ಶಿರಸಿ: ಅಕ್ರಮವಾಗಿ ಹಾಗೂ ಹಿಂಸಾತ್ಮಕವಾಗಿ ದನಗಳನ್ನು ಕಸಾಯಿ ಖಾನೆಗೆ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿ, ವಾಹನ ಸಮೇತ ದನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಓರ್ವ ಆರೋಪಿ ಪರಾರಿಯಾಗಿದ್ದಾನೆ.
ಹರೀಶ ರಾಜು ಮಡಿವಾಳ (೨೪) ನೆಗ್ಗು, ಪರಮೇಶ್ವರ ಬೈರಾಮ ಮಡಿವಾಳ (೪೦), ವರ್ಷ ನೆಗ್ಗು ಬಂಧಿತರು. ಖಾಸಿಂ ಹಾನಗಲ್(೪೦) ಎಂಬಾತ ಪರಾರಿಯಾಗಿದ್ದಾನೆ. ಶಿರಸಿ ತಾಲೂಕಿನ ಸಿರ್ಸಿಮಕ್ಕಿ ಗೋಳಿ ಕ್ರಾಸ್ ಬಳಿ ಹಾನಗಲ್ ಕಡೆಗೆ ವಾಹನದಲ್ಲಿ ಅಕ್ರಮವಾಗಿ ದನಗಳನ್ನು ಸಾಗಣೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿದ್ದರು.
ಬಂಧಿತ ಆರೋಪಿಗಳಿಂದ ಎರಡು ಹೋರಿಗಳು ಹಾಗೂ ಅವುಗಳನ್ನು ಸಾಗಾಟ ಮಾಡಲು ಬಳಸಿದ್ದ ಸುಮಾರು ೩ ಲಕ್ಷ ರೂಪಾಯಿ ಮೌಲ್ಯದ ವಾಹನವನ್ನು ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಡಿ.ಎಸ್.ಪಿ. ರವಿ ನಾಯ್ಕ ಮಾರ್ಗದರ್ಶನದಲ್ಲಿ ಸಿ.ಪಿ.ಐ. ರಾಮಚಂದ್ರ ನಾಯ್ಕ ನೇತೃತ್ವದಲ್ಲಿ ಪಿಎಸ್ಐ ಡಿ.ಎನ್. ಈರಯ್ಯ, ಸಿಬ್ಬಂದಿ ಮಹಾದೇವ ನಾಯ್ಕ, ಪ್ರದೀಪ ತೇವಣಕರ, ಗಣಪತಿ ನಾಯ್ಕ, ಜೆ.ಎನ್. ಚೇತನ, ಶ್ರೀಧರ ನಾಯ್ಕ, ಸಂಗಪ್ಪ, ಯು.ಡಿ. ಸುನೀಲ ಹಾಡಲಗಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ | ಗಂಗಾವಳಿ ನದಿ ರಭಸಕ್ಕೆ ಕೊಚ್ಚಿ ಹೋದ ಲಾರಿ; ಐವರ ರಕ್ಷಣೆ, ಓರ್ವ ನಾಪತ್ತೆ