Site icon Vistara News

Yellapura News : ಯಲ್ಲಾಪುರದಲ್ಲಿ ಕಾರು ಬಸ್ ನಡುವೆ ಡಿಕ್ಕಿ, ಪಲ್ಟಿಯಾದ ಬಸ್‌

ಅಪಘಾತಕ್ಕೊಳಗಾದ ಬಸ್ಸು

ಯಲ್ಲಾಪುರ : ಇನೋವಾ ಕಾರು ಹಾಗೂ ಖಾಸಗಿ ಬಸ್ ನಡುವೆ ಡಿಕ್ಕಿ ಸಂಭವಿಸಿ ಬಸ್ ಪಲ್ಟಿಯಾಗಿದೆ. ಯಲ್ಲಾಪುರ ತಾಲೂಕಿನ ಆರತಿಬೈಲ್ ಕ್ರಾಸ್ ಬಳಿ (Yellapura News) ಶನಿವಾರ ಬೆಳಗ್ಗೆ ಈ ಘಟನೆ ನಡೆದಿದೆ.

ಪ್ರವಾಸಕ್ಕೆಂದು ಯಲ್ಲಾಪುರ ಕಡೆಯಿಂದ ಗೋಕರ್ಣಕ್ಕೆ ಹೋಗುತ್ತಿದ್ದ ಖಾಸಗಿ ಬಸ್ ಹಾಗೂ ಮಂಗಳೂರಿನಿಂದ ಮುಂಬೈ ಕಡೆ ಚಲಿಸುತ್ತಿದ್ದ ಇನೋವಾ ಕಾರ್‌ ನಡುವೆ ಅಪಘಾತವಾಗಿದೆ. ಅಪಘಾತದಿಂದಾಗಿ ಖಾಸಗಿ ಬಸ್ ಹೆದ್ದಾರಿಯ ಪಕ್ಕದಲ್ಲಿ ಪಲ್ಟಿಯಾಗಿ ಬಿದ್ದಿದೆ. ಅದೃಷ್ಟವಶಾತ್‌ ಬಸ್‌ನಲ್ಲಿದ್ದ 40ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಹಾರಾಷ್ಟ್ರದಿಂದ ಪ್ರವಾಸಿಗರು ಖಾಸಗಿ ಬಸ್ ಮೂಲಕ ಗೋಕರ್ಣ ಪ್ರವಾಸಕ್ಕೆ ಬಂದಿದ್ದರು ಎನ್ನಲಾಗಿದೆ.

ಇದನ್ನೂ ಓದಿ: Karnataka Election 2023: ಮೂಡಿಗೆರೆ ಕ್ಷೇತ್ರಕ್ಕೆ ಅನುದಾನ ತರಲು ಬಾಂಬೆ, ಡೆಲ್ಲಿಗೆ ಹೋಗುತ್ತೇನೆ: ನಯನ ಮೋಟಮ್ಮ
ಇನೋವಾ ಕಾರನಲ್ಲಿದ್ದವರು ಮಂಗಳೂರಿನಿಂದ ಕುಟುಂಬ ಸಮೇತರಾಗಿ ಮುಂಬೈಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಘಟನೆಯಲ್ಲಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Exit mobile version