Site icon Vistara News

Havyaka Samavesha | ಜಾತಿಗಳ ನಡುವೆ ಸಂಘರ್ಷ ಬೇಡ, ನಾವೆಲ್ಲ ಒಂದೇ ಎಂಬ ಭಾವ ಮೂಡಲಿ: ವಿಶ್ವೇಶ್ವರ ಹೆಗಡೆ ಕಾಗೇರಿ

Havyaka Samavesha

ಕಾರವಾರ: ಶಿಕ್ಷಣ ಕೇವಲ ಅಂಕ ಗಳಿಕೆಗೆ ಮಾತ್ರ ಸೀಮಿತವಾಗದೇ ಸಂಸ್ಕಾರವನ್ನು ಕಲಿಸುವ ಜತೆಗೆ ದೇಶ ಮೊದಲು ಎಂಬ ಭಾವ ಮೂಡಿಸಲು ಹವ್ಯಕ ಸಮಾವೇಶಗಳು (Havyaka Samavesha) ಕಾರಣವಾಗಬೇಕು ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಕುಮಟಾ ತಾಲೂಕಿನ ಗೋಗ್ರೀನ್ ಮೈದಾನದಲ್ಲಿ ಎಂ.ಜಿ.ಭಟ್ ಅವರ ನೇತೃತ್ವದ ಹವ್ಯಕ ಸೇವಾ ಪ್ರತಿಷ್ಠಾನದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಹವ್ಯಕ ಸಮಾವೇಶದಲ್ಲಿ ಮಾತನಾಡಿ, ನಮ್ಮ ಸಮಾಜ ಸೇರಿ ಎಲ್ಲ ಉಪ ಜಾತಿಗಳು ಒಗ್ಗೂಡಬೇಕು. ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು. ಜಾತಿಗಳ ನಡುವೆ ಸಂಘರ್ಷ ಬೇಡ. ನಾವೆಲ್ಲ ಒಂದೇ ಎಂಬ ಭಾವ ಮೂಡಬೇಕು ಎಂದರು.

ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿ ಆಶೀರ್ವಚನ ನೀಡಿ, ಕಾಲಕ್ಕೆ ತಕ್ಕಂತೆ ನಾವು ಹೊಂದಿಕೊಳ್ಳಬೇಕು. ಹವ್ಯಕರು ಎಲ್ಲಿಯೇ ಇರಲಿ ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸಿಕೊಂಡು ಮುಂದಿನ ತಲೆ ಮಾರಿಗೆ ದಾಟಿಸುವ ಕಾರ್ಯವಾಗಬೇಕು. ಸಂಘಟನೆಯ ಜತೆಗೆ ಸಂಸ್ಕಾರ ಉಳಿಸುವ ಕಾರ್ಯ ಹವ್ಯಕರಿಂದಾಗಬೇಕೆಂದು ನುಡಿದರು.

ಇದನ್ನೂ ಓದಿ | Kannada Sahitya Sammelana | ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಡಿ.17, 18ರಂದು ಧ್ವನಿ ಪರೀಕ್ಷೆ, ನೃತ್ಯ ಪರೀಕ್ಷೆ

ಹವ್ಯಕ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಎಂ.ಜಿ.ಭಟ್ ದಂಪತಿ, ಶ್ರೀಗಳ ಪಾದ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ವೇದ ಪಾರಂಗತ ವೈದಿಕರನ್ನು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಹವ್ಯಕ ಸಮಾವೇಶದ ನಿಮಿತ್ತ ಹವ್ಯಕರ ವಿಶೇಷ ಆಹಾರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ಕೃಷಿ ಉಪಕರಣಗಳ ಪ್ರದರ್ಶನ ಮತ್ತು ಮಾರಾಟ ಗಮನ ಸೆಳೆಯಿತು.

ಸಮಾವೇಶದ ವೇದಿಕೆಯಲ್ಲಿ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಜಿ.ಎಲ್.ಹೆಗಡೆ, ಹವ್ಯಕ ಮಹಾಸಭಾದ ರಾಜ್ಯಾಧ್ಯಕ್ಷ ಗಿರಿಧರ ಕಜೆ, ಪ್ರಮುಖರಾದ ಮಹಾಬಲೇಶ್ವರ ಹೆಗಡೆ, ಆರ್.ಎಂ.ಹೆಗಡೆ ಬಾಳೇಸರ್, ನಾಗರಾಜ ಭಟ್ ಬೆಂಗ್ರೆ, ಮಹೇಶ ಕಜೆ, ಆರ್.ಎಸ್.ಹೆಗಡೆ ಹರಗಿ, ಡಾ.ಜಿ.ಜಿ.ಹೆಗಡೆ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭುವನ ಭಾಗ್ವತ್, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕಾ ಇತರರು ಇದ್ದರು.

ಇದನ್ನೂ ಓದಿ | Buffalo race | ಕಂಬಳ, ಜಲ್ಲಿಕಟ್ಟುವಿಗೆ ಅವಕಾಶ ನೀಡಿದ ಆದೇಶ ಪ್ರಶ್ನಿಸಿದ ಮೇಲ್ಮನವಿ ವಿಚಾರಣೆ ಪೂರ್ಣ: ತೀರ್ಪು ಕಾಯ್ದಿರಿಸಿದ ಸುಪ್ರೀಂ

Exit mobile version