ಯಲ್ಲಾಪುರ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ “ಹೆಬ್ಬಾರ್ ಡ್ರೀಮ್ ಫೌಂಡೇಷನ್ ಆಫ್ ಚಾರಿಟಿ ಟ್ರಸ್ಟ್”(Hebbar Dream Foundation) ವತಿಯಿಂದ ಬುಧವಾರ ವಿದ್ಯಾರ್ಥಿಗಳಿಗೆ ʼಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮʼ ಹಮ್ಮಿಕೊಳ್ಳಲಾಗಿತ್ತು. ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರ ಪುತ್ರ ವಿವೇಕ್ ಹೆಬ್ಬಾರ್, ಕಾಲೇಜು ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುನಂದ ದಾಸ್ ಮಾತನಾಡಿ, ಸಚಿವ ಶಿವರಾಮ್ ಹೆಬ್ಬಾರ್ ಅವರ ಕುಟುಂಬದ ವತಿಯಿಂದ ಕಳೆದ 20 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಿಸಲಾಗುತ್ತಿದೆ. ಸಚಿವರ ಕುಟುಂಬ ಯಲ್ಲಾಪುರದ ಜೀವನಾಡಿಯಾಗಿದ್ದು, ಕ್ಷೇತ್ರದ ಆಮೂಲಾಗ್ರ ಅಭಿವೃದ್ಧಿ ಕಾರ್ಯಗಳಲ್ಲಿ ಅವರ ಕುಟುಂಬದ ಪಾತ್ರ ದೊಡ್ಡದಿದೆ ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಶಾಮಿಲಿ ಪಾಟಣ್ಕರ್, ಬಿಜೆಪಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಎನ್.ಗಾಂವ್ಕರ್, ಪ್ರಧಾನಕಾರ್ಯದರ್ಶಿ ಡಾ.ರವಿಭಟ್ಟ ಬರಗದ್ದೆ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಶಿರೀಷ್ ಪ್ರಭು, ಎಂ.ಎಸ್. ಭಟ್, ಪಟ್ಟಣ ಪಂಚಾಯಿತಿ ಸದಸ್ಯರಾದ ಸತೀಶ್ ಶಿವಾನಂದ ನಾಯ್ಕ್, ಅಮಿತ್ ಅಂಗಡಿ, ಮಾಜಿ ಸದಸ್ಯ ವಿನೋದ್ ತಳೇಕರ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಎಸ್.ಟಿ.ವೈದ್ಯ ಸ್ವಾಗತಿಸಿದರೆ, ಉಪನ್ಯಾಸಕ ಗಾಂವ್ಕರ್ ನಿರೂಪಿಸಿದರು. ಎಸ್.ಆರ್.ನಾಯಕ ವಂದಿಸಿದರು.
ಇದನ್ನೂ ಓದಿ | Dharmasthala Deepotsava | ಭೇದ ಸೃಷ್ಟಿಸದೇ ಏಕತೆ ಕಾಯ್ದುಕೊಳ್ಳಬೇಕು: ಡಾ.ವೀರೇಂದ್ರ ಹೆಗ್ಗಡೆ