೆ ನಡುವೆ ಸಿಲುಕಿತು ಟೆಂಪೋ

ಈ ವೇಳೆ ಗಣೇಶ ಈಶ್ವರ ನಾಯ್ಕನ ಪ್ರಾಮಾಣಿಕತೆಗೆ ಮುರ್ಡೇಶ್ವರ ಪೊಲೀಸ್ ಠಾಣೆ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಗಿದೆ.

Exit mobile version