Site icon Vistara News

ವೇದವ್ಯಾಸರ ಮಾರ್ಗದಲ್ಲಿ ನಡೆದರೆ ಸಮಸ್ತರಿಗೂ ಶ್ರೇಷ್ಠತೆ ಸಾಧ್ಯ: ಉಮಾಕಾಂತ್‌ ಭಟ್‌

guru purnima 2022 at college

ಯಲ್ಲಾಪುರ: ಪ್ರಪಂಚದ ಕಷ್ಟವನ್ನು ನಿವಾರಿಸುವುದಕ್ಕೆ ಅನುಕೂಲವಾದ ಸತ್ಯವನ್ನು ಬಿಚ್ಚಿ ತೋರಿಸಿದವರು ಸರ್ವ ಪೂಜ್ಯ ಗುರುವ್ಯಾಸರು. ಇಹದ ಅನುಭವದ ವಿಸ್ತಾರವನ್ನು ಕಾವ್ಯ ಮತ್ತು ಪುರಾಣಗಳಲ್ಲಿ ಅವರು ಕಟ್ಟಿಕೊಟ್ಟಿದ್ದಾರೆ ಎಂದು ವಿದ್ಯಾವಾಚಸ್ಪತಿ ವಿದ್ವಾನ್ ಉಮಾಕಾಂತ್ ಭಟ್ ಹೇಳಿದ್ದಾರೆ.

ಪಟ್ಟಣದ ವಿಶ್ವದರ್ಶನ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಗುರುಪೂರ್ಣಿಮಾ ಕಾರ್ಯಕ್ರಮದಲ್ಲಿ ಪ್ರಧಾನ ಉಪನ್ಯಾಸಕರಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಪರ ಸಾಧನೆಗೆ ಬೇಕಾದ ಜ್ಞಾನವನ್ನು ವೇದಾಂತ ಮತ್ತು ಶಾಸ್ತ್ರಗಳಲ್ಲಿ ವಿವರಿಸಿ ವೇವವ್ಯಾಸರು ಲೋಕೋಪಕಾರ ಮಾಡಿದ್ದಾರೆ. ವ್ಯಾಸರ ಮಾರ್ಗದಲ್ಲಿ ನಡೆಯುವ ಸಮಸ್ತರಿಗೂ ಶ್ರೇಷ್ಠತೆ ಸಾಧ್ಯವಾಗುತ್ತದೆ ಎಂದು ಉಮಾಕಾಂತ್‌ ಭಟ್‌ ವಿವರಿಸಿದ್ದಾರೆ.

ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ನರಸಿಂಹ ಕೋಣೆಮನೆ ಮಾತನಾಡಿ, ವಿದ್ಯಾರ್ಥಿಗಳಿಗೆ ಹಿರಿಯರ ವ್ಯಕ್ತಿತ್ವವನ್ನು ಪರಿಚಯಿಸುತ್ತಾ ಅವರ ಬದುಕು ಹಿರಿದಾಗಲು ಸಹಕಾರ ನೀಡುವುದು ನಮ್ಮ ಸಂಸ್ಥೆಯ ಧ್ಯೇಯವಾಗಿದೆ ಎಂದರು.

ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಎಲ್ಲ ಅಂಗ ಸಂಸ್ಥೆಯಲ್ಲಿರುವ ಕಲಿಕಾ ಅವಕಾಶಗಳ ಪರಿಚಯ ಮಾಡಿಕೊಟ್ಟ ಅವರು, ಪಠ್ಯೇತರ ಚಟುವಟಿಕೆಗಳಾದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಸೇರಿದಂತೆ ಕರಾಟೆ, ಭರತನಾಟ್ಯ, ಚಿತ್ರಕಲೆ, ಸ್ಕೇಟಿಂಗ್, ಕುದುರೆ ಸವಾರಿ ಹೀಗೆ ಹಲವಾರು ಕಲಿಕೆಯ ಅವಕಾಶಗಳನ್ನು ಸೃಷ್ಟಿಸಲಾಗಿದೆ ಎಂದರು.

ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ದತ್ತಾತ್ರೇಯ ಗಾಂವ್ಕರ್, ವಿಜಯಶ್ರೀ ಗಾಂವ್ಕರ್, ಕವಿತಾ ಹೆಬ್ಬಾರ, ವಿನಾಯಕ್ ಭಟ್ ,ವಿವಿಧ ವಿಭಾಗಗಳ ಮುಖ್ಯಸ್ಥರು, ಹಿರಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ| ಸ್ವಚ್ಛ ವಿದ್ಯಾಲಯ ಪುರಸ್ಕಾರ ಪಡೆದ ಯಲ್ಲಾಪುರ ವಿಶ್ವದರ್ಶನ ಸೆಂಟ್ರಲ್ ಸ್ಕೂಲ್

Exit mobile version