Site icon Vistara News

Karnataka Election : ಉ.ಕನ್ನಡ ಜಿಲ್ಲೆಯಲ್ಲಿ ತಿಂಗಳೊಳಗೆ 2.8 ಕೋಟಿ ರೂ. ಮೌಲ್ಯದ ಮದ್ಯ, ವಾಹನ ವಶಕ್ಕೆ

#image_title

ಕಾರವಾರ: ಸಾರ್ವತ್ರಿಕ ವಿಧಾನಸಭಾ ಚುನಾವಣೆಯ (Karnataka Election) ನೀತಿ ಸಂಹಿತೆ ಜಾರಿಯಾದ ಮಾರ್ಚ್ 29ರಿಂದ ಏಪ್ರಿಲ್ 23ರವರೆಗೆ ಅಬಕಾರಿ ಇಲಾಖೆಯಿಂದ ಜಿಲ್ಲೆಯಾದ್ಯಂತ ಒಟ್ಟು 790 ದಾಳಿಗಳನ್ನು ನಡೆಸಲಾಗಿದೆ ಎಂದು ಅಬಕಾರಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಒಟ್ಟು 598 ಮೊಕದ್ದಮೆಗಳನ್ನು ದಾಖಲಿಸಿದ್ದು, 990 ಮಂದಿ ಆರೋಪಿಗಳನ್ನು ಬಂಧಿಸಿ, 1,259.240 ಲೀಟರ್ ಅಕ್ರಮ ಮದ್ಯ ಹಾಗೂ 40,172 ಲೀಟರ್ ಬಿಯರ್, 4,784.840 ಲೀಟರ್ ಗೋವಾ ರಾಜ್ಯದ ಮದ್ಯ ಮತ್ತು 15,500 ಲೀಟರ್ ಕಳ್ಳಭಟ್ಟಿ ಸಾರಾಯಿಯನ್ನು ವಶಪಡಿಸಿಕೊಳ್ಳಲಾಗಿದೆ. ಹಾಗೂ ಸುಮಾರು 1,757 ಲೀಟರ್ ಬೆಲ್ಲದ ಕೊಳೆಯನ್ನು ವಶಪಡಿಸಿಕೊಂಡು ನಾಶಪಡಿಸಲಾಗಿದೆ.

ಇದನ್ನೂ ಓದಿ: Karnataka Election : ಡಬಲ್‌ ಇಂಜಿನ್‌ ಸರ್ಕಾರ ಬರುವುದರಲ್ಲಿ ಅನುಮಾನವೇ ಇಲ್ಲ: ವಿಶ್ವೇಶ್ವರ ಹೆಗಡೆ ಕಾಗೇರಿ
ಅದೇ ರೀತಿ ಅಬಕಾರಿ ಸ್ವತ್ತುಗಳ ಸಾಗಾಟಕ ಸಂಬಂಧಿಸಿದಂತೆ 22 ದ್ವಿಚಕ್ರ ವಾಹನ, 7 ನಾಲ್ಕು ಚಕ್ರದ ಲಘು ವಾಹನ ಮತ್ತು ಐದು ವಾಹನಗಳನ್ನು ಜಪ್ತು ಮಾಡಲಾಗಿದೆ. ಜಪ್ತಿಯಾದ ಅಬಕಾರಿ ಸ್ವತ್ತುಗಳ ಹಾಗೂ ಅಂದಾಜು ಮೌಲ್ಯ 1,04,12,621 ರೂ. ಮತ್ತು ವಾಹನಗಳ ಅಂದಾಜು ಮೌಲ್ಯ 1,76,36,000 ರೂ.ಗಳಾಗಿದ್ದು, ಒಟ್ಟು ಮೌಲ್ಯ 2,80,48,621 ರೂ. ಆಗಿದೆ ಎಂದು ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version