ಯಲ್ಲಾಪುರ: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಯಲ್ಲಾಪುರ ತಾಲೂಕ ಸಮಿತಿ ವತಿಯಿಂದ ಫೆ.4 ರಂದು ಜಿಲ್ಲಾ ಮಟ್ಟದ ಓಪನ್ ರ‍್ಯಾಪಿಡ್ ಚೆಸ್ (Chess) ಪಂದ್ಯಾವಳಿಯನ್ನು ಮೂರು ವಿಭಾಗಳಲ್ಲಿ ಆಯೋಜಿಸಲಾಗಿದೆ ಎಂದು ಕರಾಅಪವಿಗು ಸಂಘದ ತಾಲೂಕಾಧ್ಯಕ್ಷ ವೇಣುಗೋಪಾಲ ಮದ್ಗುಣಿ ತಿಳಿಸಿದರು.
ಬುಧವಾರ ಸಂಘದ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ನಾಮಕರಣಗೊಂಡು 50 ವರ್ಷವಾದ ಹಿನ್ನಲೆಯಲ್ಲಿ ವರ್ಷಪೂರ್ತಿ ಪ್ರತಿ ತಿಂಗಳು ಒಂದು ಕಾರ್ಯಕ್ರಮ ಆಯೋಜಿಲಾಗುತ್ತಿದ್ದು, ಈ ತಿಂಗಳು ವಿದ್ಯುತ್ ಗುತ್ತಿಗೆದಾರರಾಗಿದ್ದ ವಿನೋದ್ ಪಾಟೀಲ್ ಅವರ ಸ್ಮರಣಾರ್ಥ ಚೆಸ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಎ.ಪಿ.ಎಂ.ಸಿ ಆವರಣದ ಮಾರ್ಕೆಟಿಂಗ್ ಸೊಸೈಟಿಯ ಸಭಾಭವನದಲ್ಲಿ ಈ ಪಂದ್ಯಾವಳಿ ನಡೆಯಲಿದ್ದು, 12 ವರ್ಷದ ಒಳಗೆ, 16 ವರ್ಷದ ಒಳಗೆ, 16 ವರ್ಷ ಮೇಲ್ಪಟ್ಟವರಿಗೆ 3 ಹಂತಗಳಲ್ಲಿ ಸ್ಪರ್ಧೆ ನಡೆಯಲಿದೆ. ಒಟ್ಟು ಮೊದಲ ಬಂದ 150 ಪ್ರವೇಶಾರ್ಥಿಗಳಿಗೆ ಆದ್ಯತೆ ನೀಡಲಾಗುವುದು ಎಂದರು.
ಇದನ್ನೂ ಓದಿ: Rahul Dravid: ಅಯ್ಯರ್,ಇಶಾನ್ ಅಶಿಸ್ತು ವಿಚಾರದಲ್ಲಿ ಸ್ಪಷ್ಟನೆ ನೀಡಿದ ಕೋಚ್ ದ್ರಾವಿಡ್
ಅಂತಾರಾಷ್ಟ್ರೀಯ ಚೆಸ್ ಪಟು ರಾಮಚಂದ್ರ ಭಟ್ ಮಾತನಾಡಿ, ಪೈಡ ಲಾ ಮತ್ತು ಸ್ವಿಸ್ ಲೀಗ್‌ನ ಇತ್ತೀಚಿನ ನಿಯಮಗಳ ಪ್ರಕಾರ ಸ್ಪರ್ಧೆಗಳು ನಡೆಸಲಾಗುವುದು. 12 ಮತ್ತು 16 ವರ್ಷದೊಳಗಿನ ಪಂದ್ಯಗಳ ವಿಜೇತರಿಗೆ ಟ್ರೋಫಿ ಹಾಗೂ 16 ವರ್ಷ ಮೇಲ್ಪಟ್ಟ ಪಂದ್ಯದ ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು. ಅಂತೆಯೇ ಭಾಗವಹಿಸಿದ ಎಲ್ಲ ಕ್ರೀಡಾಪಟುಗಳಿಗೆ ಮೆಡಲ್ ಹಾಗೂ ಪ್ರಮಾಣ ಪತ್ರ ನೀಡಲಾಗುವುದು ಎಂದರು.
ನೋಂದಣಿಗಾಗಿ ಆನಂದ ಸ್ವಾಮಿ : 8762480128 ಸಂಪರ್ಕಿಸಬಹುದು ಹಾಗೂ ಹೆಚ್ಚಿನ ಮಾಹಿತಿಗಾಗಿ ವೇಣುಗೋಪಾಲ ಮದ್ಗುಣಿ : 9448408602, ರಾಮಚಂದ್ರ ಭಟ್ಟ : 9481360128 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: Hardware Business : ಹಾರ್ಡ್‌ವೇರ್ ಬಿಸಿನೆಸ್ ಆರಂಭಿಸೋದು ಹೇಗೆ, ಬಂಡವಾಳ ಎಷ್ಟು ಬೇಕು, ಲಾಭ ಎಷ್ಟು?
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಎ.ಎಂ.ಶೇಖ್, ಉಪಾಧ್ಯಕ್ಷ ಸತೀಶ ಹೆಗಡೆ, ಚೆಸ್ ತರಬೇತುದಾರ ಆನಂದ ಸ್ವಾಮಿ ಇದ್ದರು.