Site icon Vistara News

Vishwadarshana School | ಹಿರಿಯ ನಾಗರಿಕರ ಗೌರವಿಸುವುದು ಎಲ್ಲರ ಕರ್ತವ್ಯ; ಗೋಪಾಲಕೃಷ್ಣ ತಾಂಡೂರಾಯನ್

Vishwadarshana School

ಯಲ್ಲಾಪುರ: ಇಂದಿನ ಯುವಕರು ಹಾಗೂ ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಇರಬೇಕು. ಇದಕ್ಕಾಗಿ ಹಿರಿಯರ ಮಾರ್ಗದರ್ಶನ ಬೇಕಿದ್ದು, ಅವರ ಸಲಹೆ, ಸೂಚನೆ ನಮ್ಮನ್ನು ಸರಿದಾರಿಯಲ್ಲಿ ನಡೆಸಲು ಸಹಕಾರಿಯಾಗಲಿದೆ (Vishwadarshana School) ಎಂದು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಗೋಪಾಲಕೃಷ್ಣ ತಾಂಡೂರಾಯನ್ ತಿಳಿಸಿದರು.

ಪಟ್ಟಣದ ವಿಶ್ವದರ್ಶನ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ನಮ್ಮ ಹಿರಿಯರನ್ನು ಸದಾ ಗೌರವದಿಂದ ನಡೆಸಿಕೊಳ್ಳಬೇಕು. ಹಿರಿಯರು ಈ ದೇಶದ ಆಸ್ತಿಯಾಗಿದ್ದು, ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು, ಉಪನ್ಯಾಸಕರು, ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು. ಪ್ರಶಿಕ್ಷಣಾರ್ಥಿಗಳಾದ ಮುಸ್ಕಾನ್ ಶೇಖ್ ಸ್ವಾಗತಿಸಿದರು. ಪ್ರಶಾಂತ್ ಅಣ್ವೇಕರ್ ವಂದಿಸಿದರು. ಶಿವಪ್ರಸಾದ್ ಭಟ್ ನಿರ್ವಹಣೆ ಮಾಡಿದರು.

ಇದನ್ನೂ ಓದಿ | Krishna Janmashtami | ವಿಟ್ಲಪಿಂಡಿಯೊಂದಿಗೆ ಉಡುಪಿ ಕೃಷ್ಣಜನ್ಮಾಷ್ಟಮಿ ಸಂಭ್ರಮ ಸಂಪನ್ನ

Exit mobile version